Tuesday, 1 June 2021

ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೋವಿಡ್ ವೈರಸ್ ಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನಾಮಕರಣ


ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೋವಿಡ್ ವೈರಸ್ ಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನಾಮಕರಣ

ನ್ಯೂಯಾರ್ಕ್, ಜೂ.1: ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಕೋವಿಡ್19ನ ರೂಪಾಂತರಿತ ಪ್ರಭೇದಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ‘ಕಪ್ಪಾ ಹಾಗೂ ‘ಡೆಲ್ಟಾ ’ ಎಂದು ಸೋಮವಾರ ನಾಮಕರಣ ಮಾಡಿದೆ.

ಈವರೆಗೆ ಬಿ.1.617.1 ಹಾಗೂ ಬಿ.1.617.2 ಎಂದು ಗುರುತಿಸಲ್ಪಡುತ್ತಿದ್ದ ಈ ವೈರಸ್ಗಳಿಗೆೆ ಭಾರತೀಯ ಪ್ರಭೇದವೆಂದು ಹಣೆಪಟ್ಟಿ ಕಟ್ಟಿದ್ದಕ್ಕಾಗಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಗೆ ಮೇ 12ರಂದು ಆಕ್ಷೇಪ ವ್ಯಕ್ತಪಡಿದ ಮೂರು ವಾರಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಈ ನಡೆಯನ್ನಿರಿಸಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ನಿರ್ವಹಣಾ ವಿಭಾಗದ ತಾಂತ್ರಿಕ ಮುಖ್ಯಸ್ಥೆ ಡಾ. ಮಾರಿಯಾ ವ್ಯಾನ್ ಕೆರ್ಖೊವ್ ಅವರು ಈ ಮೊದಲು ನೀಡಿದ ಹೇಳಿಕೆಯೊಂದರಲ್ಲಿ ವೈರಸ್ ಅಥವಾ ರೂಪಾಂತರಿತ ಪ್ರಭೇದಗಳಾಗಲಿ ಅವು ಪತ್ತೆಯಾದ ದೇಶಗಳ ಹೆಸರಿನೊಂದಿಗೆ ಗುರುತಿಸಬಾರದೆಂದು ತಿಳಿಸಿದ್ದರು.

ಭಾರತ, ಬ್ರಿಟನ್, ಬ್ರೆಝಿಲ್ ಹಾಗೂ ದಕ್ಷಿಣ ಆಫ್ರಿಕ ದೇಶಗಳಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಕೊರೋನ ವೈರಸ್ ನ ರೂಪಾಂತರ ಪ್ರಭೇದಗಳು ‘ಆತಂಕಕಾರಿ’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ.‌


SHARE THIS

Author:

0 التعليقات: