Sunday, 13 June 2021

ದೈತ್ಯ ಸಮುದ್ರ ಜೀವಿ 'ತಿಮಿಂಗಿಲ' ನುಂಗಿದರೂ ಬದುಕಿ ಬಂದ ವ್ಯಕ್ತಿ


ದೈತ್ಯ ಸಮುದ್ರ ಜೀವಿ 'ತಿಮಿಂಗಿಲ' ನುಂಗಿದರೂ ಬದುಕಿ ಬಂದ ವ್ಯಕ್ತಿ 

 'ತಿಮಿಂಗಿಲ' ಎಂಬ ದೈತ್ಯ ಸಮುದ್ರ ಜೀವಿಯನ್ನು ಹೆಚ್ಚಿನ ಜನರು ವಿಡಿಯೋ, ಟಿವಿಯಲ್ಲಿ ನೋಡಿರುತ್ತಾರೆ, ಆದರೆ ನಿಜವಾಗಿ ಅದನ್ನು ಹೆಚ್ಚಿನ ಜನರು ನೋಡಿರಕ್ಕಿಲ್ಲ..ಆದರೆ ಇಲ್ಲೊಬ್ಬ ವ್ಯಕ್ತಿ ತಿಮಿಂಗಿಲದ ಬಾಯಿಯೊಳಗೆ ಹೋಗಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಹೌದು, ಅಮೆರಿಕದ ಮೆಸ್ಸಾಯುಯೆಟನ್ಸ್ ಈಶಾನ್ಯ ಭಾಗದ ಕಡಲಿನಲ್ಲಿ 55 ವರ್ಷದ ವ್ಯಕ್ತಿ ಮೈಕಲ್ ಪಾಕಾರ್ಡ್ ಎನ್ನುವ ಮೀನುಗಾರ ಹಾಗೂ ಸೀ ಡ್ರೈವರ್ ತಿಮಿಂಗಿಲ ಬಾಯಿಯೊಳಗೆ ಹೋಗಿ ವಾಪಸ್ ಬದುಕಿ ಬಂದಿದ್ದಾನೆ.

ಎರಡು ದಿನದ ಹಿಂದೆ ಈತ ಎಂದಿನಂತೆ 'ಸೀ ಡ್ರೈವಿಂಗ್' ಮಾಡುವಾಗ 40 ಅಡಿ ಆಳದ ಸಮುದ್ರಕ್ಕೆ ಇಳಿದಿದ್ದಾನೆ. ಆಗ ದೈತ್ಯ ತಿಮಿಂಗಿಲವೊಂದು ಈತನನ್ನು ಬಾಯೊಳಕ್ಕೆ ಎಳೆದುಕೊಂಡಿದೆ. ಇದರಿಂದ ಸತ್ತೇ ಎಂದುಕೊಂಡ ವ್ಯಕ್ತಿಗೆ ಕಾದಿತ್ತು.. ಅಚ್ಚರಿ ಕೆಲವೇ ಕ್ಷಣದಲ್ಲಿ ಆತನನ್ನು ಹೊರಗೆ ಉಗುಳಿದೆ. ಇದರಿಂದ ಈತ ಸಾವಿನಿಂದ ಪಾರಾಗಿದ್ದಾನೆ.ಸದ್ಯ,ಈತನಿಗೆ ಮೈಗೆ ತಿರುಚಿದ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ವಿಷಯವನ್ನು ಪಾಕಾರ್ಡ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


SHARE THIS

Author:

0 التعليقات: