ಲಷ್ಕರ್ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ್,ಜೂ.21-ಕಣಿವೆ ಪ್ರದೇಶದಲ್ಲಿ ಭದ್ರತಾ ಪಡೆಗಳು ಲಷ್ಕರ್ ಇ ತೋಯ್ಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮುದಾಸಿರ್ ಪಂಡಿತ್ ಸೇರಿದಂತೆ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ.
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರೆ ಪ್ರದೇಶದ ಗುಂಡ್ಬ್ರಾತ್ನಲ್ಲಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಮೂವರು ಕಟ್ಟಾ ಭಯೋತ್ಪಾದಕರನ್ನು ಹೊಡೆದುರುಳಿಸಿವೆ ಎಂದು ಐಜಿಪಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಕಟ್ಟಾ ಭಯೋತ್ಪಾದಕ ಮುದಾಸೀರ್ ಸೇರಿದಂತೆ ಮೂವರು ಉಗ್ರರು ಆಡಗಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಮೂವರನ್ನು ಹತ್ಯೆ ಮಾಡಿವೆ.
ಸೇನೆ ಗುಂಡಿಗೆ ಬಲಿಯಾಗಿರುವ ಮುದಾಸಿರ್ ಇತ್ತಿಚೆಗೆ ಮೂವರು ಪೊಲೀಸರು, ಇಬ್ಬರು ಬಿಜೆಪಿ ಕೌನ್ಸಿಲರ್ಸ್ಗಳು ಹಾಗೂ ಇಬ್ಬರು ನಾಗರೀಕರನ್ನು ಹತ್ಯೆ ಮಾಡಿದ್ದ ಮಾತ್ರವಲ್ಲ ಕಣಿವೆಯಲ್ಲಿ ಹಲವಾರು ದುಷ್ಕøತ್ಯಗಳನ್ನು ನಡೆಸಿದ್ದ ಎಂದು ಐಜಿಪಿ ಟ್ವಿಟ್ ಮಾಡಿದ್ದಾರೆ.
0 التعليقات: