Thursday, 10 June 2021

ಆಕಸ್ಮಿಕ ಬೆಂಕಿಯಿಂದ ನಾಲ್ಕು ಅಂಗಡಿಗಳು ಭಸ್ಮ


ಆಕಸ್ಮಿಕ ಬೆಂಕಿಯಿಂದ ನಾಲ್ಕು ಅಂಗಡಿಗಳು ಭಸ್ಮ

ಚಿಕ್ಕಮಗಳೂರು,ಬಣಕಲ್: ಬೆಂಕಿ ಅವಘಡದಿಂದ ನಾಲ್ಕು ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಬಣಕಲ್ ನ ಮಹೇಶ ಗೌಡ ಎಂಬವರಿಗೆ ಸೇರಿದ ಕಟ್ಟಡ ಸಂಕೀರ್ಣದಲ್ಲಿ ಬುಧವಾರ ರಾತ್ರಿ 9:30ರ ಸುಮಾರಿಗೆ ಈ ಬೆಂಕಿ ದುರಂತ ಸಂಭವಿಸಿದೆ. ಒಂದು ಬೇಕರಿ, ಪಾದರಕ್ಷೆಗಳ ಅಂಗಡಿ, ಮೊಬೈಲ್ ಶಾಪ್ ಹಾಗೂ ಒಂದು ಸೆಲೂನ್ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೀಡಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೂಡಿಗೆರೆ, ಚಿಕ್ಕಮಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಘಟನೆಯಲ್ಲಿ ನಾಲ್ಕು ಅಂಗಡಿಗಳಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.


SHARE THIS

Author:

0 التعليقات: