Tuesday, 1 June 2021

ಕಣ್ಮರೆಯಾದರೂ ಮನ್ಮರೆಯಾಗದ ಮುಹಿಮ್ಮಾತಿನ ಶಬ್ದ "ಇಝ್ಝುದ್ದೀನ್ ಸಖಾಫಿ ಉಸ್ತಾದ್"


ಕಣ್ಮರೆಯಾದರೂ ಮನ್ಮರೆಯಾಗದ ಮುಹಿಮ್ಮಾತಿನ ಶಬ್ದ "ಇಝ್ಝುದ್ದೀನ್ ಸಖಾಫಿ ಉಸ್ತಾದ್"

✍️ಟಿ. ಎಚ್ ಮುಹಮ್ಮದ್ ಸಫ್ವಾನ್ ನೆಲ್ಯಾಡಿ

ಮುಹಿಮ್ಮಾತ್ ಶಬ್ದ ಇಝ್ಝುದ್ದೀನ್ ಸಖಾಫಿ ಉಸ್ತಾದರ ಅನುಸ್ಮರಣಾ ದಿನವಿಂದು. ಮುಹಿಮ್ಮಾತಿನ ಅಲ್ಲಿನ ಉನ್ನತಕ್ಕಾಗಿ ಉಸ್ತಾದರ ಸೇವೆ ಮಹತ್ತರವಾದುದು.  ಮುಹಿಮ್ಮಾತ್ ಸಂಸ್ಥೆಯು ಪಥದತ್ತ ಸಂಚರಿಸುವ ವೇಳೆಯಲ್ಲಿ ಹೇಳುವುದಾದರೆ ಏಳನೇ ವಯಸ್ಸಿನಲ್ಲಿ ಸಂಸ್ಥೆಯ ಬೇಡಿಕೆಯಂತೆ ಯು.ಎ.ಇ ಸಂದರ್ಶನಕ್ಕೆ ಶೈಖುನಾ ತಂಙಳ್ ಉಸ್ತಾದ್ ಹೇಳಿ ಕಳಿಸಿದಂದಿನಿಂದ ಈ ಸಂಸ್ಥೆ ಮತ್ತು ತಂಙಳ್ ಉಸ್ತಾದ್ ರೊಂದಿಗೆ ಉಂಟಾದ ಬಂದವು ಒಂದರ್ಥದಲ್ಲಿ ಸಂಸ್ಥೆ ಪ್ರಚಾರವಾಗಿದೆಯೆಂಬುವುದು ಅತಾರ್ಕಿಕವಾಗಿದೆ.

 ತನ್ನ ಪ್ರಭಾಷಣ ಚಾತುರ್ಯ,ಅನುಗ್ರಹೀತ ಶಬ್ದ, ಶಾರೀರಿಕ ಮೇಲ್ಮೈ ಇವೆಲ್ಲವೂ ತಂಙಳ್ ಉಸ್ತಾದರ ನಂತರ ಒಬ್ಬ ಎರಡನೇಯವರೆಂದು ಸಾಮಾನ್ಯ ಜನರು ವಿಶ್ವಸಿಸುವವರೆಗೆ ಅವರ ಕಾರ್ಯಚಟುವಟಿಕೆಗಳು ಬೆಳೆದಿತ್ತು.

 ತಾನೂ ಅನುಭವಿಸಿದ ವೈಯಕ್ತಿಕವಾದ ಮಾನಸಿಕ ಸಂಘರ್ಷ ಸಂದರ್ಭದಲ್ಲಿ ಸರ್ವವೂ ತನ್ನನ್ನು ಎದುರಿಸಿದಾಗ ಗಂಭೀರವಾಗಿ ತನಗೆ ನೆರಳಾಗಿ ಆಸರೆಯಾಗಿದ್ದ ಶೈಖುನಾ ತಂಙಳ್ ಉಸ್ತಾದರಿಗೆ ಪ್ರತ್ಯುಪಕಾರವಾಗಿ ಏನನ್ನು ಕೊಡಲಿಕ್ಕಿಲ್ಲವೆಂದು ಮಹಾನರ ಪ್ರತ್ಯೇಕ ಆಸಕ್ತಿ ಮತ್ತು ಆಗ್ರಹವನ್ನು ಗಣನೆಗೆ ತೆಗೆದುಕೊಂಡು ಮುಹಿಮ್ಮಾತಿಗೆ ಸೇವೆ ಮಾಡದಿದ್ದರೂ ನನ್ನಿಂದಾಗುವ ಸಹಾಯ ಮಾಡುವೆನೆಂದು ಹೇಳಿದ್ದ ಉಸ್ತಾದರು, ತನ್ನ ಸಮಯ ಮತ್ತು ಆರೋಗ್ಯವನ್ನೆಲ್ಲವನ್ನು ಮುಹಿಮ್ಮಾತಿಗಾಗಿ ದೀರ್ಘವಾದ ಹನ್ನೆರಡು ವರ್ಷಕ್ಕಿಂತಲೂ ಮಿಕ್ಕ ಕಾಲವನ್ನು ವ್ಯಯಿಸಿದರು. 

ಅವರ ಗಲ್ಫ್ ಭೇಟಿ ಪ್ರವಾಸಿ ಸಹೋದರರಿಗೆ ಪ್ರಚೋದನೆಯಾಯಿತು. ಸ್ವದೇಶದ ವರಮಾನಗಳಲ್ಲೊಂದು ಸಾಕಾಗದಂತೆ ತಂಙಳ್ ಉಸ್ತಾದರ ಶಿಕ್ಷಣದಿಂದ ಮುಹಿಮ್ಮಾತ್ ಅತೀ ಶೀಘ್ರವಾಗಿ ಬೆಳೆಯತೊಡಗಿದಾಗ ಪ್ರವಾಸಿಗಳೆಡೆಗೂ ಅನ್ಯ ರಾಜ್ಯಗಳಿಗೂ ನಿರಂತರವಾಗಿ ಭೇಟಿ ಕೊಟ್ಟು ಮುಹಿಮ್ಮಾತನ್ನು  ಪರಿಚಯಿಸಲು ಮತ್ತು ಪ್ರಚಾರ ಮಾಡಲು ಮತ್ತು ಸಹಾಯ ಸಂಭಾವನೆಗಳನ್ನು ಸಂಗ್ರಹಿಸಲು ಉಸ್ತಾದರ ಸಾಧನೆ ಕೇವಲ ಬರಿ ಲೇಖನಿಯಲ್ಲಿ ಬರೆದು ಮುಗಿಸಲು ಅಸಾಧ್ಯ. ತನ್ನ ಮತ ಪ್ರಭಾಷಣ ವೇದಿಕೆಗಳಲ್ಲಿ ಈ ಸಂಸ್ಥೆಯನ್ನು ಪ್ರಚಾರ ಪಡಿಸಲು ಸಹಾಯಗಳನ್ನು ಸಂಗ್ರಹಿಸಲು ಅವರು ಸಮಯವನ್ನು ಮೀಸಲಿಟ್ಟರು. 

ಕೊನೆಗೆ ಅವರು ರೋಗಿಯಾಗಿ ಕ್ಷೀಣಿಸುತ್ತಿರುವಾಗಲೂ ಸಂಸ್ಥೆಯ ಮತ್ತು ಅದರಲ್ಲಿರುವವರನ್ನು ನೆನಪಿಸಿ ಗಲ್ಫ್ ಯಾತ್ರೆ ನಡೆಸಿದ್ದು ಎಲ್ಲರನ್ನು ಅಚ್ಚರಿ ಪಡಿಸುವ ವಾಸ್ತವವಾಗಿದೆ. ಸಂಸ್ಥೆಯ ದೈನಂದಿನ ಖರ್ಚಿಗೆ ಮತ್ತು ಕಟ್ಟಡ ನಿರ್ಮಾಣಕ್ಕೆ ಸಹಾಯ ಸಿಗಲು ಉಸ್ತಾದರು ಒಂದು ಕಾರಣವಾಗಿದ್ದರು. ನಿಜವಾಗಿಯೂ ಹಲವು ಕರಾಮತ್'ಗಳು ಈ ಸಂಸ್ಥೆಯ ಸಹಾಯಿಗಳಿಗೆ ಲಭಿಸಿದ್ದ ಘಟನೆಗಳನ್ನು ಪುರಾವೆ ಸಹಿತ ಭಾಷಣದ ಮಧ್ಯೆಯೆತ್ತಿ ತೋರಿಸಲು ಮತ್ತು ಇದನ್ನು ಮನುಷ್ಯ ಮನಸ್ಸುಗಳಲ್ಲಿ ಚಿಂತಾ ವಸ್ತುವಾಗಿ ನೆಲೆ ನಿಲ್ಲಿಸಿದ್ದು ಇಝ್ಝುದ್ದೀನ್ ಸಖಾಫಿ ಉಸ್ತಾದರ ಪ್ರತ್ಯೇಕವಾದ ಹಿರಿಮೆಯಾಗಿದೆ.

 ಬರಡು ಭೂಮಿಯನ್ನು ಬೆಳಗಿಸಿದ ಮಹಾನರಾದ ಝೈನುಲ್ ಮುಹಖಿಕೀನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳುಸ್ತಾದ್(ಖ,ಸಿ) ರು  ಕಟ್ಟಿ ಬೆಳೆಸಿದ ಮುಹಿಮ್ಮಾತ್ ನ ಉನ್ನತಕ್ಕೆಬೇಕಾಗಿ ಇಝ್ಝುದ್ದೀನ್ ಸಖಾಫಿ ಉಸ್ತಾದರ ಪರಿಶ್ರಮ ಇಂದಿಗೂ ಮುಹಿಮ್ಮಾತ್ ನೆನಪಿಸುತ್ತಿವೆ. 

SSF,SYS, KCF ಎಲ್ಲ  ಕಾರ್ಯಕರ್ತರು,  ಸುನ್ನತ್ ಜಮಾಅತ್ ನ   ಧೀರ ನಾಯಕರು ಆದ ಮುಹಿಮ್ಮಾತ್ ಶಬ್ದ ಇಝ್ಝುದ್ದೀನ್  ಸಖಾಫಿ ಉಸ್ತಾದರ ಹೆಸರಿನಲ್ಲಿ ತಹ್ಹೀಲ್, ಸೂರತ್ ಫಾತಿಹಾ, ಯಾಸೀನ್ ಪಾರಾಯಣ ಮಾಡಿ ಹದಿಯಾ ಮಾಡೋಣ.

ಅಲ್ಲಾಹನು ಇಝ್ಝುದ್ದೀನ್ ಸಖಾಫಿ ಉಸ್ತಾದರ ದರಜವನ್ನು ಉನ್ನತಿಗೇರಿಸಲಿ....  ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳುಸ್ತಾದ್(ಖ,ಸಿ) ಹಾಗೂ ಇಝ್ಝುದ್ದೀನ್ ಸಖಾಫಿ ಉಸ್ತಾದ್ (ನ,ಮ) ರವರೊಂದಿಗೆ ನಾಳೆ ಸುಖಲೋಕ ಸ್ವರ್ಗದಲ್ಲಿ ನಮ್ಮನ್ನೂ ಸೇರಿಸು. ಯಾ ಅಲ್ಲಾಹ್!!


SHARE THIS

Author:

0 التعليقات: