Sunday, 13 June 2021

ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆ


ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆ

ಜೆರುಸಲೇಮ್:ಇಸ್ರೇಲ್ ನ ನೂತನ ಪ್ರಧಾನಮಂತ್ರಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಆಡಳಿತ ಕೊನೆಯಾಗಿದೆ.

ರವಿವಾರ ಇಸ್ರೇಲ್ ಸಂಸತ್ತಿನಲ್ಲಿ ಹೊಸ ಸರಕಾರವನ್ನು ಆಯ್ಕೆ ಮಾಡಲಾಯಿತು. 60 ಸದಸ್ಯರು ಬೆನೆಟ್ ಹಾಗೂ ಯೇರ್ ಲ್ಯಾಪಿಡ್ ನೇತೃತ್ವದ ಮೈತ್ರಿ ಪಕ್ಷದ ಪರ ಮತ ಚಲಾಯಿಸಿದರು.

ಒಂದು ಕಾಲದಲ್ಲಿ ನೆತನ್ಯಾಹು ಪರ ಕೆಲಸ ಮಾಡಿರುವ ನಫ್ತಾಲಿ ಬೆನೆಟ್ ಎರಡು ವರ್ಷಗಳ ಕಾಲ ಇಸ್ರೇಲ್ ಪ್ರಧಾನಿಯಾಗಿರುತ್ತಾರೆ. ಆ ನಂತರ ಒಪ್ಪಂದ ಪ್ರಕಾರ ಲ್ಯಾಪಿಡ್ ಪ್ರಧಾನಿ ಸ್ಥಾನಕ್ಕೇರಲಿದ್ದಾರೆ.


SHARE THIS

Author:

0 التعليقات: