Saturday, 5 June 2021

ಅಹ್ಲ್‌ಬೈತಿನ ಅನುಗ್ರಹೀತ ಕೊಂಡಿಯೊಂದನ್ನು ಕಳಕೊಂಡಿತು ಕರುನಾಡು ಭದ್ರಾವತಿ ಸಯ್ಯಿದ್ ಹಾರೂನ್ ತಂಙಳ್ ವಫಾತ್!


ಅಹ್ಲ್‌ಬೈತಿನ ಅನುಗ್ರಹೀತ ಕೊಂಡಿಯೊಂದನ್ನು ಕಳಕೊಂಡಿತು ಕರುನಾಡು
ಭದ್ರಾವತಿ ಸಯ್ಯಿದ್ ಹಾರೂನ್ ತಂಙಳ್ ವಫಾತ್!

    ಈ ಕೊಳಕು ತುಂಬಿದ ಪ್ರಪಂಚದಲ್ಲಿ ನಮಗಿರುವ ಒಂದೇ ಒಂದು ಆಸರೆ ಆ ಪುಣ್ಯ ಹಬೀಬರು ನಮಗಾಗಿ ಬಿಟ್ಟು ಹೋದ ಆ ಪವಿತ್ರ ಶೃಂಖಲೆಯ ಅನುಗ್ರಹೀತ ಕೊಂಡಿಗಳು. ಮುತ್ತು ಹಬೀಬರನ್ನು ಕಾಣುವ ಭಾಗ್ಯ ಲಭಿಸದ ನಮಗೆ ಆ ಮುತ್ತಿನ ಪರಂಪರೆಯಲ್ಲಿ ಹುಟ್ಟಿ ಬಂದ ಅಹ್ಲಬೈತಿನ ಕಣ್ಮಣಿಗಳನ್ನು ಕಾಣುವ ಭಾಗ್ಯ ಕೊಟ್ಟಿದ್ದಾನೆ ಅಲ್ ಹಂದುಲಿಲ್ಲಾಹ್. 

ಆದರೆ ಈ ಅಹ್ಲ್‌ಬೈತ್ ವಂಶದ ಅನುಗ್ರಹೀತ ಕುಡಿಯೊಂದು ನಮ್ಮನ್ನು ಬಿಟ್ಟು ಹೋಗುತ್ತಿರುವ ದುಃಖ ನಮಗಿಂದು ಅರಗಿಸಿ ಕೊಳ್ಳಲಾಗುತ್ತಿಲ್ಲ! 

ಸಯ್ಯಿದ್ ಹಾರೂನ್ ತಂಙಳ್ ಭದ್ರಾವತಿ!! 

ನಂಬಲಾಗುತ್ತಿಲ್ಲ ನಮಗೆ, ಅನಿರೀಕ್ಷಿತವಾಗಿ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಸೇರುವ ಮುನ್ನಾ ದಿನ ಮೇ 23 ರಾತ್ರಿ 10.45ರ ವೇಳೆಗೆ ನನಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿ ನಮ್ಮ ಮಸ್‌ದರ್‌ಗಾಗಿ ತುಂಬಾ ದುಆ ಮಾಡಿದ್ದರು! ಮಸ್‌ದರ್ ಆನ್ಲೈನ್ ಮಹಿಳಾ ದರ್ಸ್‌ಗೆ ತನ್ನ ಮಗಳನ್ನೂ ಮುದರ್ರಿಸತ್ ಮಾಡಲು ಕೇಳಿಕೊಂಡಿದ್ದರು. ಅದರಂತೆ ನಾವು ಸಯ್ಯಿದತ್‌ರನ್ನು ಆಯ್ಕೆಯೂ ಮಾಡಿದ್ದೆವು. ಆದರೆ ಮರುದಿನ ಕೇಳಿದ ವಾರ್ತೆ ನಮ್ಮನ್ನು ನಿಜಕ್ಕೂ ನಿರಾಸೆ ಗೊಳಿಸಿತ್ತು. 

  ಆದರೆ ದಿನದಿಂದ ದಿನಕ್ಕೆ ಚೇತರಿಕೆಯ ಲಕ್ಷಣಗಳು ಕಂಡಾಗ ಅದೇನೋ ತುಸು ನೆಮ್ಮದಿಯೂ ಇತ್ತು. ಭದ್ರಾವತಿಯಲ್ಲಿರುವ ಮಿತ್ರ ಶಫೀಕ್ ಸಖಾಫಿಗೆ ಹಲವು ಬಾರಿ ಕರೆ ಮಾಡಿ ವಿಚಾರಿಸಿತ್ತಿದ್ದೆ. ಆದರೆ ಇದೀಗ ವಾಟ್ಸಪ್ ಮೂಲಕ ಬಂದ ಮೆಸೇಜ್ ನೋಡಿ ನಂಬಲೇ ಆಗಲಿಲ್ಲ. ಒಮ್ಮೆ ಗರಬಡಿದವನಂತಾದೆ. ಮತ್ತೊಮ್ಮೆ ಭದ್ರಾವತಿಯಲ್ಲೇ ಸಯ್ಯಿದರ ಬಳಿ ಇರುವ ಶಫೀಕ್ ಸಖಾಫಿ ಗೆ ಮತ್ತೊಮ್ಮೆ ಕರೆ ಮಾಡಿ ಕೇಳಿದೆ. ಅವರ ಅಳು ನನಗೆ ಎಲ್ಲವನ್ನೂ ಅರ್ಥಮಾಡಿ ಕೊಟ್ಟಿತು!  ಹಾರೂನ್ ತಂಙಳ್ ವಫಾತ್ ಆದರು ಇನ್ನಾಲಿಲ್ಲಾಹ್... 

ಅವರ ವಾಟ್ಸಪ್ ತೆರೆದರೆ ಮೇಲೆ ಕಾಣುತ್ತಿದೆ My daughters are my world. ನಾಲ್ಕು ಹೆಣ್ಮಕ್ಕಳ ಪ್ರೀತಿಯ ತಂದೆ! ಅಲ್ಲಾಹ್ ಆ ಕುಟುಂಬಕ್ಕೆ ಸ್ವಬರ್ ನೀಡು ಅಲ್ಲಾಹ್ - ಆಮೀನ್ 

ಕಷ್ಟ ದುಃಖಗಳಿಂದ ಬಳಲಿದ ಹಲವಾರು ಮನಸ್ಸುಗಳಿಗೆ ಸಾಂತ್ವನ ನೀಡಿದ ಸಯ್ಯಿದ್, ನಗುಮೊಗದೊಂದಿಗೆ ಎಲ್ಲರೊಂದಿಗೂ ಅನ್ಯೋನ್ಯತೆಯಿಂದಿದ್ದ ಹಾರೂನ್ ತಂಙಳ್ ಹಲವಾರು ನೊಂದ ಹೃದಯಗಳಿಗೆ ಧೈರ್ಯವನ್ನು ಕೊಟ್ಟವರು. ಅವರ ಅಗಲಿಕೆ ಈ ನಾಡಿಗೆ ತುಂಬಲಾರದ ನಷ್ಟ! 

ವಿಷಯ ತಿಳಿದು ಕಟ್ಟ ಕಡೆಯ ಬಾರಿಗೆ ಒಮ್ಮೆ ಕಾಣಬೇಕೆಂಬ ಅದಮ್ಯ ಬಯಕೆ ಇದೆ. ಆದರೇನು ಮಾಡಲಿ. ನಿದ್ದೆಗೆ ಜಾರಬೇಕೆಂದು ಬಂದ ನನಗೆ ಸುದ್ದಿ ಕೇಳಿ ನಿದ್ದೆಯೂ ಬರುತ್ತಿಲ್ಲ. ಮೊಬೈಲ್ ತೆಗೆದು ಟೈಪಿಸಿ ಬಿಟ್ಟೆ. 

ಅಲ್ಲಾಹ್ ಮಗ್ಫಿರತ್ ಮರ್‌ಹಮತ್ ನೀಡಿ ಅನುಗ್ರಹಿಸು, ಆ ಕುಟುಂಬಕ್ಕೆ ಸ್ವಬರ್ ನೀಡು ಅಲ್ಲಾಹ್, ನಮಗೆ ಸ್ವರ್ಗದಲ್ಲಿ ಪುಣ್ಯ ಹಬೀಬರ ಸನ್ನಿಧಿಯಲ್ಲಿ ಸಂತೋಷದಿಂದ ಒಟ್ಟುಗೂಡಲು ತೌಫೀಖ್ ನೀಡು ರಬ್ಬೇ - ಆಮೀನ್ ಯಾ ರಬ್ಬಲ್ ಆಲಮೀನ್. 

-ಹಾಫಿಝ್ ಸುಫ್ಯಾನ್ ಸಖಾಫಿ


SHARE THIS

Author:

0 التعليقات: