Wednesday, 16 June 2021

ಬೈಕ್ ಸವಾರರಿಬ್ಬರು ಮೃತ್ಯು

ಬೈಕ್ ಸವಾರರಿಬ್ಬರು ಮೃತ್ಯು

ಮುಂಡಗೋಡ: ಬೋಲೆರೋ ಪಿಕ್‍ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಹುಡೇಲಕೊಪ್ಪ ಗ್ರಾಮ ಹತ್ತಿರ ಬುಧವಾರ ನಡೆದಿದೆ.

ರಾಜೇಶ ಚಲವಾದಿ(21) ಮತ್ತು ಶ್ರೀಕಾಂತ ವಡ್ಡರ ಮೃತಪಟ್ಟವರು.

ಬೋಲೆರೋ ಪಿಕ್‍ಅಪ್ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿತ್ತು ಹಾಗೂ ಬೈಕ್ ಸವಾರರು ಮುಂಡಗೋಡದಿಂದ ಪಾಳಾ ಗ್ರಾಮಕ್ಕೆ ತೆರಳುತ್ತಿದ್ದಾಗ ಈ  ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪಿಎಸೈ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ


 


SHARE THIS

Author:

0 التعليقات: