ಆಂಧ್ರ ಪ್ರದೇಶದಲ್ಲಿ ಒಂದೇ ದಿನ 13 ಲಕ್ಷ ಮಂದಿಗೆ ಕೊರೋನಾ ಲಸಿಕೆ
ಅಮರಾವತಿ: ಕೋವಿಡ್ ಲಸಿಕೆ ವಿತರಣೆಯಲ್ಲಿ ಆಂಧ್ರ ಪ್ರದೇಶದ ದಾಖಲೆ ಬರೆದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 13 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.
ಈ ಬಗ್ಗೆ ಆಂಧ್ರ ಪ್ರದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಆಂಧ್ರ ಪ್ರದೇಶದ ಎಲ್ಲಾ 13 ಜಿಲ್ಲೆಗಳಲ್ಲಿ 2,200 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ ಸಂಜೆ 8 ರವರೆಗೆ ಸುಮಾರು 13.26 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿನ ಸರ್ಕಾರವು ಲಸಿಕೆ ಪೂರೈಕೆಯನ್ನು ನಿರ್ವಹಿಸಿದರೆ ನಮ್ಮ ವೈದ್ಯಕೀಯ ತಂಡ ಮತ್ತು ಇತರ ಸಿಬ್ಬಂದಿ ಒಂದು ದಿನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಇದು ತೋರಿಸಿದೆ. ಜನವರಿ 16 ರಿಂದ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ 1.10 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 27.29 ಲಕ್ಷ ಎರಡನೇ ಡೋಸ್ ದೊರೆತಿದೆ. ಇಲ್ಲಿವರೆಗೆ 1.37 ಕೋಟಿ ಡೋಸ್ ಗೆ ಏರಿಕೆಯಾಗಿದೆ.
0 التعليقات: