ರಾಜ್ಯದಲ್ಲಿ ಇಂದಿನಿಂದ 'ವೀಕೆಂಡ್ ಕರ್ಪ್ಯೂ' ಜಾರಿ :
ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಈ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಲಾಗಿದೆ.
ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಕೋವಿಡ್ ನಿಯಂತ್ರಣ ಕುರಿತ ಸಭೆಯ ಮುಖ್ಯಾಂಶಗಳು
ಜೂನ್ 21 ರ ಬಳಿಕ ಸರ್ಕಾರ ಲಾಕ್ ಡೌನ್ ನಿಯಮಾವಳಿಗಳಲ್ಲಿ ಹಲವು ಸಡಿಲಿಕೆ ಮಾಡಿದರೂ ಕೂಡ ವಾರಾಂತ್ಯ ಕರ್ಪ್ಯೂ ಹಾಗೂ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಕೊರೊನಾ ವೈರಸ್ ಹರಡುವಿಕೆ ತಟೆಗಟ್ಟುವಿಕೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಏನಿರುತ್ತೆ..ಏನಿರಲ್ಲ..?
1) ಆಹಾರ ಸಾಮಾಗ್ರಿಗಳ ಅಂಗಡಿ, ದಿನಸಿ ಅಂಗಡಿ, ಹಣ್ಣು ತರಕಾರಿ ಅಂಗಡಿಗಳು, ಮಾಂಸ , ಮೀನು ಹಾಲು ಹಾಗೂಇನ್ನಿತರ ಡೈರಿ ಉತ್ಪನ್ನಗಳ ಮಾರುಕಟ್ಟೆ ತೆರೆದಿರುತ್ತದೆ.
2) ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅವಕಾಶ
3) ಮದ್ಯದ ಅಂಗಡಿಗೆ ಪಾರ್ಸೆಲ್ ನೀಡುವ ಅವಕಾಶ, ಅದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ,ಮಾತ್ರ ಅವಕಾಶ
4) ಎಲ್ಲಾ ರೀತಿಯ ಹೋಮ್ ಡೆಲಿವರಿಗೆ ದಿನದ 24 ಗಂಟೆಗಳಲ್ಲೂ ಅವಕಾಶ
5) ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಕೂಡ ವಾರಾಂತ್ಯದ ಕರ್ಪ್ಯೂ ವೇಳೆ ತೆರೆಯಲು ಅವಕಾಶ
ಆದರೆ ಪಾರ್ಸೆಲ್ ಹಾಗೂ ಹೋಮ್ ಡೆಲಿವರಿಗೆ ಮಾತ್ರ ಅವಕಾಶ.
6) ಖಾಸಗಿ ಬಸ್ , ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ, ಪ್ರಯಾಣಿಕರು ಟಿಕೆಟ್ ಹಾಗೂ ಇನ್ನಿತರ ಸೂಕ್ತ ದಾಖಲೆ ತೋರಿಸಿ ಪ್ರಯಾಣಿಸಬೇಕು.
7) ವೀಕೆಂಡ್ ಕರ್ಪ್ಯೂ ವೇಳೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಅವಕಾಶ, ಆದರೆ ಮೆಟ್ರೋ ಸಂಚಾರ ಇರುವುದಿಲ್ಲ
0 التعليقات: