Wednesday, 16 June 2021

ಮೈಕ್ರೋಸಾಫ್ಟ್ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಸತ್ಯ ನಡೆಲ್ಲಾ


ಮೈಕ್ರೋಸಾಫ್ಟ್ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಸತ್ಯ ನಡೆಲ್ಲಾ 

ಸ್ಯಾನ್ ಫ್ರಾನ್ಸಿಸ್ಕೋ : ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೈಕ್ರೊಸಾಫ್ಟ್ ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಡೆಲ್ಲಾ ಅವರನ್ನು ಬುಧವಾರ ತನ್ನ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಬುಧವಾರ ಹೆಸರಿಸಿದೆ. ನಡೆಲ್ಲಾ ಅವರನ್ನು ಮೈಕ್ರೋಸಾಫ್ಟ್ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

2014ರಲ್ಲಿ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ ಹುದ್ದೆ ವಹಿಸಿಕೊಂಡಿದ್ದ ಸತ್ಯ ನಡೆಲ್ಲಾ ಅವರು ಮೈಕ್ರೊಸಾಫ್ಟ್ ಸಂಸ್ಥೆ ಇತರ ಟೆಕ್ ದೈತ್ಯ ಸಂಸ್ಥೆಗಳಾದ ಆ್ಯಪಲ್ ಮತ್ತು ಗೂಗಲ್ ಇವುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸುವಲ್ಲಿ ಶ್ರಮಿಸಿ ಯಶಸ್ಸು ಸಾಧಿಸಿದ್ದರು.

53 ವರ್ಷದ ನಡೆಲ್ಲಾ ಅವರು ಕ್ಲೌಡ್ ಕಂಪ್ಯೂಟಿಂಗ್‍ಗೆ ಹೆಚ್ಚಿನ ಆದ್ಯತೆ ನೀಡಲು ಶ್ರಮಿಸುತ್ತಿದ್ದಾರೆ.

ಮೈಕ್ರೋಸಾಫ್ಟ್ ನ ನಿರ್ದೇಶಕ ಮಂಡಳಿ ಬುಧವಾರ ತಲಾ ಷೇರಿಗೆ 56 ಸೆಂಟ್ಸ್ ನಂತೆ ತ್ರೈಮಾಸಿಕ ಡಿವಿಡೆಂಡ್ ಘೋಷಿಸಿದ್ದು ಅದನ್ನು ಸೆಪ್ಟೆಂಬರ್ ತಿಂಗಳಲ್ಲಿ ಷೇರುದಾರರಿಗೆ ಪಾವತಿಸಲಿದೆ.


SHARE THIS

Author:

0 التعليقات: