Saturday, 12 June 2021

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ -ಮಖ್ದೂಮಿಯಾ ಸಮ್ಮಿಟ್


ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ -ಮಖ್ದೂಮಿಯಾ ಸಮ್ಮಿಟ್

ಮಂಗಳೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ದಅವಾ ವಿದ್ಯಾರ್ಥಿಗಳಿಗಾಗಿ "ಮಖ್ದೂಮಿಯಾ ಸಮ್ಮಿಟ್" ಮುತಅಲ್ಲಿಂ ಸಂಗಮವು ಜೂನ್ 15ರಿಂದ17ರವರೆಗೆ ಝೂಂ ಹಾಗೂ ಯುಟ್ಯೂಬ್  ಮೂಲಕ,ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮೂರು ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಹಾಗೂ ಎಸ್ಸೆಸ್ಸೆಫ್ ರಾಜ್ಯ ದಅವಾ ವಿಭಾಗದ ಕಾರ್ಯದರ್ಶಿ ಮುಸ್ತಫ  ನಹೀಮಿ ಹಾವೇರಿ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ.ಫಾರೂಖ್ ನಹೀಂ ಕೊಲ್ಲಂ,ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಟಿ.ಎಂ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಹಾಗೂ ಇರ್ಶಾದಿಯ್ಯಾ ಪ್ರಧಾನ ಕಾರ್ಯದರ್ಶಿ ಅಲವಿ ಸಖಾಫಿ ಕೊಳತ್ತೂರು ವಿವಿಧ ವಿಷಯಗಳಲ್ಲಿ ತರಗತಿ ಮಂಡಿಸಲಿದ್ದಾರೆ.

ಅತಿಥಿಗಳಾಗಿ ಎಸ್ಸೆಸ್ಸೆಫ್ ದ‌.ಕ ಜಿಲ್ಲೆ ವೆಸ್ಟ್ ಪ್ರ.ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ,ಫೈನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರಾದ ಸಯ್ಯದ್ ಖುಬೈಬ್ ತಂಙಲ್ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ದಅವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: