ಪಾಕಿಸ್ತಾನದಲ್ಲಿ ಬಸ್ ಪಲ್ಟಿ: 18 ಜನರ ಸಾವು
ಕರಾಚಿ: ಬಸ್ ಪಲ್ಟಿಯಾದ ಪರಿಣಾಮ 18 ಮಂದಿ ಮೃತಪಟ್ಟು, 30 ಜನರು ಗಾಯಗೊಂಡ ಘಟನೆ ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ.
ವಾಧ್ನಿಂದ ದಾಬು ಎಂಬಲ್ಲಿಗೆ ತೆರಳುತ್ತಿದ್ದ ಬಸ್, ಖುಜ್ದಾರ್ ಜಿಲ್ಲೆಯ ಖೋರಿ ಎಂಬಲ್ಲಿ ಪಲ್ಟಿಯಾಗಿದೆ. ಬಸ್ ವೇಗವಾಗಿ ಚಲಿಸುತ್ತಿದ್ದಾಗ, ಚಾಲಕ ನಿಯಂತ್ರಣ ಕಳೆದುಕೊಂಡ. ಹೀಗಾಗಿ ಬಸ್ ಪಲ್ಟಿಯಾಯಿತು ಎಂದು ಮೂಲಗಳು ತಿಳಿಸಿವೆ.
15 ಜನರು ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಜಿಯೊ ನ್ಯೂಸ್ ಚಾನೆಲ್ ವರದಿ ಮಾಡಿದೆ.
ಗಾಯಗೊಂಡವರನ್ನು ಖುಜ್ದಾರ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
0 التعليقات: