ಧುನ್ನೂರೈನ್ ಆನ್ಲೈನ್ ಮದ್ರಸ
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ ಸಿ ಎಫ್, ಯು ಎ ಇ . ರಾಷ್ಟ್ರೀಯ ಸಮಿತಿ ವತಿಯಿಂದ ನಡೆಸಲ್ಪಡುವ ಧುನ್ನೂರೈನ್ ಆನ್ಲೈನ್ ಮದ್ರಸ ಕಳೆದ ಒಂದು ವರ್ಷದಿಂದ ಉತ್ತಮ ಮಟ್ಟದ ಧಾರ್ಮಿಕ ಪಾಠ್ಯಪದ್ದತಿಯನ್ನು ಜಾರಿಗೆ ತಂದಿದೆ. ಇದರ ಎರಡನೇ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭವು ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಗಳ್ ರವರ ಪ್ರಾರ್ಥನೆ ಮತ್ತು ಆತ್ಮೀಯ ಉಧ್ಬೋಧನೆಯೊಂದಿಗೆ ನಡೆಯಿತು . ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರು ಮುಖ್ಯ ಭಾಷಣ ನಡೆಸಿದರು.
ಐದು ಭಾಷೆಗಳಲ್ಲಿ ಹತ್ತು ಅಧ್ಯಾಪಕರುಗಳು ಭೋದನೆ ನೀಡಲಾಗುತ್ತಿರುವ ಧುನ್ನೂರೈನಿ ಮದ್ರಸ ಪಾಠ್ಯ ,ಪಾಠ್ಯೇತರ ವಿಷಯಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಂಡಿದೆ.
ದಿನಾಂಕ 28/05/2021 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ.ಕೆ ಸಿ ಎಫ್ ,ಐ ಎನ್ ಸಿ ಶಿಕ್ಷಣ ವಿಭಾಗ ಅಧ್ಯಕ್ಷರು ಎಸ್ ಪಿ ಹಂಸ ಸಖಾಫಿ ಸಂದೇಶ ಭಾಷಣ ಮಾಡಿದ ಸಭೆಯಲ್ಲಿ ಕೆ ಸಿ ಎಫ್,ಯು ಎ ಇ ರಾಷ್ಟ್ರೀಯ ಅಧ್ಯಕ್ಷರಾದ ಜಲೀಲ್ ನಿಸಾಮಿ ,ಕಾರ್ಯದರ್ಶಿ ಮೂಸ ಬಸರ ಉಪಸ್ಥಿತರಿದ್ದರು, ಇಬ್ರಾಹಿಂ ಸಖಾಫಿ ಕೆದುಂಬಾಡಿ ಸಭೆಯನ್ನು ನಿಯಂತ್ರಿಸಿದರು,ಶಾಹುಲ್ ಹಮೀದ್ ಸಖಾಫಿ ವಂದನಾರ್ಪಣೆ ನಿರ್ವಹಿಸಿದರು.
0 التعليقات: