Monday, 28 June 2021

ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ.?????

ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ.?????


ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್​ ಜಾರಕಿಹೊಳಿ ರಾಜಕೀಯ ಜೀವನದಲ್ಲಿ ತಮ್ಮ ವರ್ಚಸ್ಸನ್ನ ವಾಪಸ್​ ಪಡೆಯಲು ಇನ್ನಿಲ್ಲದ ಗಾಳವನ್ನ ಬಳಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಗೋಕಾಕ್​ ಸಾಹುಕಾರನಿಗೆ ಸಹೋದರರು ಕೆಲ ಸಲಹೆಗಳನ್ನ ನೀಡಿದ್ದು ರಮೇಶ್​​ ಇದೀಗ ಪ್ರತಿಷ್ಠೆಯನ್ನ ವಾಪಸ್​ ಪಡೆಯಲು ಹೊಸ ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ತಡರಾತ್ರಿಯೇ ಬೆಂಗಳೂರಿಗೆ ಬಂದು ತಲುಪಿರುವ ರಮೇಶ್​ ಜಾರಕಿಹೊಳಿ ಇಂದು ಹಾಗೂ ನಾಳೆ ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿಗೆ ರಮೇಶ್​ ಜಾರಕಿಹೊಳಿ ಕಾತುರರಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ರನ್ನೂ ಭೇಟಿಯಾಗಲು ರಮೇಶ್​ ನಿರ್ಧರಿಸಿದ್ರು. ಆದರೆ ಕಟೀಲ್​ ಸಹೋದರನ ಅಗಲಿಕೆ ಹಿನ್ನೆಲೆ ಕೊನೆ ಕ್ಷಣದಲ್ಲಿ ಈ ಭೇಟಿ ರದ್ದಾಗಿದೆ.

ಬೆಂಗಳೂರಲ್ಲಿ ಆಪ್ತರು ಹಾಗೂ ಸ್ನೇಹಿತರನ್ನ ಭೇಟಿಯಾಗಲಿರೋ ರಮೇಶ್​ ನಾಳೆ ರಾತ್ರಿಯೇ ಗೋಕಾಕ್​ಗೆ ವಾಪಸ್ಸಾಗಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರೋ ರಮೇಶ್​ರ ಮನವೊಲಿಸುವಲ್ಲಿ ಸಹೋದರ ಲಖನ್​ ಹಾಗೂ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಜುಲೈ 1 ನೇ ತಾರೀಖಿನಂದು ಗೋಕಾಕ್​ನಲ್ಲಿ ವೈದ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಮೇಶ್​ ಹಾಗೂ ಬಾಲಚಂದ್ರ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ರಮೇಶ್​ ಜಾರಕಿಹೊಳಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ನಿರ್ಣಯ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


SHARE THIS

Author:

0 التعليقات: