Saturday, 5 June 2021

ಕಾರು ಢಿಕ್ಕಿ ಹೊಡೆಸಿ ಕೊಲೆ; ಬಿಜೆಪಿ ಬೆಂಬಲಿತ ಯಡಮೊಗೆ ಗ್ರಾಪಂ ಅಧ್ಯಕ್ಷ ಪೊಲೀಸ್ ವಶಕ್ಕೆ

ಕಾರು ಢಿಕ್ಕಿ ಹೊಡೆಸಿ ಕೊಲೆ; ಬಿಜೆಪಿ ಬೆಂಬಲಿತ ಯಡಮೊಗೆ ಗ್ರಾಪಂ ಅಧ್ಯಕ್ಷ ಪೊಲೀಸ್ ವಶಕ್ಕೆ

ಕುಂದಾಪುರ: ಕೊಳವೆ ಬಾವಿ ಪರವಾನಿಗೆ ವಿಚಾರಕ್ಕೆ ಸಂಬಂಧಿಸಿದ ಧ್ವೇಷದಲ್ಲಿ ವ್ಯಕ್ತಿಯೊಬ್ಬರನ್ನು ಗ್ರಾಪಂ ಅಧ್ಯಕ್ಷ ತನ್ನ ಕಾರು ಢಿಕ್ಕಿ ಹೊಡೆಸಿ ಕೊಲೆಗೈದಿದ್ದಾರೆ ಎನ್ನಲಾದ  ಘಟನೆ ಶನಿವಾರ ರಾತ್ರಿ ಯಡಮೊಗೆ ಗ್ರಾಪಂ ವ್ಯಾಪ್ತಿಯ ಹೊಸಬಾಳು ಎಂಬಲ್ಲಿ ನಡೆದಿದೆ.

ಹೊಸಬಾಳು ನಿವಾಸಿ ಉದಯ ಗಾಣಿಗ(40) ಕೊಲೆಯಾದ ವ್ಯಕ್ತಿ.

ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೋರ್‌ವೆಲ್‌ಗೆ ಪರಾವನಿಗೆ ನೀಡುವ ವಿಚಾರದಲ್ಲಿ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಇದೇ ಧ್ವೇಷದಲ್ಲಿ ಪ್ರಾಣೇಶ್ ಯಡಿಯಾಳ ತನ್ನ ಕಾರನ್ನು ಚಲಾಯಿಸಿ ಉದಯ ಗಾಣಿಗ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದರಿಂದ ಗಂಭೀರವಾಗಿ ಗಾಯಗೊಂಡ ಉದಯ ಗಾಣಿಗ ಆಸ್ಪತ್ರೆಗೆ ಸಾಗಿ ಸುವ ದಾರಿ ಮಧ್ಯೆ ಮೃತಪಟ್ಟರು. ಈ ವೇಳೆ ಆರೋಪಿ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದನು. ಬಳಿಕ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಹಾಗೂ ಇತರ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಉದಯ ಗಾಣಿಗ ಜಡ್ಕಲ್‌ನಲ್ಲಿ ಕೃಷಿ ಕೇಂದ್ರವನ್ನು ಹೊಂದಿದ್ದಾರೆನ್ನಲಾಗಿದೆ.

ಮೃತರು ಪತ್ನಿ, ಎರಡು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ


SHARE THIS

Author:

0 التعليقات: