Sunday, 6 June 2021

ನಾಳೆಯ ನೆರಳಿಗಾಗಿ , ನಾಡಿನ ಉಳಿವಿಗಾಗಿ


ನಾಳೆಯ ನೆರಳಿಗಾಗಿ , ನಾಡಿನ ಉಳಿವಿಗಾಗಿ

✍️ಅಮೀನ್ ಕೊಳಕೆ

( ಮುಹಿಮ್ಮಾತ್ ವಿಧ್ಯಾರ್ಥಿ)

ವೃದ್ಧನೋರ್ವ ಗಿಡವನ್ನು ನೆಡುವುದನ್ನು ಕಂಡ  ಯುವಕ ನಗುತ್ತಾ "ಯಾರಿಗಾಗಿ ನೆಡುತ್ತಿದ್ದೀಯ ? ಈ ಗಿಡ ಮರವಾಗಿ ಬೆಳೆಯುವಾಗ ನೀನು ಬದುಕಿರುವೆಯಾ? " ಎಂದು ಕೇಳಿದ. ವೃದ್ಧ" ಇದು ನಾನು ನನಗಾಗಿ ನೆಡುತ್ತಿಲ್ಲ ಬದಲಾಗಿ ನನ್ನ ಪರಿಸರಕ್ಕಾಗಿ,ನನ್ನ ಸಮಾಜಕ್ಕಾಗಿ, ಈ ಜಗತ್ತಿಗಾಗಿ, ಇನ್ನು ಬರುವ ನನ್ನ ತಲೆಮಾರಿಗಾಗಿ ನಾನಿದನ್ನು ನೆಡುತ್ತಿದ್ದೇನೆ" ಎಂದ.ಇದನ್ನು  ಕೇಳುತ್ತಾ ಯುವಕ ವೃದ್ಧನ  ಪರಿಸರ ಬೋದ ಕಂಡು ಅದ್ಭುತ ಗೊಂಡ.

     ಇಲ್ಲಿ ಈ ವೃದ್ಧನಿಗಿದ್ದ ಪರಿಸರ ಬೋಧ ನಮಗೂ ಇರಬೇಕು. "ನಾಳೆ ಅಂತ್ಯ ದಿನ ವಾಗುತ್ತದೆ ಎಂದು ನಿನಗೆ ಖಚಿತವಾದರೂ ಇಂದು ನಿನ್ನ ಕೈಯಲ್ಲೊಂದು ಸಸಿ ಇದ್ದರೆ ಅದನ್ನು ನೆಡಬೇಕು" ಎಂಬ ಪ್ರವಾದಿ ಸಂದೇಶವು ಪರಿಸರದ ಜೊತೆ ನಾವು ಇಡಬೇಕಾದ ಕನೆಕ್ಷನ್ ಎಷ್ಟೆಂದು ಎತ್ತಿ ತೋರಿಸುತ್ತದೆ.

    ಜೂನ್ 5 ವಿಶ್ವ ಪರಿಸರ ದಿನ. ಈ ದಿನವನ್ನು ಪ್ರತಿವರ್ಷವೂ ವಿಶ್ವದಾದ್ಯಂತ ಜನರು ಆಚರಿಸುತ್ತಾರೆ.  ಪರಿಸರದ ಮಹತ್ವ, ಕಾಳಜಿ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು 1974 ಮಾನವ ಪರಿಸರ ಕುರಿತ ಸಮ್ಮೇಳನದ ಪ್ರೇರಿತವಾಗಿ   ಆಚರಣೆಗೆ ತರಲಾಗಿದೆ.

     ಪರಿಸರದ ಪ್ರತಿಯೊಂದು ಕೂಡ ಜೀವಿಗಳಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಗಾಳಿ,ನೀರು, ಮಣ್ಣು,ಮರ,ಕಾಡು,ಸಾಗರ ಇತ್ಯಾದಿಗಳೆಲ್ಲವೂ ಎಂದೆಂದಿಗೂ ಉಳಿಯುವುದು ಮುಖ್ಯ. ಅವುಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ ಕೂಡ. ಕಾರಣ ನಮಗಿರುವುದು ಒಂದೇ ಭೂಮಿತಾಯಿ.

       ಇಂದು ದಿನದಿಂದ ದಿನಕ್ಕೆ ವಾಹನಗಳ ಉಪಯೋಗ, ಪ್ಲಾಸ್ಟಿಕ್ ಮತ್ತು ಇಂಟರ್ನೆಟ್ ನ ಅತಿಯಾದ ಬಳಕೆಯಿಂದಾಗಿ ನಮಗೆ ಸಿಕ್ಕಿದ, ನಮ್ಮಲ್ಲಿರುವ ಒಂದು ಅಮೂಲ್ಯ ಸಂಪತ್ತನ್ನು ನಾವೇ ನಮ್ಮ ಕೈಯ್ಯಾರೆ ನಾಶ ಮಾಡುತ್ತಿದ್ದೇವೆ. ಎಲ್ಲವೂ ನಮ್ಮದು ಎಲ್ಲವೂ ಇರುವುದು ನಮಗಾಗಿಯೆ ನಮ್ಮ ಉಳಿವಿಗಾಗಿಯೆ ಎಂಬ ಬೋಧ ನಮ್ಮಿಂದ ಅಪ್ರತ್ಯಕ್ಷವಾಗುತ್ತಿದೆ.

     "ನೀನೊಂದು ಮರವನ್ನು ಕಡಿದರೆ ಎರಡು ಗಿಡವನ್ನು ನೆಡು" ಎಂಬ ಪ್ರವಾದಿ ಸಂದೇಶವು ದಿನದಿಂದ ದಿನಕ್ಕೆ ಮರಗಳನ್ನು ಕಡಿಯುತ್ತಾ ನಾಡನ್ನು ನಾಶ ಮಾಡುತ್ತಿರುವವರಿಗೆ ಇರುವ ಜೀವನ  ಕೈ ಕೀಯಾಗಿದೆ "ನೀವು ಸಮುದ್ರದ ಮಧ್ಯೆ ನಿಂತು ಉಝೂ ಮಾಡುತ್ತಿದ್ದರು ಸರಿ ಮೂರಕ್ಕಿಂತ ಅಧಿಕ ಗೊಳಿಸಬೇಡ" ಎಂಬ ಮಾತು ಅತ್ಯಧಿಕವಾಗಿ ನೀರನ್ನು ಬಳಸುತ್ತಾ ಪೋಲು ಮಾಡುವವರಿಗಿರುವ ಜಾಗೃತಾ ಮಾತಾಗಿದೆ. "ಗಾಳಿಯು ಮನುಷ್ಯನಿಗೆ ಅತ್ಯಮೂಲ್ಯ ಅದನ್ನು ನೀನು ಶಪಿಸಬೇಡ" ಎಂಬ ಕರೆಯು ಪರಿಸರದ ಪ್ರತಿಯೊಂದರ ಮಹತ್ವವನ್ನು ಎತ್ತಿ ಹೇಳುತ್ತದೆ. ಇಲ್ಲಿ ಇದೆಲ್ಲವೂ ಮಾನವನಿಗೆ ಪರಿಸರ ಕಾಳಜಿ ಎಷ್ಟಿರಬೇಕೆಂದು ಮನ ತಟ್ಟೆ ಹೇಳುತ್ತದೆ. ನನ್ನಿಂದಾಗಿ ನಮ್ಮವರು,ಪ್ರಾಣಿ-ಪಕ್ಷಿಗಳು ತೊಂದರೆಗೀಡಾಗಬಾರದು, ನಮ್ಮ ಪರಿಸರವನ್ನು ಸಂರಕ್ಷಿಸುತ್ತಾ ನಾವು  ನಮ್ಮವರನ್ನು ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವವರಾಗಬೇಕು.

   ಎಲ್ಲವನ್ನು ಸಂರಕ್ಷಿಸುತ್ತಾ ನಾಳೆಯ ನೆರಳಿಗಾಗಿ, ನಾಳೆಯ ಹಸಿರ ಉಸಿರ ಉಳಿವಿಗಾಗಿ ಗಿಡ ನೆಟ್ಟು, ಮಿತ ನೀರು ಬಳಸಿ, ಕಾಡು ಬೆಳೆಸಿ ನಾಡು ಉಳಿಸಿ  ಕೈಜೋಡಿಸುವ....


SHARE THIS

Author:

0 التعليقات: