Tuesday, 8 June 2021

ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು


ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು

ಜೋಹಾನ್ಸ್ ಬರ್ಗ್: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಾದ ಆಶಿಶ್ ಲತಾ ರಾಮ್ ಗೋಬಿನ್ (56) ಅವರಿಗೆ ದಕ್ಷಿಣ ಆಫ್ರಿಕಾದ ಡರ್ಬಾನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಉದ್ಯಮಿಯೊಬ್ಬರಿಗೆ ಬರೋಬ್ಬರಿ 3.22 ಕೋಟಿ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆಯಲ್ಲಿ ಆಶಿಶ್ ಲತಾ ವಿರುದ್ಧ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಇಳಾ ಗಾಂಧಿ ಹಾಗೂ ಮೇವಾ ರಾಮ್ ಗೋಬಿನ್ ಪುತ್ರಿಯಾದ ಆಶಿಶ್ ಲತಾ, ಭಾರತದಿಂದ ಮೂರು ಕಂಟೇನರ್ ಲಿನಿನ್ ಬಟ್ಟೆಗಳನ್ನು ತರುವುದಾಗಿ ಹೇಳಿ ನ್ಯೂ ಆಫ್ರಿಕಾ ಅಲೈನ್ಸ್ ಕಂಪನಿ ನಿರ್ದೇಶಕ ಮಹಾರಾಜ್ ಅವರನ್ನು ವಂಚಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದರು ಎನ್ನಲಾಗಿದೆ.

ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ಡರ್ಬಾನ್ ನ್ಯಾಯಾಲಯ ಆಶಿಶ್ ಲತಾ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


SHARE THIS

Author:

0 التعليقات: