Wednesday, 9 June 2021

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ಕ್ಯಾರಿಯರ್ ಪ್ಲಸ್ ಕಾರ್ಯಗಾರ


ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ಕ್ಯಾರಿಯರ್ ಪ್ಲಸ್ ಕಾರ್ಯಗಾರ

ಮಂಗಳೂರು, ಜೂ 8: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ  ಪ್ರಾಢ ಶಾಲಾ, ಪದವಿಪೂರ್ವ ಹಾಗೂ ಪದವಿ ವಿಧ್ಯಾರ್ಥಿಗಳಿಗಾಗಿ "ಕ್ಯಾರಿಯರ್ ಪ್ಲಸ್" ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರ ಜೂನ್ 13ರಂದು ಝೂಂ ಹಾಗೂ ಯುಟ್ಯೂಬ್  ಮೂಲಕ,ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ವಿಭಾಗದ ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್ ಉದ್ಘಾಟಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಪ್ರಾಚಾರ್ಯರಾದ ಶಹೀನ್ ಅಲಿ ಎಸ್.ಬಿ ಹಾಗೂ ನಾಸಿರ್ ಮಾಸ್ಟರ್ ಬಜ್ಪೆ ತರಬೇತಿ ನೀಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ದ‌.ಕ ಜಿಲ್ಲೆ ವೆಸ್ಟ್ ಪ್ರ.ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ,ಫೈನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರಾದ ಸಯ್ಯದ್ ಖುಬೈಬ್ ತಂಙಲ್ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ದ‌.ಕ ಜಿಲ್ಲೆ ವೆಸ್ಟ್ ವಿಸ್ಡಂ ಕಾರ್ಯದರ್ಶಿ ಸುಹೈಲ್ 10ನೇ ಮೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: