Tuesday, 1 June 2021

ರಾಜ್ಯದಲ್ಲಿಂದು 14,304 ಕೊರೋನ ಪ್ರಕರಣ, 464 ಮಂದಿ ಬಲಿ

ರಾಜ್ಯದಲ್ಲಿಂದು 14,304 ಕೊರೋನ ಪ್ರಕರಣ, 464 ಮಂದಿ ಬಲಿ

ಬೆಂಗಳೂರು, ಜೂ. 1: ರಾಜ್ಯದಲ್ಲಿ ಮಂಗಳವಾರ 14,304 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿವೆ. 464 ಮಂದಿ ಸೋಂಕಿಗೆ ಬಲಿಯಾಗಿದ್ದು, 29,271 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 26,18,735ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 29,554ಕ್ಕೆ ತಲುಪಿದೆ. 

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,98,299ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

464 ಸೋಂಕಿತರು ಬಲಿ: ಬಳ್ಳಾರಿ 14, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 276, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 2, ಚಿತ್ರದುರ್ಗ 7, ದಕ್ಷಿಣ ಕನ್ನಡ 5, ದಾವಣಗೆರೆ 5, ಧಾರವಾಡ 9, ಗದಗ 4, ಹಾಸನ 11, ಹಾವೇರಿ 6, ಕಲಬುರಗಿ 7, ಕೊಡಗು 4, ಕೋಲಾರ 3, ಕೊಪ್ಪಳ 8, ಮಂಡ್ಯ 3, ರಾಯಚೂರು 3, ರಾಮನಗರ 3, ಶಿವಮೊಗ್ಗ 13, ತುಮಕೂರು 9, ಉಡುಪಿ 3, ಉತ್ತರ ಕನ್ನಡ 8, ವಿಜಯಪುರ  ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 14,304 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ  ಬಾಗಲಕೋಟೆ 217, ಬಳ್ಳಾರಿ 399, ಬೆಳಗಾವಿ 891, ಬೆಂಗಳೂರು ಗ್ರಾಮಾಂತರ 202, ಬೆಂಗಳೂರು ನಗರ 3,418, ಬೀದರ್ 22, ಚಾಮರಾಜನಗರ 80, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 504, ಚಿತ್ರದುರ್ಗ 637, ದಕ್ಷಿಣ ಕನ್ನಡ 536, ದಾವಣಗೆರೆ 178, ಧಾರವಾಡ 267, ಗದಗ 214, ಹಾಸನ 1,127, ಹಾವೇರಿ 219, ಕಲಬುರಗಿ 82, ಕೊಡಗು 162, ಕೋಲಾರ 338, ಕೊಪ್ಪಳ 272, ಮಂಡ್ಯ 337, ಮೈಸೂರು 1,153, ರಾಯಚೂರು 133, ರಾಮನಗರ 138, ಶಿವಮೊಗ್ಗ 520, ತುಮಕೂರು 769, ಉಡುಪಿ 735, ಉತ್ತರ ಕನ್ನಡ 332, ವಿಜಯಪುರ 163, ಯಾದಗಿರಿ ಜಿಲ್ಲೆಯಲ್ಲಿ 107 ಪ್ರಕರಣಗಳು ಪತ್ತೆಯಾಗಿವೆ.


SHARE THIS

Author:

0 التعليقات: