Sunday, 27 June 2021

ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಚಾಮರಾಜನಗರ: ಚಾಮರಾಜನಗರ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣ. ರಾಜ್ಯ ಬಿಜೆಪಿ ಸರ್ಕಾರ 36 ಜನರನ್ನು ಕೊಲೆ ಮಾಡಿದೆ. ಆಕ್ಸಿಜನ್ ಇಲ್ಲದೇ ಸಾವನ್ನಪ್ಪುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚಾಮರಾಜನಗರಕ್ಕೆ ಸಿಎಂ ಬರುವ ಧೈರ್ಯ ಮಾಡುತ್ತಿಲ್ಲ. ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯ. ಆಕ್ಸಿಜನ್ ದುರಂತದಿಂದ 36 ಜನರು ಸಾಯಲು ರಾಜ್ಯ ಸರ್ಕಾರ ಕಾರಣವಾಗಿದೆ. ಹಾಗಾಗಿ ಚಾಮರಾಜನಗರಕ್ಕೆ ಬಂದರೆ ಜನ ಹೊಡೆಯುತ್ತಾರೆ ಎಂಬ ಭಯ ಅವರಿಗಿದೆ. ಹಾಗಾಗಿ ಇಲ್ಲಿಗೆ ಅವರು ಬರುತ್ತಿಲ್ಲ ಎಂದರು.

ಗುಪ್ತಚರ ಇಲಾಖೆ ಕೂಡ ಅವರಿಗೆ ಮಾಹಿತಿಯನ್ನು ನೀಡಿದೆ. ಸಿಎಂ ಬಿ ಎಸ್ ವೈಗೆ ಜನ ಹೊಡೆಯುತ್ತಾರೆ ಎಂದು. ಅದಕ್ಕೆ ಭಯದಿಂದ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಜನ ಬೈಯುತ್ತಾರೆ. ತಪ್ಪು ಮಾಡಿದ ಮೇಲೆ ಬೈಸಿಕೊಳ್ಳಲೇಬೇಕು ಎಂದು ಟಾಂಗ್ ನೀಡಿದರು.


SHARE THIS

Author:

0 التعليقات: