Sunday, 6 June 2021

ಅಧಿಕಾರ ಹಸ್ತಾಂತರಿಸಿ ರೋಹಿಣಿ ಸಿಂಧೂರಿಗೆ ಸವಾಲು ಹಾಕಿದ ಶಿಲ್ಪಾ ನಾಗ್

ಅಧಿಕಾರ ಹಸ್ತಾಂತರಿಸಿ ರೋಹಿಣಿ ಸಿಂಧೂರಿಗೆ ಸವಾಲು ಹಾಕಿದ ಶಿಲ್ಪಾ ನಾಗ್

ಮೈಸೂರು: ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಡೀಲರ್ ಇದ್ದಾರೆ. ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ಸ್ ಇದ್ದಾರೆ ಎನ್ನುವುದು ಗೊತ್ತಿದೆ. ನನ್ನ ಟ್ರಾಕ್ ರೆಕಾರ್ಡ್ ಮತ್ತು ಅವರ ಟ್ರಾಕ್ ರೆಕಾರ್ಡ್ ನೋಡಲಿ ಎಂದು ಐಎಎಸ್​ ಅಧಿಕಾರಿ ಶಿಲ್ಪಾ ನಾಗ್, ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸವಾಲು ಹಾಕಿದ್ದಾರೆ.

ಮೈಸೂರು ಪಾಲಿಕೆ ಆಯುಕ್ತೆ ಸ್ಥಾನದಿಂದ ವರ್ಗಾವಣೆಯಾದ ಬಳಿಕ ಅಧಿಕಾರ ಹಸ್ತಾಂತರ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಲ್ಪಾ ನಾಗ್, ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡ್ತೇನೆ. ಸೋಮವಾರ ಹೋಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಆದರೆ 12 ಕೋಟಿ ರೂ. ಅಂತ ಹೇಳಿದ್ದಾರೆ. ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ಒಂದೂ ಪೈಸೆಯನ್ನು ನಾವು ಕ್ಯಾಶ್​ನಲ್ಲಿ ತೆಗೆದುಕೊಂಡಿಲ್ಲ. ಅದಕ್ಕೆ ದಾಖಲೆ ಪಾಲಿಕೆಯಲ್ಲೇ ಇದೆ. ಇದು ಕೇವಲ ಮೂರು ದಿನದಲ್ಲೇ ಉಂಟಾದ ಗೊಂದಲ ಅಷ್ಟೇ. ಯಾವ ರೀತಿಯ ತನಿಖೆ ಬೇಕಾದ್ರು ಮಾಡಿಸಲಿ ಅದಕ್ಕೆ ದಾಖಲೆ ಇದೆ ಎಂದು ಅಸಮಾಧಾನ ಹೊರ ಹಾಕಿದರು.

ಅನಧಿಕೃತ ವ್ಯಕ್ತಿಯನ್ನು ಅಧಿಕೃತ ಮನೆಗೆ ಕರೆಸಿಕೊಂಡು ಯಾವ ಮಾಹಿತಿ ನೀಡಿದ್ರು ಅನ್ನೋದು ಗೊತ್ತಿದೆ. ನನ್ನ ಜೀವನದಲ್ಲೇ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ. ಅವರು ಯಾವುದಕ್ಕೆ ಲೆಕ್ಕ ಕೇಳಿದ್ರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದೇನೆ. ಸುಮ್ಮನೆ ಅನವಶ್ಯಕವಾಗಿ ಗಬ್ಬೆಬ್ಬಿಸುವಂತಹ ಕೆಲಸ ಮಾಡಿದ್ರು ಎಂದು ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.SHARE THIS

Author:

0 التعليقات: