ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಗೈಡ್-2021 ಆನ್ಲೈನ್ ಲಿಡರ್ಸ್ ಟ್ರೈನಿಂಗ್
ಜೂನ್ 01 ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ಆಶ್ರಯದಲ್ಲಿ ಮೇ 24 ರಿಂದ ಮೇ 31 ರ ತನಕ ಸತತ ಎಂಟು ದಿನಗಳ ಗೈಡ್ - 2021 ಆನ್ಲೈನ್ ತರಗತಿಯು ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸಾಂತ್ವನ ವಿಭಾಗದ ಚೆಯರ್ ಮೆನ್ ಜಿ.ಎಮ್ ಮುಹಮ್ಮದ್ ಕಾಮಿಲ್ ಸಖಾಫಿ, ಎಸ್.ವೈ.ಎಸ್ ಕೋಝಿಕ್ಕೋಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಲಾಂ ಮಾಸ್ಟರ್ ಮಾವೂರು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಫೈನಾನ್ಸ್ ಸೆಕ್ರೆಟರಿ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ,ಖ್ಯಾತ ಲೇಖಕರು ಹಾಗೂ ಚಿಂತಕರಾದ ಎ.ಕೆ ನಂದಾವರ, ಡಾಕ್ಟರ್ ಬಿ.ಎಮ್ ಮುಹ್ಸಿನ್ ಮಾಸ್ಟರ್ ಕೇರಳ, ಎಸ್ಸೆಸ್ಸೆಫ್ ಕೇರಳ ಕಣ್ಣೂರು ಜಿಲ್ಲಾಧ್ಯಕ್ಷರಾದ ಅನಸ್ ಅಮಾನಿ ಪುಷ್ಪಗಿರಿ, ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ದಅ್ ವಾ ಕನ್ವೀನರ್ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ, ಎಸ್ಸೆಸ್ಸೆಫ್ ಕೇರಳ ರಾಜ್ಯ ಮಾಜಿ ಅಧ್ಯಕ್ಷರಾದ ಸಿ.ಕೆ ರಾಶೀದ್ ಬುಖಾರಿ ತರಗತಿಗಳನ್ನು ನಡೆಸಿದರು.
ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಎಸ್.ಈ.ಡಿ.ಸಿ ರಾಜ್ಯಾಧ್ಯಕ್ಷರಾದ ಕೆ.ಕೆ ಕಾಮಿಲ್ ಸಖಾಫಿ ಸುರಿಬೈಲ್,
ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಉಸ್ತುವಾರಿ ನವಾಝ್ ಸಖಾಫಿ ಅಡ್ಯಾರ್ ಪದವು, ಎಸ್.ವೈ.ಎಸ್ ಕೃಷ್ಣಾಪುರ ಸೆಂಟರ್ ಅಧ್ಯಕ್ಷರಾದ ಹಬೀಬ್ರುಹ್ಮಾನ್ ಸಖಾಫಿ ಕಾಟಿಪಳ್ಳ, ಎಸ್.ವೈ.ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಸಖಾಫಿ ಕಿನ್ನಿಗೋಳಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಅಬ್ದುರ್ರಾಹ್ಮನ್ ಹಾಜಿ ಕೃಷ್ಣಾಪುರ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಹೈದರ್ ಆಲಿ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ದಅ್ ವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ ಭಾಗವಹಿಸಿದರು.
0 التعليقات: