Friday, 25 June 2021

ಅಕ್ರಮ ಹಣ ವರ್ಗಾವಣೆ ಪ್ರಕರಣ : ಅನಿಲ್ ದೇಶ್ ಮುಖ್ ಆಪ್ತ ಕಾರ್ಯದರ್ಶಿ, ಸಹಾಯಕನನ್ನು ಬಂಧಿಸಿದ ಇ.ಡಿ


ಅಕ್ರಮ ಹಣ ವರ್ಗಾವಣೆ ಪ್ರಕರಣ : 
ಅನಿಲ್ ದೇಶ್ ಮುಖ್ ಆಪ್ತ ಕಾರ್ಯದರ್ಶಿ, 
ಸಹಾಯಕನನ್ನು ಬಂಧಿಸಿದ ಇ.ಡಿ

ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್​ ದೇಶ್​ಮುಖ್​ ವಿರುದ್ಧ ಮನಿ ಲಾಂಡಂರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ), ಇಂದು 11 ಗಂಟೆಗೆ ದೇಶ್ಮುಖ್​ ಅವರನ್ನು ವಿಚಾರಣೆಗೆ ಕರೆಸಿದೆ. ನಿನ್ನೆಯ ದಿನ ದೇಶ್​ಮುಖ್​ರ ವಿವಿಧ ನಿವಾಸಗಳಿಗೆ ತೆರಳಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳಿಗೆ 12 ಬಾರ್​ ಮಾಲೀಕರಿಂದ 4 ಕೋಟಿ ರೂ.ಗಳನ್ನು ಪಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ನಿನ್ನೆ ದೇಶ್​ಮುಖ್​ ಅವರ ಪಿಎ ಕುಂದನ್​ ಶಿಂದೆ ಮತ್ತು ಪಿಎಸ್​ ಸಂಜೀವ್​ ಪಾಲಂಡೆ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಬಂಧನಕ್ಕೊಳಪಡಿಸಿದ್ದಾರೆ. ಪ್ರಿವೆಂಷನ್ ಆಫ್​ ಮನಿ ಲಾಂಡಂರಿಂಗ್​ ಆಯಕ್ಟ್​(ಪಿಎಂಎಲ್​​ಎ)ನ ಅಡಿಯಲ್ಲಿ ಬಂಧಿಸಲಾಗಿರುವ ಇವರನ್ನು ಇಂದು ವಿಶೇಷ ಪಿಎಂಎಲ್​ಎ ಕೋರ್ಟ್​ನ ಮುಂದೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.

ದೇಶ್​ಮುಖ್​ ಅವರ ನಾಗ್ಪುರ ಮನೆ ಮತ್ತು ಮುಂಬೈನ ವೊರ್ಲಿ ಮತ್ತು ಮಲಾಬಾರ್​ ಹಿಲ್​ಗಳಲ್ಲಿರುವ ಎರಡು ಮನೆಗಳಿಗೆ ಇಡಿ ಅಧಿಕಾರಿಗಳು ಹೋಗಿ ತನಿಖೆ ನಡೆಸಿದ್ದಾರೆ. ಶಿಂದೆ ಮತ್ತು ಪಾಲಂಡೆ ಅವರ ಮನೆಗಳಿಗೂ ತೆರಳಿ ರೇಡ್​ ನಡೆಸಿದ ನಂತರ ಇಬ್ಬರನ್ನೂ ದಕ್ಷಿಣ ಮುಂಬೈನಲ್ಲಿರುವ ಇಡಿ ಕಛೇರಿಗೆ ವಿಚಾರಣೆಗೆ ಕರೆತಂದು, ಆನಂತರ ಅವರನ್ನು ಬಂಧನಕ್ಕೊಳಪಡಿಸಲಾಯಿತು ಎನ್ನಲಾಗಿದೆ.

ಮಾಜಿ ಸಹಾಯಕ ಇನ್ಸ್​ಪೆಕ್ಟರ್​ ಸಚಿನ್ ವಾಜ್​​ 12 ಬಾರ್​ಗಳ ಮಾಲೀಕರಿಂದ ಸುಮಾರು 4 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರು. ಈ ಹಣವನ್ನು ದೇಶ್​ಮುಖ್​ರ ಹತ್ತಿರದ ಸಂಬಂಧಿಗೆ ಸೇರಿದ ಮಹಾರಾಷ್ಟ್ರದ ಹೊರಗಿನ ಶೆಲ್ ಕಂಪನಿಗಳ ಮೂಲಕ ದೇಶ್​ಮುಖ್​ ಅವರಿಗೆ ವರ್ಗಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ. ದೇಶ್​ಮುಖ್​ ಅವರನ್ನು ಬಂಧನಕ್ಕೊಳಪಡಿಸಲು ಸಾಕಷ್ಟು ಸಾಕ್ಷ್ಯಗಳು ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ.




SHARE THIS

Author:

0 التعليقات: