Friday, 11 June 2021

ಈಶ್ವರಮಂಗಲ ತ್ವೈಬ ಸೆಂಟರ್ ವತಿಯಿಂದ ಆಂಬುಲನ್ಸ್ ಸೇವೆಗೆ ಚಾಲನೆ


ಈಶ್ವರಮಂಗಲ ತ್ವೈಬ ಸೆಂಟರ್ ವತಿಯಿಂದ ಆಂಬುಲನ್ಸ್ ಸೇವೆಗೆ ಚಾಲನೆ 

 ಪುತ್ತೂರು : ತ್ವೈಬಾ ಸೆಂಟರ್ ವತಿಯಿಂದ ಈಶ್ವರಮಂಗಲ ಸುನ್ನೀ ಸಂಘ ಕುಟುಂಬಗಳಾದ KMJ, SYS, SSF, KCF ಇದರ ಸಹಯೋಗದಲ್ಲಿ

 "ಸಹಕಾರವೇ ಮನುಕುಲದ ಅಸ್ತಿತ್ವ" ಎಂಬ ಶೀರ್ಷಿಕೆಯೊಂದಿಗೆ ಈಶ್ವರಮಂಗಲ ದಲ್ಲಿ  ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ಸಜ್ಜುಗೊಂಡಿತು.

 ತ್ವೈಬಾ ಸೆಂಟರ್  ಸಾರಥಿ ಹಾಗೂ  ಸುನ್ನಿ ಸಂಘಟನೆಗಳ ನೇತಾರಾ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ಕಣ್ಣವಂ ತಂಙಳ್ ರವರು ಆಂಬುಲನ್ಸ್ ಲೋಕಾರ್ಪಣೆ ಮಾಡಿ ದುಆಶಿರ್ವಚನ ನಡೆಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಅನಿತಾ ಹೇಮನಾಥ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ,

ಈಶ್ವರಮಂಗಳ ಪರಿಸರದಲ್ಲಿ ತ್ವೈಬಾ ಸೆಂಟರ್ ಕೇಂದ್ರೀಕೃತವಾಗಿ SSF, SYS & KMJ ಮಾಡುತ್ತಿರುವ ಹಲವಾರು ಸಾಮಾಜಿಕ ಸೇವೆಗಳು ನನ್ನ ಗಮನಕ್ಕೆ ಬಂದಿದೆ ಹಾಗೂ ಅದು ಅಭಿನಂದನಾರ್ಹ ಕಾರ್ಯವಾಗಿದೆ ಎಂದು ನುಡಿದರು.

ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ ರವರು ಮಾತನಾಡಿ ನಮ್ಮ ಈಶ್ವರಮಂಗಲ ಪರಿಸರದ ಸಂಘಟನೆಗಳ ಪ್ರಯತ್ನದಿಂದ ಇವತ್ತು ಒಂದು ಆಂಬುಲೆನ್ಸ್ ನಮ್ಮ ಊರಿಗೆ ಸಮರ್ಪಣೆ ಮಾಡಿದ್ದಾರೆ ಇದು ಹೆಮ್ಮೆಯ ವಿಷಯ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ ಎಂದರು.

ಈಶ್ವರಮಂಗಳದಲ್ಲಿ SSF & SYS  ನಡೆಸುವ ಸೇವೆಗಳನ್ನು ನಾನು ಸ್ವತಹ ನೋಡಿದವನಾಗಿದ್ದೇನೆ ಅಲ್ಲದೆ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುವುದರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಶ್ರೀರಾಮ್ ಪಕ್ಕಲ ರವರು ಹೇಳಿದರು. ಪಂಚಾಯತ್ ಉಪಾಧ್ಯಕ್ಷರಾದ ಫೌಸಿಯಾ ಇಬ್ರಾಹಿಂ ಹಾಗೂ ಪಂಚಾಯತ್ ಸದಸ್ಯರುಗಳಾದ ರಾಮ ಮೇನಾಲ  ಇಬ್ರಾಹಿಂ ಪಲ್ಲತ್ತೂರು ಶುಭಾಶಯ ಕೋರಿದರು. ನೆ.ಮುಡ್ನೂರು ಪಂಚಾಯತ್ ಕಾರ್ಯದರ್ಶಿ ಕಮಲ್ ರಾಜ್ ಮಾತನಾಡಿ ಸಂಘಟನೆ ಕಳೆದ ವರ್ಷ ಕೋವಿಡ್ 19 ಲೋಕ್ಡೌನ್  ಸಂದರ್ಭದಲ್ಲಿ ನಮ್ಮ ಈಶ್ವರಮಂಗಲ ವ್ಯಾಪ್ತಿಯಲ್ಲಿ ನಡೆಸಿದ ತುರ್ತು ಕಾರ್ಯಾಚರಣೆಯನ್ನು  ವಿವರಿಸಿ ಇಂತಹ ಒಳ್ಳೆಯ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತ್ವೈಬಾ ಸೆಂಟರ್ ಕಾರ್ಯಾಧ್ಯಕ್ಷರಾದ ಹಂಝ ಮುಸ್ಲಿಯಾರ್, KMJ ಈಶ್ವರಮಂಗಳ ಅಧ್ಯಕ್ಷರಾದ ಅಬೂಬಕ್ಕರ್ ಕರ್ನೂರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ, SYS ಜಿಲ್ಲಾ ಸದಸ್ಯರುಗಳಾದ   ಅಬ್ದುಲ್ ಅಝೀಝ್ ಮಿಸ್ಬಾಹಿ, ಹನೀಫ್ ಹಾಜಿ ಗಾಳಿಮುಖ, ಈಶ್ವರಮಂಗಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯ್ಲಾ, SYS ಇಸಾಬ ಟೀಂ ಅಮೀರ್ ಇಸ್ಮಾಯಿಲ್ ಕೆ.ಎಚ್, SSF ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ, ಪಂಚಾಯತ್ ಸದಸ್ಯರಾದ ಶಂಸುದ್ದೀನ್ ಬಿಸಿ, ಹಾಗೂ ಅಬ್ದುರ್ರಹ್ಮಾನ್ ಮೇನಾಲ, ಖಾದರ್ ಕರ್ನೂರ್, ಪಿ ಎಂ‌ ಖಾದರ್ ಹಾಜಿ, ಅಬ್ದುಲ್ಲಾಹ್ ಕುಂಜ್ಞಿ ಮೆನಸಿನಕಾನ ತ್ವಾಹ ಸ ಅದಿ ಬಿಸಿ, ಉಮ್ಮರ್ ಸ ಆದಿ, ಸಂಸುದ್ದೀನ್ ಹನೀಫಿ, ತಕಿಯುದ್ದೀನ್ ಮದನಿ, ಇಬ್ರಾಹಿಂ ಮದನಿ, ಶರೀಫ್ ಪಿಎಚ್, ಸಿದ್ದಿಕ್ ಪಾಲಡ್ಕ, ಝಕರಿಯ ಸಕಾಫಿ ಹಾಗೂ ಇನ್ನಿತರ ಸುನ್ನಿ ಕುಟುಂಬದ ನೇತಾರರು  ಹಿತೈಷಿಗಳು ಭಾಗವಹಿಸಿದ್ದರು.

ಸಿ.ಕೆ ಅಹ್ಮದ್ ನಈಮಿಯವರು ಸ್ವಾಗತಿಸಿದ ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಮಿಸ್ಬಾಹಿಯವರು ವಂದಿಸಿದರು.


SHARE THIS

Author:

0 التعليقات: