Sunday, 13 June 2021

ಕಚ್ಚಿದ ಹಾವನ್ನೇ ಕೈಯಲ್ಲಿಡಿದು 13 ಕಿ.ಮೀ ಬೈಕ್ ನಲ್ಲಿ ಕ್ರಮಿಸಿ ಆಸ್ಪತ್ರೆಗೆ ಬಂದ ಭೂಪ..!

 ಕಚ್ಚಿದ ಹಾವನ್ನೇ ಕೈಯಲ್ಲಿಡಿದು 13 ಕಿ.ಮೀ ಬೈಕ್ ನಲ್ಲಿ ಕ್ರಮಿಸಿ ಆಸ್ಪತ್ರೆಗೆ ಬಂದ ಭೂಪ..!

ಬಳ್ಳಾರಿ: ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್ ನಲ್ಲಿ 13 ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಬಂದ ಘಟನೆ ಕಂಪ್ಲಿ ತಾಲೂಕಿನಲ್ಲಿ ನಡೆದಿದೆ.

           ಉಪ್ಪಾರಹಳ್ಳಿಯ ಕಾಡಪ್ಪ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ನಾಗರಹಾವು ಕಚ್ಚಿದ್ದು, ಇದರಿಂದ ರೊಚ್ಚಿಗೆದ್ದ ಭೂಪ ಜೀವಂತ ಹಾವಿನ ಜೊತೆ ಸ್ನೇಹಿತನೊಬ್ಬನ ಜೊತೆಗೆ ಬೈಕ್ ನಲ್ಲಿ ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ಕಂಡು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಅಲ್ಲಿನ ವೈದ್ಯರು ಹಾವನ್ನು ಬಿಟ್ಟರೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ. ನಂತರ ಹಾವನ್ನು ಆಸ್ಪತ್ರೆ ಆವರಣದಲ್ಲೇ ಬಿಟ್ಟಿದ್ದು, ಜನರು ಹಾವನ್ನು ಹೊಡೆದು ಸಾಯಿಸಿದ್ದಾರೆ. ಕಾಡಪ್ಪನಿಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ.


SHARE THIS

Author:

0 التعليقات: