Wednesday, 9 June 2021

ಇಂದು ವರ್ಷದ ಪ್ರಥಮ ಸೂರ್ಯಗ್ರಹಣ: ಭಾರತದಲ್ಲಿ ಬಹುತೇಕ ಅಗೋಚರ


ಇಂದು ವರ್ಷದ ಪ್ರಥಮ ಸೂರ್ಯಗ್ರಹಣ: ಭಾರತದಲ್ಲಿ ಬಹುತೇಕ ಅಗೋಚರ

ಹೊಸದಿಲ್ಲಿ, ಜೂ.10: ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣ ಗುರುವಾರ ಸಂಭವಿಸಲಿದ್ದು, ಉತ್ತರಗೋಳಾರ್ಧದ ಜನತೆಗೆ ಇದು ಗೋಚರಿಸಲಿದೆ ಎಂದು ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಪ್ರಕಟಿಸಿದೆ.

ಇದು ಖಗೋಳ ಕೌತುಕವಾಗಿದ್ದು, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಚಲಿಸುವಾಗ ಗ್ರಹಣ ಸಂಭವಿಸುತ್ತದೆ. ಇದರ ನೆರಳು ಆವರಿಸುವುದರಿಂದ ಕೆಲ ಪ್ರದೇಶಕ್ಕೆ ಸೂರ್ಯನ ಕಿರಣಗಳು ತಡೆಯಲ್ಪಡುತ್ತವೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಆದಾಗ್ಯೂ ಸೂರ್ಯಗ್ರಹಣ ಉಂಗುರಾಕಾರದ ಗ್ರಹಣವಾಗಿದ್ದು, ಚಂದ್ರ ಭೂಮಿಯಿಂದ ಅನತಿ ದೂರದಲ್ಲಿದೆ ಹಾಗೂ ಆಗಸದಲ್ಲಿ ಸೂರ್ಯನಿಗಿಂತ ತೀರಾ ಕಡಿಮೆ ಗಾತ್ರದ್ದಾಗಿದೆ. ಇಡೀ ಸೂರ್ಯಕಿರಣಗಳನ್ನು ಚಂದ್ರ ತಡೆಯುವುದು ಸಾಧ್ಯವಿಲ್ಲವಾದ್ದರಿಂದ, ಖಗೋಳ ಉತ್ಸಾಹಿಗಳು ದೊಡ್ಡ ಪ್ರಖರ ಚಕ್ರಾಕಾರದ ತುದಿಯಲ್ಲಿ ಕಡುಗಪ್ಪು ಚಕ್ರಾಕಾರವನ್ನು ಕಾಣುತ್ತಾರೆ. ಇದನ್ನು 'ಬೆಂಕಿಯುಂಗುರ' ಎಂದು ಕರೆಯುತ್ತಾರೆ.

ನಾಸಾ ಪ್ರಕಾರ, ಈ ಗ್ರಹಣ ಕೆಲ ಪ್ರದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಇತರ ಕಡೆಗಳಲ್ಲಿ ಭಾಗಶಃ ಕಾಣಿಸಲಿದೆ. ರಶ್ಯ, ಗ್ರೀನ್‌ಲ್ಯಾಂಡ್ ಮತ್ತು ಕೆನಡಾದಲ್ಲಿ 'ಬೆಂಕಿಯ ಉಂಗುರ' ಗೋಚರಿಸಲಿದೆ. ಅಂದರೆ ಖಗ್ರಾಸ ಸೂರ್ತಗ್ರಹಣ ಅಮೆರಿಕದ ಪೂರ್ವಭಾಗದಲ್ಲಿ ಕಾಣಿಸಲಿದ್ದು, ಅಲಸ್ಕಾದಲ್ಲಿ ಭಾಗಶಃ ಗ್ರಹಣ ಗೋಚರವಾಗಲಿದೆ. ಉತ್ತರ ಅಮೆರಿಕ, ಯೂರೋಪ್, ಏಶ್ಯ, ಉತ್ತರ ಆಫ್ರಿಕಾ ಮತ್ತು ಕೆರೀಬಿಯನ್ ದ್ವೀಪಗಳ ಬಹುಭಾಗದಲ್ಲೂ ಖಂಡಗ್ರಾಸ ಗ್ರಹಣ ಗೋಚರವಾಗಲಿದೆ.

ಭಾರತದಲ್ಲಿ ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಷ್ಟೇ ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 1:42ಕ್ಕೆ ಗ್ರಹಣ ಆರಂಭವಾಗಿ, ಸಂಜೆ 6:41ಕ್ಕೆ ಮೋಕ್ಷವಾಗಲಿದೆ. 4:16ರ ವೇಳೆಗೆ ಚಂದ್ರ ಹಾಗೂ ಸೂರ್ಯ 25 ಡಿಗ್ರಿಯಲ್ಲಿ ವೃಷಭರಾಶಿಯಲ್ಲಿ ಸಂಯೋಗ ಹೊಂದುವ ವೇಳೆ ಗ್ರಹಣ ಉತ್ತುಂಗವನ್ನು ಕಾಣಲಿದೆ.SHARE THIS

Author:

0 التعليقات: