Sunday, 6 June 2021

ಭಾರತದಿಂದ ಪರಾರಿಯಾಗಿಲ್ಲ, ಚಿಕಿತ್ಸೆಗಾಗಿ ಅಮೆರಿಕಕ್ಕೆ ಬಂದಿದ್ದೆ ಎಂದ ಮೆಹುಲ್ ಚೋಕ್ಸಿ!


ಭಾರತದಿಂದ ಪರಾರಿಯಾಗಿಲ್ಲ, ಚಿಕಿತ್ಸೆಗಾಗಿ ಅಮೆರಿಕಕ್ಕೆ ಬಂದಿದ್ದೆ ಎಂದ ಮೆಹುಲ್ ಚೋಕ್ಸಿ!

ನವದೆಹಲಿ: ನಾನು ಭಾರತದಲ್ಲಿ ಹಣ ದುರುಪಯೋಗ ಮಾಡಿಕೊಂಡು ವಿದೇಶಕ್ಕೆ ಓಡಿ ಬಂದಿಲ್ಲ. ಅನಾರೋಗ್ಯ ಕಾಡುತ್ತಿದ್ದ ಕಾರಣ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಬಂದಿದ್ದೇನೆ ಎಂದು ಕೆಲವು ವರ್ಷಗಳ ಹಿಂದೆಯೇ ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಹೇಳಿದ್ದಾರೆ. ಡೊಮಿನಿಕಾ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ರೀತಿ ಉಲ್ಲೇಖಿಸಿರುವ ಅವರು, ಭಾರತದ ತನಿಖಾ ಪ್ರಾಧಿಕಾರಗಳು ಯಾವಾಗ ಬೇಕಾದರೂ ನನ್ನನ್ನು ವಿಚಾರಣೆಗೆ ಒಳಪಡಿಸಬಹುದು. ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

''ತನಿಖಾ ಪ್ರಾಧಿಕಾರಗಳಿಂದ ತಪ್ಪಿಸಿಕೊಂಡು ಓಡಾಡುತ್ತಿಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೊರಡುವ ಸಂದರ್ಭದಲ್ಲಿ ನನ್ನ ವಿರುದ್ಧ ಬಂಧನದ ವಾರಂಟ್ ಕೂಡ ಇರಲಿಲ್ಲ'' ಎಂದು ಹೇಳಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ. ವಂಚಿಸಿದ ಆರೋಪ ಮೆಹುಲ್ ಚೋಕ್ಸಿ ಮತ್ತು ಅವರ ಸಂಬಂಧಿ ನೀರವ್ ಮೋದಿ ವಿರುದ್ಧ ಇದೆ. ಇವರಿಬ್ಬರೂ 2018ರಲ್ಲಿ ದೇಶದಿಂದ ಪರಾರಿಯಾಗಿದ್ದಾರೆ. ಆಯಂಟಿಗುವಾದಲ್ಲಿದ್ದ ಮೆಹುಲ್ ಎರಡು ವಾರದ ಹಿಂದೆ ಡೊಮಿನಿಕಾಗೆ ಬಂದಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿದೆ. ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ವಿಚಾರಣೆ ನಡೆಯುತ್ತಿದೆ.


 


SHARE THIS

Author:

0 التعليقات: