ಇಶಾಅತುಸುನ್ನ ವಾಚನ ದಿನ ಕ್ಯಾಂಪೈನ್ ಗಮನಾರ್ಹ
ಪುತ್ತಿಗೆ: ಇಶಾಅತುಸ್ಸುನ್ನ ಮುಹಿಮ್ಮಾತ್ ಸ್ಟೂಡೆಂಟ್ ಯೂನಿಯನ್ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ವಾಚನ ದಿನವನ್ನು ಪ್ರೌಢವಾಗಿ ಆಚರಿಸಿತು.
ಓದುವಿಕೆಯ ಸಂದೇಶವಾಗಿ ಹಲವಾರು ಕಾರ್ಯಕ್ರಮಗಳು ನಡೆಯಿತು.
ಗ್ರಂಥಾಲಯಕ್ಕಿರುವ ಪುಸ್ತಕ ಶೇಖರಣೆಯ ಉದ್ಘಾಟನೆಯನ್ನು
ಎಸ್.ಎಸ್.ಎಫ್ ಕೇರಳ ರಾಜ್ಯ ಅಧ್ಯಕ್ಷರಾದ ಕೆ ವೈ ನಿಝಾಮುದ್ದೀನ್ ಫಾಳಿಲಿ ನಡೆಸಿದರು.
ನನ್ನ ಪುಸ್ತಕ ಲೋಕ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಗ್ರಂಥಾಲಯಗಳನ್ನು ತಯಾರಿಸಿದರು.
ಹಲವಾರು ಪುಸ್ತಕಗಳ ನಿರೂಪಣೆಯೊಂದಿಗೆ ನಾನು ಓದಿದ ಪುಸ್ತಕ ಎಂಬ 'ಹ್ಯಾಷ್ ಟಾಗ್' ಫೇಸ್ಬುಕ್ಕಿನಲ್ಲಿ ತರಂಗವನ್ನು ಸೃಷ್ಟಿಸಿತು. ಪುಸ್ತಕ ಪರಿಚಯ ಚರ್ಚಾ ವೇದಿಕೆಯಲ್ಲಿ ಎಸ್.ಎಸ್.ಎಫ್ ಕೇರಳ ರಾಜ್ಯ ಸೆಕ್ರೆಟರಿ ಕೆ.ಬಿ ಬಶೀರ್ ತ್ರಿಶೂರ್ ಹಾಗೂ ಡಾ.ಹನೀಫ್ ಅಮ್ಜದಿ ನೇತೃತ್ವ ವಹಿಸಿದರು. ಪ್ರಸ್ತುತ ಕಾರ್ಯಕ್ರಮ ರಂಶಾದ್ ಸ್ವಾಗತಿಸಿದರು ಹಾಗೂ ಔಫ್ ಕೊಡಿಯಮ್ಮ ಧನ್ಯವಾದ ಸಲ್ಲಿಸಿದರು.
0 التعليقات: