Tuesday, 1 June 2021

ಸಿಬಿಎಸ್ ಇ 12ನೇ ತರಗತಿಯ ಮಂಡಳಿ ಪರೀಕ್ಷೆ ರದ್ದು: ಪ್ರಧಾನಿ ನರೇಂದ್ರ ಮೋದಿ


ಸಿಬಿಎಸ್ ಇ 12ನೇ ತರಗತಿಯ ಮಂಡಳಿ ಪರೀಕ್ಷೆ ರದ್ದು: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ:  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವರ್ಷ  ಸಿಬಿಎಸ್ ಇ 12ನೇ ತರಗತಿಯ ಮಂಡಳಿ ಪರೀಕ್ಷೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

"ವ್ಯಾಪಕವಾದ ಸಮಾಲೋಚನೆಗಳ ನಂತರ, ನಾವು ವಿದ್ಯಾರ್ಥಿ-ಸ್ನೇಹಿ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ಯುವಕರ ಆರೋಗ್ಯ ಹಾಗೂ  ಭವಿಷ್ಯವನ್ನು ಕಾಪಾಡುತ್ತದೆ'' ಎಂದು ಪ್ರಧಾನಿ ಹೇಳಿದ್ದಾರೆ.

ಉನ್ನತ ಅಧಿಕಾರಿಗಳ ಜೊತೆ  ಸಭೆ ನಡೆಸಿದ ಬಳಿಕ ಪ್ರಧಾನಿ ಈ  ನಿರ್ಧಾರಕ್ಕೆ ಬಂದರು. ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ,   ಪ್ರಕಾಶ್ ಜಾವಡೇಕರ್ ಹಾಗೂ ಪಿಯೂಷ್ ಗೋಯಲ್ ಭಾಗಿಯಾಗಿದ್ದರು. 


SHARE THIS

Author:

0 التعليقات: