ತುಂಗಾ ಜಲಾಯಶದ 21 ಕ್ರಸ್ಟ್ ಗೇಟ್ ಗಳ ತೆರವು: 2020 ಕ್ಯೂಸೆಕ್ಸ್ ನೀರು ಬಿಡುಗಡೆ
ಶಿವಮೊಗ್ಗ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತುಂಗಾ ಜಲಾಶಯದ 21 ಕ್ರಸ್ಟ್ಗೇಟ್ ಗಳ ಮೂಲಕ 2020 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯದ 22 ಕ್ರಸ್ಟ್ ಗೇಟ್ ಗಳ ಪೈಕಿ 21 ಗೇಟ್ ಗಳನ್ನು ಅಧಿಕಾರಿಗಳು ತೆರೆದಿದ್ದಾರೆ. 2020 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಕೂಳೂರು ಸೇತುವೆಗೆ ಮತ್ತೆ 'ತೇಪೆ ಭಾಗ್ಯ'! :ವಾಹನ ಸವಾರರ ಸಂಚಾರಕ್ಕೆ ಸಂಚಕಾರ!
ತುಂಗಾ ಜಲಾಶಯದ ಗರಿಷ್ಟ ಸಾಮರ್ಥ್ಯ 3.24 ಟಿಎಂಸಿಯಾಗಿದೆ. ಕಳೆದ ತಿಂಗಳಲ್ಲೇ ಈ ಗರಿಷ್ಟ ಮಟ್ಟ ತಲುಪಿತ್ತು. ಇದೀಗ ತುಂಗಾ ಜಲಾಶಯದಿಂದ ವಿದ್ಯುತ್ ಉತ್ಪಾದನೆಗೆ 5300 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿದ್ದರೆ, ನದಿಗೆ ಒಟ್ಟು 7300 ಕ್ಯೂಸೆಕ್ಸ್ ನಷ್ಟು ನೀರು ಬಿಡುಗಡೆ ಮಾಡಲಾಗಿದೆ.
0 التعليقات: