ಲಕ್ಷಗಟ್ಟಲೆ ವಿಶ್ವಾಸಿಗಳು ಪಾಲ್ಗೊಳ್ಳುವ ಮದನೀಯಂ 313- ನೇ ಮಜ್ಲಿಸ್ ಜೂನ್ 17 ಕ್ಕೆ
ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವ ವಹಿಸುವ ಲಕ್ಷಗಟ್ಟಲೆ ವಿಶ್ವಾಸಿಗಳು ಪಾಲ್ಗೊಳ್ಳುವ ಮದನೀಯಂ ಇದರ 313-ನೇ ಮಜ್ಲಿಸ್ ಇದೇ ಬರುವ ಜೂನ್ 17 ರಂದು ಮಗ್ರಿಬ್ ನಮಾಝಿನ ಬಳಿಕ "Madaneeyam Latheef Saqafi Kanthapuram" ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಹಾಗೂ ಮದನೀಯಂ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಭಾಗವಹಿಸಲಿದ್ದಾರೆ.ಸಾವಿರಾರು ಮನೆಗಳಲ್ಲಿ ಏಕ ಸಮಯದಲ್ಲಿ ವೀಕ್ಷಿಸುವಂತಹ ದೀನಿ ಕಾರ್ಯಕ್ರಮ.
ಸಿನಿಮಾ ದಾರವಾಹಿಗಳಿಗೆ ಆಕರ್ಷಿತರಾಗಿದ್ದಂತಹ ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನ,ಮತ್ತು ಪ್ರಬುದ್ಧತೆಯ ಪಾಠವನ್ನು ಕಲಿಸಿದಂತಹ ಕಾರ್ಯಕ್ರಮ ,
ಲಾಕ್-ಡೌನ್ ಸಮಯದಲ್ಲಿ ವಿಶ್ವಾಸಿಗಳ ಇಬಾದತ್ ಗಳಿಗೆ ತೊಡಕಾದಾಗ ಆ ವಿಶ್ವಾಸಿಗಳ ಹೃದಯಕ್ಕೆ ಸ್ವಲಾತಿನ ಮೂಲಕ ತಣ್ಣನೆಯ ಗಾಳಿಯನ್ನು ಬೀಸಿದಂತಹ ಮದನೀಯಂ ಕಾರ್ಯಕ್ರಮಕ್ಕೆ ಇದೇ ಬರುವ 17ನೇ ತಾರೀಕಿಗೆ 313 ಸಂಚಿಕೆಯ ಸಂಭ್ರಮ.
0 التعليقات: