Friday, 25 June 2021

ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್ : ರಾಜ್ಯದಲ್ಲಿ ಅಪರೂಪದ `ಎನೆಕ್' ಕಾಯಿಲೆ ಪತ್ತೆ!

ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್ : ರಾಜ್ಯದಲ್ಲಿ ಅಪರೂಪದ `ಎನೆಕ್' ಕಾಯಿಲೆ ಪತ್ತೆ!

ದಾವಣಗೆರೆ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಎದುರಾಗಿದ್ದು, ದಾವಣಗೆರೆಯಲ್ಲಿ ಅಪರೂಪದ ಎನೆಕ್ ಎಂಬ ಕಾಯಿಲೆ ಪತ್ತೆಯಾಗಿದೆ.

ಅಕ್ಯುಟ್ ನೆಕ್ರೋಜೈಜಿಂಗ್ ಎನ್ಸೆಪಲೋಪತಿ ಎಂಬ ಕಾಯಿಲೆಯು ದಾವಣಗೆರೆಯ ಎಸ್‌ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ 13 ವರ್ಷದ ಮಗುವಿಗೆ ಇರುವುದು ಪತ್ತೆಯಾಗಿದೆ. ಈ ಮಗು ಕೋವಿಡ್ ನಿಂದ ಗುಣಮುಖವಾಗಿದ್ದು, ಮತ್ತೆ ಎನೆಕ್ ಎಂಬ ಕಾಯಿಲೆಗೆ ತುತ್ತಾಗಿದೆ. ದಾವಣಗೆರೆಯ ಎಸ್‌ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನವರ ನೇತೃತ್ವದ ವೈದ್ಯರ ತಂಡ ಎನೆಕ್ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದೆ ಎನ್ನಲಾಗಿದೆ.


SHARE THIS

Author:

0 التعليقات: