Sunday, 6 June 2021

ಚಿರತೆ ದಾಳಿಗೆ 5ರ ಬಾಲಕಿ ಬಲಿ!

ಚಿರತೆ ದಾಳಿಗೆ 5ರ ಬಾಲಕಿ ಬಲಿ!

ಶ್ರೀನಗರ: ತನ್ನ ಅಣ್ಣನ ಬರ್ತ್‌ಡೇ ಪಾರ್ಟಿ ವೇಳೆಯೇ 5 ವರ್ಷದ ಬಾಲಕಿಯನ್ನು ಚಿರತೆಯೊಂದು ಹೊತ್ತೂಯ್ದು ಕೊಂದು ಹಾಕಿದ ಮನಕಲುಕುವ ಘಟನೆ ಶ್ರೀನಗರದಲ್ಲಿ ನಡೆದಿದೆ.

ಮೃತ ಮಗುವನ್ನು ಮಿರ್‌ ಅದ್ದಾ(5) ಎಂದು ಗುರುತಿಸಲಾಗಿದೆ. ಮನೆಯ ಹೊರಗೆ ನಿಂತು ಪುಟಾಣಿ ಅದ್ದಾ, ಎಲ್ಲರನ್ನೂ ಬರ್ತ್‌ಡೇ ಪಾರ್ಟಿಗೆ ಕರೆಯುತ್ತಿರುವಂತೆಯೇ ಚಿರತೆ ದಾಳಿ ನಡೆಸಿದೆ.

ಅರಣ್ಯಾಧಿಕಾರಿಗಳ ಸಹಾಯದಿಂದ ಅದ್ದಾಳನ್ನು ರಾತ್ರಿಯಿಡೀ ಹುಡುಕಿದರೂ, ರಕ್ತದ ಕಲೆ ಮತ್ತು ಆಕೆಯ ಕೈಯ್ಯಲ್ಲಿದ್ದ ಗೊಂಬೆ ಹೊರತುಪಡಿಸಿ ಬೇರೇನೂ ಸಿಕ್ಕಿರಲಿಲ್ಲ. ಮಾರನೇ ದಿನ ಚಿರತೆಯ ಕ್ರೂರ ದಾಳಿಗೆ ಬಲಿಯಾದ ಮಗುವಿನ ದೇಹದ ಭಾಗಗಳು ಪತ್ತೆಯಾಗಿವೆ. ತನ್ನ ಸಾವಿಗೂ ಮುಂಚೆ “ಇದು ನಾನು… ಇಲ್ಲಿ ನನ್ನ ಪಾರ್ಟಿ ನಡೆಯುತ್ತಿದೆ’ ಎಂದು ಹೇಳುತ್ತಿರುವ ಅದ್ದಾಳ ವಿಡಿಯೋ ವೈರಲ್‌ ಆಗಿದ್ದು, ಅನೇಕರು ಕಣ್ಣೀರಾಗಿದ್ದಾರೆ.


SHARE THIS

Author:

0 التعليقات: