ಕೆಎಸ್ಆರ್ಟಿಸಿ ಬಸ್ನಲ್ಲಿ ಹಾವು!; ಲಾಕ್ಡೌನ್ ಇಫೆಕ್ಟ್, ಚಾಲಕರಲ್ಲಿ ಭಯ.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಹಾವು ಕಾಣಿಸಿಕೊಂಡಿದ್ದು, ಚಾಲಕರು ಡಿಪೋದಿಂದ ಬಸ್ ತೆಗೆಯಲು ಭಯ ಪಡುವಂತಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ದಿನಗಟ್ಟಲೆ ಡಿಪೋಗಳಲ್ಲೇ ನಿಲ್ಲಿಸಿರುವ ಬಸ್ಗಳಲ್ಲಿ ಹಾವು, ಹುಳ, ಹೆಗ್ಗಣಗಳು ಸೇರಿಕೊಂಡಿದ್ದು, ತುಂಬಾ ದಿನಗಳ ಮೇಲೆ ಮೊದಲ ಸಲ ಬಸ್ ತೆಗೆಯಲು ಮುಂದಾಗುವ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.
ಕರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ವಿಧಿಸಿದ್ದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರವೂ ಸ್ಥಗಿತೊಂಡಿತ್ತು. ಹೀಗಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು ಹೆಚ್ಚೂಕಡಿಮೆ ಎರಡು ತಿಂಗಳಿನಿಂದ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಹಾವು-ಹೆಗ್ಗಣಗಳು ಬಸ್ನೊಳಗೆ ಆಶ್ರಯ ಪಡೆದ ಪ್ರಕರಣಗಳು ಬೆಳಕಿಗೆ ಬಂದಿವೆ.
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಇಂದು ತುಮಕೂರು ಡಿಪೋದಲ್ಲಿ ಚಾಲಕರೊಬ್ಬರು ಬಸ್ ತೆಗೆಯಲು ಮುಂದಾದಾಗ ಹಾವೊಂದು ಚಾಲಕರ ಆಸನದ ಬಳಿಯೇ ಇರುವುದು ಕಂಡುಬಂದಿದೆ. ಕೂಡಲೇ ಪರಿಣತರೊಬ್ಬರನ್ನು ಕರೆಸಿ ಆ ಹಾವನ್ನು ಹಿಡಿದು, ಅಲ್ಲಿಂದ ತೆರವುಗೊಳಿಸಲಾಗಿದೆ.
0 التعليقات: