ಮೂಗಿನಲ್ಲೇ ಟೈಪ್ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್ ದಾಖಲೆಗಳ ಸರದಾರ ವಿನೋದ್ ಕುಮಾರ್
ನವದೆಹಲಿ: ಗಿನ್ನೆಸ್ ದಾಖಲೆಗಳೆಂದರೆ ಬಹಳ ವಿಚಿತ್ರ, ವಿಶೇಷವಾಗಿರುತ್ತವೆ. ನವದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ವಿನೋದ್ ಕುಮಾರ್ ಚೌಧರಿ ಇಂತಹದ್ದೇ ವಿಚಿತ್ರ ದಾಖಲೆಗಳನ್ನು ನಿರ್ಮಿಸಿದ್ದಾರೆ.
2014ರಲ್ಲಿ ಮೂಗಿನಲ್ಲಿ ಅತಿವೇಗವಾಗಿ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅದಾದ ಮೇಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೇಗವಾಗಿ ಟೈಪ್ ಮಾಡಿ ತೋರಿಸಿದ್ದಾರೆ. ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು, ಅದರಲ್ಲೂ ಟೈಪ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಹೀಗೆ ಅವರು 9 ಗಿನ್ನೆಸ್ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಕೊನೆಯ ದಾಖಲೆ ನಿರ್ಮಾಣವಾಗಿದ್ದು ಕಳೆದ ವರ್ಷದ ಕೊರೊನಾ ಲಾಕ್ಡೌನ್ನಲ್ಲಿ. ಅವರು ಒಂದು ನಿಮಿಷದಲ್ಲಿ ಟೆನಿಸ್ ಚೆಂಡನ್ನು 205 ಬಾರಿ ಮುಟ್ಟಿದ್ದಾರೆ. ವಿಶೇಷವೆಂದರೆ ತಮ್ಮ ಮನೆಯಲ್ಲಿ ಅವರು ದಿವ್ಯಾಂಗ ಮತ್ತು ಬಡಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡುತ್ತಾರೆ. ಇಂತಹ ಹೊತ್ತಿನಲ್ಲೇ ಹೊಸಹೊಸ ಪ್ರಯೋಗ ಮಾಡಿದ್ದಾರೆ.
0 التعليقات: