Saturday, 19 June 2021

ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ, 40 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ವಶ


ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ, 40 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ವಶ

ಕಂಪ್ಲಿ: ತಾಲ್ಲೂಕಿನ ರಾಮಸಾಗರ ಗ್ರಾಮ ಹೊರಲವಲಯದ ಸಿದ್ದೇಶ್ವರಕ್ರಾಸ್ ಕಣಿವಿ ತಿಮ್ಮಲಾಪುರ ರಸ್ತೆಯ ರೇಷ್ಮೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ಅಕ್ರಮ ಪಡಿತರವನ್ನು ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ದಾಸರ ಕನಕರಾಯ ಅವರಿಗೆ ಸೇರಿದ ಜಮೀನಿನಲ್ಲಿರುವ ರೇಷ್ಮೆ ಗೋದಾಮಿನಲ್ಲಿ 40.92 ಕ್ವಿಂಟಲ್ ಪಡಿತರ ಅಕ್ಕಿ ಸಂಗ್ರಹಿಸಿದ್ದು, ಅದರ ಮೌಲ್ಯ ರೂ. 61,380 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಶಿರಸ್ತೇದಾರ ಎಚ್. ನಾಗರಾಜ ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎ.ಎಸ್.ಐ ಹಗರಪ್ಪ, ಕಂದಾಯ ನಿರೀಕ್ಷಕ ಗಣೇಶ್, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಮಂಜುನಾಥ್, ವಿಜಯಕುಮಾರ್, ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.


SHARE THIS

Author:

0 التعليقات: