ಇರಾಕ್, ಸಿರಿಯಾ ಮೇಲೆ ಅಮೆರಿಕ ವಾಯುದಾಳಿ
ವಾಷಿಂಗ್ಟನ್: ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರರ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯ ಮೇಲೆ ಸೋಮವಾರ ನಸುಕಿನಲ್ಲಿ ಅಮೆರಿಕ ವಾಯುಪಡೆ ಮೂರು ವಾಯುದಾಳಿಗಳನ್ನು ನಡೆಸಿದೆ.
ಅಮೆರಿಕದ ಸೇನೆ ಇರುವ ಪ್ರದೇಶಗಳಲ್ಲಿ ಇತ್ತೀಚೆಗೆ ಸಶಸ್ತ್ರ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.
"ಇರಾಕ್- ಸಿರಿಯಾ ಗಡಿ ಪ್ರದೇಶದಲ್ಲಿ ಇರಾನ್ ಬೆಂಬಲಿತ ಉಗ್ರ ಗುಂಪುಗಳು ಹೊಂದಿದ್ದ ಸೌಲಭ್ಯಗಳ ಮೇಲೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ನಿರ್ದೇಶನದ ಮೇರೆಗೆ ಅಮೆರಿಕ ಮಿಲಿಟರಿ ಪಡೆಗಳು ರಕ್ಷಣಾತ್ಮಕ ನಿಖರ ವಾಯುದಾಳಿ ನಡೆಸಿವೆ" ಎಂದು ಪೆಂಟಗಾನ್ ವಕ್ತಾಋ ಜಾನ್ ಎಫ್.ಕಿರ್ಬಿ ಪ್ರಕಟನೆಯಲ್ಲಿ ಹೇಳಿದ್ದಾರೆ.
ಕತೈಬ್ ಹಿಝ್ಬುಲ್ಲಾ ಮತ್ತು ಕತೈಬ್ ಸೈಯಿದ್ ಅಲ್ ಶುಹದಾ ಸೇರಿದಂತೆ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಅಮೆರಿಕನ್ನರು ವಾಸವಿರುವ ಪ್ರದೇಶದ ಮೇಲೆ ಡ್ರೋನ್ ದಾಳಿ ನಡೆಸಲು ಬಳಸುತ್ತಿದ್ದ ಸೌಲಭ್ಯಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಕಿರ್ಬಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶದಲ್ಲಿ ವಾಯುದಾಳಿಗೆ ಬೈಡೆನ್ ಆದೇಶಿಸಿರುವುದು ಇದು ಎರಡನೇ ಬಾರಿ. ಕಳೆದ ಫೆಬ್ರವರಿಯಲ್ಲಿ ಪೂರ್ವ ಸಿರಿಯಾದಲ್ಲಿ ಅಮೆರಿಕ ವಾಯುದಾಳಿ ನಡೆಸಿತ್ತು.
0 التعليقات: