Wednesday, 2 June 2021

ಭಾರತ ಬಿಟ್ಟು ಅಮೆರಿಕ ಪರ ಆಡಲಿರುವ ಸ್ಮಿತ್‌ ಪಟೇಲ್‌

ಭಾರತ ಬಿಟ್ಟು ಅಮೆರಿಕ ಪರ ಆಡಲಿರುವ ಸ್ಮಿತ್‌ ಪಟೇಲ್‌

ಅಹ್ಮದಾಬಾದ್‌: 2012ರ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸ್ಟಾರ್‌ ಆಟಗಾರನಾಗಿಯೂ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫ‌ಲರಾದ ಸ್ಮಿತ್‌ ಪಟೇಲ್‌ ಈಗ ಅಮೆರಿಕ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬಿಸಿಸಿಐ ವ್ಯಾಪ್ತಿಯ ಎಲ್ಲ ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದಾರೆ.

“ಇದು ದಿಢೀರ್‌ ನಿರ್ಧಾರವೇನಲ್ಲ. ಕಳೆದ ಒಂದೂವರೆ ತಿಂಗಳಿಂದ ಭಾರತದಲ್ಲಿ ನನಗೆ ಕ್ರಿಕೆಟ್‌ ಭವಿಷ್ಯ ಇದೆಯೇ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದಕ್ಕೆ ಎರಡು ಮುಖ್ಯ ಕಾರಣಗಳೂ ಇವೆ. ಕಳೆದ 8 ವರ್ಷಗಳಿಂದ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾದೆ. ಆದರೆ ಸಾಧ್ಯವಾಗಲಿಲ್ಲ. ಹಾಗೆಯೇ ನಾನು ಕುಟುಂಬದವರೊಂದಿಗೆ ಉಳಿಯ ಬಯಸಿದ್ದೇನೆ. ನನ್ನ ಹೆತ್ತವರು ಕಳೆದ 11 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ’ ಎಂದು ಕೀಪರ್‌ ಕಂ ಬ್ಯಾಟ್ಸ್‌ಮನ್‌ ಆಗಿರುವ ಸ್ಮಿತ್‌ ಪಟೇಲ್‌ ಹೇಳಿದರು.


SHARE THIS

Author:

0 التعليقات: