Monday, 14 June 2021

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ತಹ್ಸೀನ್ ಮುತಅಲ್ಲಿಂ ಸಂಗಮ


ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ತಹ್ಸೀನ್ ಮುತಅಲ್ಲಿಂ ಸಂಗಮ

ಸುರತ್ಕಲ್ ಜೂ 18: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ದಅವಾ ವಿದ್ಯಾರ್ಥಿಗಳಿಗಾಗಿ "ತಹ್ಸೀನ್" ಮುತಅಲ್ಲಿಂ ಸಂಗಮವು ಜೂನ್ 19 ಹಾಗೂ 20ರಂದು ಗೂಗುಲ್ ಮಿಟ್ ಮೂಲಕ, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ   ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎರಡು ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಎಸ್ಸೆಸ್ಸೆಫ್  ದ.ಕ ಜಿಲ್ಲೆ ವೆಸ್ಟ್ ದಅವಾ ಕನ್ವೀನರ್ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ  ಮರ್ಕಝ್ ಮುದರ್ರಿಸ್ ಮುಹಮ್ಮದ್ ಸಖಾಫಿ ಪರವೂರ್ ಮಲಪ್ಪುರಂ ಕೇರಳ, ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ವಿವಿಧ ವಿಷಯಗಳಲ್ಲಿ ತರಗತಿ ಮಂಡಿಸಲಿದ್ದಾರೆಂದು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ದಅವಾ ಕಾರ್ಯದರ್ಶಿ ಮುಹಮ್ಮದ್ ಸಿನಾನ್ ಸಖಾಫಿ , 3ನೇ ಬ್ಲಾಕ್ ಕಾಟಿಪಳ್ಳ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: