Wednesday, 30 June 2021

 ಮಾಜಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ನಿಧನ, ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ

ಮಾಜಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ನಿಧನ, ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ


 ಮಾಜಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ನಿಧನ, ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ

ಲಕ್ನೋ / ಸಂತ ಕಬೀರ್ ನಗರ: ಹರ್ಯಾಣದ ಗುರುಗ್ರಾಮದ ಮೆದಂತಾ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದಾಗಿ ಸಂತ ಕಬೀರ್‌ನಗರದ ಮಾಜಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಯಕೃತ್ತು ಸಂಬಂಧಿತ ಕಾಯಿಲೆಯಿಂದ ತ್ರಿಪಾಠಿ (49 ವರ್ಷ) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ತ್ರಿಪಾಠಿ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ  ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಅವರ ಆಪ್ತ ಸಂಬಂಧಿ ಹಾಗೂ  ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಯ್ ಮಿಶ್ರಾ ತಿಳಿಸಿದ್ದಾರೆ.

ತ್ರಿಪಾಠಿ 2014 ರಲ್ಲಿ ಸಂತ ಕಬೀರ್ ನಗರ ಲೋಕಸಭಾ ಸ್ಥಾನದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ತ್ರಿಪಾಠಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ಸುದ್ದಿಯು ಆಘಾತ ತಂದಿದೆ ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೃತರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸಿದ್ದಾರೆ.

 ನಾರದಾ ಪ್ರಕರಣ: ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಮನವಿ ಪುರಸ್ಕರಿಸಿದ ಹೈಕೋರ್ಟ್

ನಾರದಾ ಪ್ರಕರಣ: ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಮನವಿ ಪುರಸ್ಕರಿಸಿದ ಹೈಕೋರ್ಟ್


 ನಾರದಾ ಪ್ರಕರಣ: ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಮನವಿ ಪುರಸ್ಕರಿಸಿದ ಹೈಕೋರ್ಟ್

ಕೋಲ್ಕತಾ: ನಾರದಾ ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನ ಮೂವರು ಮುಖಂಡರನ್ನು ಬಂಧಿಸಿದಾಗ ಕಳೆದ ತಿಂಗಳು ಸಿಬಿಐ ಕಚೇರಿಯ ಹೊರಗೆ ನಡೆದ ಪ್ರತಿಭಟನೆಯ ಕುರಿತು ಸರಕಾರದ ವತಿಯಿಂದ ಅಫಿಡವಿಟ್ ಸಲ್ಲಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ  ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ.

 ಅಫಿಡವಿಟ್ ಅನ್ನು ಸಮಯಕ್ಕೆ ಸರಿಯಾಗಿ  ಸಲ್ಲಿಸದ ಕಾರಣಕ್ಕೆ ನ್ಯಾಯಾಲಯವು ಮಮತಾ ಹಾಗೂ ಬಂಗಾಳ ಸರಕಾರಕ್ಕೆ 5,000 ರೂ. ದಂಡವನ್ನು ವಿಧಿಸಿದೆ.

ಕಳೆದ ವಾರ, ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹಾಗೂ  ಇತರರು ಸಲ್ಲಿಸಿದ್ದ ಅಫಿಡವಿಟ್ ಸ್ವೀಕರಿಸಲು ನಿರಾಕರಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು

ಅಫಿಡವಿಟ್‌ಗಳನ್ನು ತೆಗೆದುಕೊಳ್ಳುವುದನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ಕೋರಿ ಹೊಸದಾಗಿ ಮನವಿ ಸಲ್ಲಿಸುವಂತೆ ಬ್ಯಾನರ್ಜಿ ಮತ್ತು ಬಂಗಾಳ ಕಾನೂನು ಸಚಿವ ಮೊಲೊಯ್ ಘಟಕ್ ಅವರಿಗೆ ಸುಪ್ರೀಂಕೋರ್ಟ್  ನಿರ್ದೇಶನ ನೀಡಿತು. ಅಫಿಡವಿಟ್‌ಗಳನ್ನು ದಾಖಲಿಸುವಂತೆ ಉನ್ನತ ನ್ಯಾಯಾಲಯವು ಹೈಕೋರ್ಟ್‌ಗೆ ಆದೇಶಿಸಿದೆ.

ಜೂನ್ 9 ರಂದು ಕಲ್ಕತ್ತಾ ಹೈಕೋರ್ಟ್‌ನ ಐವರು ನ್ಯಾಯಾಧೀಶರ ನ್ಯಾಯಪೀಠ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದಲ್ಲಿ ಬ್ಯಾನರ್ಜಿ ಹಾಗೂ  ಘಟಕ್ ಅವರು ಸಲ್ಲಿಸಿದ ಅಫಿಡವಿಟ್‌ಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು.

ಬ್ಯಾನರ್ಜಿ ಅವರು ಜೂನ್ 21 ರಂದು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದರು.

 ಕೋವಿನ್ ಮೂಲಕ ಮಾತ್ರ ಲಸಿಕೆ ಆದೇಶ ನೀಡಬೇಕು: ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಸೂಚನೆ

ಕೋವಿನ್ ಮೂಲಕ ಮಾತ್ರ ಲಸಿಕೆ ಆದೇಶ ನೀಡಬೇಕು: ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಸೂಚನೆ


 ಕೋವಿನ್ ಮೂಲಕ ಮಾತ್ರ ಲಸಿಕೆ ಆದೇಶ ನೀಡಬೇಕು: ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಸೂಚನೆ

ಹೊಸದಿಲ್ಲಿ: ಖಾಸಗಿ ಆಸ್ಪತ್ರೆಗಳು ಕೋವಿನ್(CoWIN) ಮೂಲಕ ಕೋವಿಡ್ ಲಸಿಕೆ ಆದೇಶ ನೀಡಬೇಕು. ಕೋವಿನ್ ನಲ್ಲಿ ಅದು ನೋಂದಾಯಿಸಿಕೊಳ್ಳಬೇಕು. ಇನ್ನು ಮುಂದೆ ಉತ್ಪಾದಕರಿಂದ ನೇರವಾಗಿ ಡೋಸೇಜ್ ಖರೀದಿಸಲು ಸಾಧ್ಯವಿಲ್ಲ ಎಂದು ಸರಕಾರ ಮಂಗಳವಾರ ತಿಳಿಸಿದೆ.

ಸೀಮಿತ ಪೂರೈಕೆಯನ್ನು ಸಮತೋಲನಗೊಳಿಸಲು ಹಾಗೂ ವ್ಯರ್ಥವಾಗುವುದನ್ನು ತಡೆಯಲು ಖಾಸಗಿ ಆಸ್ಪತ್ರೆಯು ಒಂದು ತಿಂಗಳವರೆಗೆ ಆದೇಶಿಸಬಹುದಾದ ಡೋಸೇಜ್‌ಗಳ ಮೇಲೆ ಸರಕಾರವು ಕ್ಯಾಪ್ ಅಥವಾ "ಗರಿಷ್ಠ ಮಿತಿ" ಯನ್ನು ವಿಧಿಸಿದೆ.

ಹೊಸ ಮಾರ್ಗಸೂಚಿಗಳು ಜುಲೈ 1 ರಿಂದ ಜಾರಿಗೆ ಬರುತ್ತವೆ ಹಾಗೂ ಇದು  ಒಂದು ಸೂತ್ರವನ್ನು ಒಳಗೊಂಡಿರುತ್ತದೆ .

ಮೊದಲ ಬಾರಿಗೆ ವ್ಯಾಕ್ಸಿನೇಷನ್ ಡ್ರೈವ್‌ಗೆ ಸೇರುವ ಆಸ್ಪತ್ರೆಗಳಿಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಆಧರಿಸಿ ಲಸಿಕೆಗಳನ್ನು ಹಂಚಲಾಗುತ್ತದೆ.

ಎಲ್ಲಾ ಖಾಸಗಿ ಆಸ್ಪತ್ರೆಗಳು ಅಗತ್ಯ ವಿವರಗಳನ್ನು ಕೋವಿನ್ ಡೇಟಾಬೇಸ್‌ಗೆ ನಮೂದಿಸುತ್ತವೆ. ಅದು ಮಾಹಿತಿಯನ್ನು ಉತ್ಪಾದಕರಿಗೆ ತಲುಪಿಸುವ ಮೊದಲು ಜಿಲ್ಲೆ ಹಾಗೂ  ರಾಜ್ಯವಾರು ಬೇಡಿಕೆಯನ್ನು ಒಟ್ಟುಗೂಡಿಸುತ್ತದೆ. ಸರಕಾರಿ ಅಧಿಕಾರಿಗಳಿಂದ ಯಾವುದೇ ಪೂರ್ವ ಅನುಮೋದನೆ ಅಗತ್ಯವಿಲ್ಲ.

Tuesday, 29 June 2021

 ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೆರವು: ಟಿ.ಎಸ್.ನಾಗಾಭರಣ

ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೆರವು: ಟಿ.ಎಸ್.ನಾಗಾಭರಣ


 ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೆರವು: ಟಿ.ಎಸ್.ನಾಗಾಭರಣ

ಬೆಂಗಳೂರು: ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಸದುದ್ದೇಶ ಹೊಂದಿರುವ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಪ್ರಯತ್ನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಕಲ ನೆರವನ್ನು ನೀಡಲು ಸಿದ್ಧವಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ಮಸೀದಿ, ಮದ್ರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರ ನಡೆಸುವ ಸಂಬಂಧ ವಿಧಾನಸೌಧದಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ, ಅಲ್‍ಫೈಝ್ ಟ್ರಸ್ಟ್, ಮತ್ತಿಕೆರೆಯ ಮಸ್ಜಿದೆ ತಾಹ, ಫಲಾಹೆ ದಾರೇನ್ ಎಜುಕೇಷನಲ್ ಸೋಶಿಯಲ್ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದು ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆ ಮತ್ತು ಅದರ ಸಹೋದರ ಸಂಸ್ಥೆಗಳು ಎಲ್ಲರೂ ಸೇರಿ ನನ್ನ ಜೊತೆ ಮಸೀದಿ, ಮದ್ರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರಗಳನ್ನು ಪ್ರಾಯೋಜಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ನಮ್ಮಲ್ಲಿ ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಿದ್ದರೆ ಅದು ಈಗಾಗಲೆ ತನ್ನನ್ನು ತಾನು ಕಳೆದುಕೊಳ್ಳುತ್ತಿತ್ತು. ಆದರೆ, ಅದು ವ್ಯವಹಾರಕ್ಕೆ ಮೀರಿದ ಆತ್ಮೀಯತೆಯನ್ನು, ಸೌಹಾರ್ದತೆಯನ್ನು ಹಾಗೂ ಬದುಕನ್ನು ಕಟ್ಟಿಕೊಡುವಂತದ್ದಾಗಿದೆ ಎಂದು ನಾಗಾಭರಣ ತಿಳಿಸಿದರು.

ಇಂತಹ ಭಾಷೆಯ ಬೆಳವಣಿಗೆಯಲ್ಲಿ ನಮ್ಮನ್ನು ನಾವು ಸಮೀಕರಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದನ್ನು ಒಪ್ಪಿಕೊಂಡು ಕನ್ನಡದ ಜೊತೆ ನಾನು ಇದ್ದೇನೆ ಎಂದು ಒಪ್ಪಿಕೊಳ್ಳುವ ಪ್ರತಿಯೊಬ್ಬರಿಗೂ ಕನ್ನಡದ ಕದ ತೆರೆದುಕೊಳ್ಳುತ್ತದೆ. ಮಹಮ್ಮದೀಯರ ಕನ್ನಡ ವೇದಿಕೆ ಹಾಗೂ ಅದರ ಸಹೋದರ ಸಂಸ್ಥೆಗಳು ಕೇವಲ ಕನ್ನಡ ಕಲಿಕಾ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಿಲ್ಲ. ಅದರ ಜೊತೆಗೆ ಕನ್ನಡದ ಬದುಕನ್ನು ನಮಗೆ ಕೊಡಿ, ಎಲ್ಲರೂ ಒಟ್ಟಾಗಿ ಕನ್ನಡ ಕಟ್ಟೋಣ ಎಂಬ ಈ ಧ್ಯೇಯವನ್ನು ಹೊಂದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಸಮೀಉಲ್ಲಾ ಖಾನ್ ಮಾತನಾಡಿ, ಈ ಹಿಂದೆ ಪ್ರೊ.ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಚಂದ್ರು ಅವರು ಅಧ್ಯಕ್ಷರಾಗಿದ್ದ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಮದ್ರಸಾ ಮತ್ತು ಮಸೀದಿಗಳಲ್ಲಿ ಕನ್ನಡ ಕಲಿಕಾ ಹಾಗೂ ಕನ್ನಡ ಸಂಸ್ಕೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ಈ ವಿಚಾರವನ್ನು ಟಿ.ಎಸ್.ನಾಗಾಭರಣ ಅವರ ಗಮನಕ್ಕೆ ತರಲಾಗಿದೆ ಎಂದರು.

ಬೆಂಗಳೂರು ನಗರದ ಮತ್ತಿಕೆರೆಯಲ್ಲಿರುವ ಮಸ್ಜಿದೆ ತಾಹಾ, ಎಚ್.ಬಿ.ಆರ್.ಬಡಾವಣೆಯಲ್ಲಿರುವ ಫಲಾಹೇ ದಾರೇನ್ ಎಜುಕೇಷನಲ್ ಸೋಶಿಯಲ್ ಚಾರಿಟೇಬಲ್ ಟ್ರಸ್ಟ್, ಹೆಗ್ಡೆ ನಗರದ ಅಲ್‍ಫೈಝ್ ಟ್ರಸ್ಟ್ ಗಳಲ್ಲಿ ಕನ್ನಡ ಕಲಿಕಾ ಮತ್ತು ಕನ್ನಡ ಸಂಸ್ಕೃತಿ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿರುವ ಕುರಿತು ತಿಳಿಸಿದ್ದೇವೆ. ನಮ್ಮ ಮನವಿಗೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ, ಮತ್ತಿಕೆರೆಯಲ್ಲಿ ಕನ್ನಡ ಕಲಿಕಾ ಕೇಂದ್ರಕ್ಕೆ ಶಾಶ್ವತ ಕಟ್ಟಡ ಸ್ಥಾಪನೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಕನ್ನಡ ಕಲಿಕೆಯೊಂದಿಗೆ ಸಂಸ್ಕೃತಿ ಶಿಬಿರ ನಡೆಸುವ ಉದ್ದೇಶ, ಸೌಹಾರ್ದಯುತ ನಾಡಿಗೆ ಶಿಶುನಾಳ ಶರೀಫರ ಕೊಡುಗೆ, ಏಕೀಕರಣಕ್ಕೆ ರಂಜಾನ್ ಸಾಬ್ ಅವರ ಕೊಡುಗೆ, ಕನ್ನಡ ನಾಡಿಗಾಗಿ ಹೋರಾಟ ಮಾಡಿರುವವರು ಯಾರು, ಅವರ ಕೊಡುಗೆಗಳು ಏನು ಅನ್ನೋದನ್ನು ನಮ್ಮ ಮಕ್ಕಳಿಗೆ ತಿಳಿಸಬೇಕಿದೆ ಎಂದು ಸಮೀಉಲ್ಲಾ ಖಾನ್ ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಕಾರ್ಯದರ್ಶಿ ಸಾಗರ್ ಸಮೀವುಲ್ಲಾ, ಉಪಾಧ್ಯಕ್ಷ ಶಹಜಹಾನ್, ಅಲ್‍ ಫೈಝ್ ಟ್ರಸ್ಟ್ ಅಧ್ಯಕ್ಷ ಸಲಾಹುದ್ದೀನ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, 28 June 2021

 ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ.?????

ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ.?????

ಜುಲೈ 1ರಂದು ರಮೇಶ್​ ಜಾರಕಿಹೊಳಿ ರಾಜಕೀಯ ನಿರ್ಧಾರ ಬಹಿರಂಗ.?????


ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್​ ಜಾರಕಿಹೊಳಿ ರಾಜಕೀಯ ಜೀವನದಲ್ಲಿ ತಮ್ಮ ವರ್ಚಸ್ಸನ್ನ ವಾಪಸ್​ ಪಡೆಯಲು ಇನ್ನಿಲ್ಲದ ಗಾಳವನ್ನ ಬಳಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಗೋಕಾಕ್​ ಸಾಹುಕಾರನಿಗೆ ಸಹೋದರರು ಕೆಲ ಸಲಹೆಗಳನ್ನ ನೀಡಿದ್ದು ರಮೇಶ್​​ ಇದೀಗ ಪ್ರತಿಷ್ಠೆಯನ್ನ ವಾಪಸ್​ ಪಡೆಯಲು ಹೊಸ ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ತಡರಾತ್ರಿಯೇ ಬೆಂಗಳೂರಿಗೆ ಬಂದು ತಲುಪಿರುವ ರಮೇಶ್​ ಜಾರಕಿಹೊಳಿ ಇಂದು ಹಾಗೂ ನಾಳೆ ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿಗೆ ರಮೇಶ್​ ಜಾರಕಿಹೊಳಿ ಕಾತುರರಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ರನ್ನೂ ಭೇಟಿಯಾಗಲು ರಮೇಶ್​ ನಿರ್ಧರಿಸಿದ್ರು. ಆದರೆ ಕಟೀಲ್​ ಸಹೋದರನ ಅಗಲಿಕೆ ಹಿನ್ನೆಲೆ ಕೊನೆ ಕ್ಷಣದಲ್ಲಿ ಈ ಭೇಟಿ ರದ್ದಾಗಿದೆ.

ಬೆಂಗಳೂರಲ್ಲಿ ಆಪ್ತರು ಹಾಗೂ ಸ್ನೇಹಿತರನ್ನ ಭೇಟಿಯಾಗಲಿರೋ ರಮೇಶ್​ ನಾಳೆ ರಾತ್ರಿಯೇ ಗೋಕಾಕ್​ಗೆ ವಾಪಸ್ಸಾಗಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರೋ ರಮೇಶ್​ರ ಮನವೊಲಿಸುವಲ್ಲಿ ಸಹೋದರ ಲಖನ್​ ಹಾಗೂ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಜುಲೈ 1 ನೇ ತಾರೀಖಿನಂದು ಗೋಕಾಕ್​ನಲ್ಲಿ ವೈದ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಮೇಶ್​ ಹಾಗೂ ಬಾಲಚಂದ್ರ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ರಮೇಶ್​ ಜಾರಕಿಹೊಳಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ನಿರ್ಣಯ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಲಬುರ್ಗಾ: ಮದ್ಯ ಮುಕ್ತ ಗ್ರಾಮಗಳಲ್ಲಿ ಮಸ್‌ದರ್ ವತಿಯಿಂದ 'ಕಟ್ಟೆಹರಟೆ'

ಯಲಬುರ್ಗಾ: ಮದ್ಯ ಮುಕ್ತ ಗ್ರಾಮಗಳಲ್ಲಿ ಮಸ್‌ದರ್ ವತಿಯಿಂದ 'ಕಟ್ಟೆಹರಟೆ'


ಯಲಬುರ್ಗಾ: ಮದ್ಯ ಮುಕ್ತ ಗ್ರಾಮಗಳಲ್ಲಿ ಮಸ್‌ದರ್ ವತಿಯಿಂದ 'ಕಟ್ಟೆಹರಟೆ'

ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಮರಿ ಹಾಗೂ ತರಲಕಟ್ಟಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಕಳೆದ ಎರಡು ತಿಂಗಳ ಹಿಂದೆ ಮದ್ಯ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ್ದು, ಈ ಗ್ರಾಮದಲ್ಲಿ ಮಾದಕ ದ್ರವ್ಯ ವಿರೋಧಿ ದಿನದ ಪ್ರಯುಕ್ತ ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಕಟ್ಟೆ ಹರಟೆ ಕಾರ್ಯಕ್ರಮ ನಡೆಯಿತು. 

ಸಂಪೂರ್ಣ ಮದ್ಯ ಮುಕ್ತ ಗ್ರಾಮವೆಂದು ಘೋಷಣೆ ಮಾಡಿರುವ ಈ ಹಳ್ಳಿಗಳಿಗೆ ಅಭಿನಂದನೆ ಸಲ್ಲಿಸಿದ ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಅವರು ಗ್ರಾಮದ ಮುಖಂಡರೊಂದಿಗೆ ಮಾತುಕತೆಗೆ ನೇತೃತ್ವ ವಹಿಸಿದರು. 

ಕಳೆದ ಎರಡು ತಿಂಗಳ ಹಿಂದೆ ಮಾಡಿದ ಈ ತೀರ್ಮಾನದಿಂದ ಊರಿನಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದ್ದು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟರು. 

ದುಡಿದ ಹಣ ಕೂಡ ಈಗ ಉಳಿಯುತ್ತಿದ್ದು ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆ ಕೂಡ ಸುಲಭವಾಗಿದೆ. ಪ್ರತಿ ಗ್ರಾಮಗಳೂ ಇದನ್ನು ಮಾದರಿ ಮಾಡಿ ಈ ಪಿಡುಗಿಗೆ ಅಂತ್ಯ ಹಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

 ಕಾಸರಗೋಡು, ಮಂಜೇಶ್ವರದ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ:   ಶಾಸಕ ಎ.ಕೆ.ಎಂ.ಅಶ್ರಫ್

ಕಾಸರಗೋಡು, ಮಂಜೇಶ್ವರದ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ: ಶಾಸಕ ಎ.ಕೆ.ಎಂ.ಅಶ್ರಫ್


ಕಾಸರಗೋಡು, ಮಂಜೇಶ್ವರದ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ: 
ಶಾಸಕ ಎ.ಕೆ.ಎಂ.ಅಶ್ರಫ್

ಮಂಜೇಶ್ವರ, ಜೂ.29: ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು. ಇಂತಹ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಶಾಸಕರು, ''ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಹೆಸರು ಹೊಂದಿರುವ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸುವಂತೆ ಸರಕಾರ ಆದೇಶಿಸಿದೆ ಎಂಬ ವಿಚಾರ ಹಬ್ಬಿದ್ದು, ಇದು ಕಳೆದ ಕೆಲ ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಅವರ ಕಚೇರಿಯನ್ನು ಮತ್ತು ಅವರ ಪಿಎ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯನ್ನೂ ಪೋನ್ ಮ‌ೂಲಕ ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ. ಈ ಎಲ್ಲಾ ಮಾಹಿತಿ ಪ್ರಕಾರ ಸ್ಥಳ ನಾಮ ಬದಲಾವಣೆ ಬಗ್ಗೆ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ. ಈ ನಡುವೆ ರೇಶನ್ ಕಾರ್ಡ್ ನಲ್ಲಿ ಸಾಫ್ಟ್ ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ನಿಜ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ'' ಎಂದು ಹೇಳಿದ್ದಾರೆ.

ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಿರುವ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರಕಾರಗಳು ಕೈಗೊಂಡಿದೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂದವರು ಮನವಿ ಮಾಡಿದ್ದಾರೆ.

ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ಧದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ. ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ಹರ್ಡಲ್ಸ್‌: ದಾಖಲೆ ಬರೆದ ಮೆಕ್ ಲಾಫ್ಲಿನ್

ಹರ್ಡಲ್ಸ್‌: ದಾಖಲೆ ಬರೆದ ಮೆಕ್ ಲಾಫ್ಲಿನ್

ಹರ್ಡಲ್ಸ್‌: ದಾಖಲೆ ಬರೆದ ಮೆಕ್ ಲಾಫ್ಲಿನ್

ಯೂಜಿನಿ, ಅಮೆರಿಕ: ಪ್ರತಿಕೂಲ ಹವಾಮಾನದಲ್ಲೂ ಮಿಂಚಿನ ಓಟ ಪ್ರದರ್ಶಿಸಿದ ಅಮೆರಿಕದ ಸಿಡ್ನಿ ಮೆಕ್ ಲಾಫ್ಲಿನ್ ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಒಲಿಂಪಿಕ್ಸ್‌ ಅರ್ಹತೆಗಾಗಿ ಭಾನುವಾರ ನಡೆದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದರು.

ಇಲ್ಲಿ ಬಿಸಿಲಿನ ಝಳಕ್ಕೆ ಜನರು ಕಂಗೆಟ್ಟಿದ್ದಾರೆ. ಈ ನಡುವೆ ನಡೆದ 10 ದಿನಗಳ ಅಥ್ಲೆಟಿಕ್ಸ್ ಟ್ರಯಲ್ಸ್‌ನ ಕೊನೆಯ ದಿನದ ಮಧ್ಯಾಹ್ನದ ನಂತರದ ಸ್ಪರ್ಧೆಗಳನ್ನು ಸಂಜೆಗೆ ಮುಂದೂಡಲಾಯಿತು. ತಂಗಾಳಿ ಬೀಸಲು ಆರಂಭವಾಗುತ್ತಿದ್ದಂತೆ ನಡೆದ ಹರ್ಡಲ್ಸ್‌ನಲ್ಲಿ ಮೆಕ್ ಲಾಫ್ಲಿನ್ 51.90 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹಾಲಿ ಒಲಿಂಪಿಕ್ ಚಾಂಪಿಯನ್‌ ಮತ್ತು ವಿಶ್ವ ಚಾಂಪಿಯನ್‌ ದಲಿಲಾ ಮುಹಮ್ಮದ್ ಅವರಿಂದ ಪ್ರಬಲ ಪೈಪೋಟಿ ಎದುರಿಸಿದ 21 ವರ್ಷದ ಮೆಕ್ ಲಾಫ್ಲಿನ್ ಈ ಸ್ಪರ್ಧೆಯಲ್ಲಿ 52 ಸೆಕೆಂಡುಗಳ ಒಳಗೆ ಗುರಿ ಸಾಧಿಸಿದ ಮೊದಲ ಮಹಿಳೆ ಎನಿಸಿಕೊಂಡರು.

2019ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೆಕ್ ಲಾಫ್ಲಿನ್ ಅವರನ್ನು ಹಿಂದಿಕ್ಕಿ ದಲಿಲಾ ಮುಹಮ್ಮದ್ ವಿಶ್ವ ದಾಖಲೆ ನಿರ್ಮಿಸಿದ್ದರು. ಅಂದು ಅವರು 52.16 ಸೆಕೆಂಡುಗಳ ಸಾಧನೆ ಮಾಡಿದ್ದರು. ಭಾನುವಾರ 52.42 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಗಳಿಸಿದರು. ಅನಾ ಕೊಕ್ರೆಲ್ (53.70 ಸೆ) ಮೂರನೇಯವರಾದರು.

'ಇಂದು ಬೆಳಿಗ್ಗೆ ಎಚ್ಚರವಾದಾಗಲೇ ಇವತ್ತಿನ ದಿನ ವಿಶೇಷ ಸಾಧನೆಯಾಗಲಿದೆ ಎಂದೆನಿಸಿತ್ತು. ಅನೇಕ ವರ್ಷಗಳಿಂದ ಕಂಡ ಕನಸು ಈಗ ನನಸಾಗಿದೆ. ಈ ಗಳಿಗೆಯನ್ನು ಜೀವನ ಪೂರ್ತಿ ಸಂಭ್ರಮಿಸುವೆ' ಎಂದು ಮೆಕ್ ಲಾಫ್ಲಿನ್ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಮೆಕ್‌ಲಾಘ್ಲಿನ್ ಮತ್ತು ದಲಿಲಾ ಮುಹಮ್ಮದ್ ಪಾರುಪತ್ಯ ಮೆರೆಯುತ್ತಿದ್ದಾರೆ. ದಾಖಲೆ ಮಾಡಿದ ನಂತರ ಪ್ರತಿಸ್ಪರ್ಧಿಯನ್ನು ಮೆಕ್ ಲಾಫ್ಲಿನ್ ಕೊಂಡಾಡಿದರು.

'ನನ್ನ ದಾಖಲೆಗೆ ಮೆಕ್ ಲಾಫ್ಲಿನ್ ಬಹುದೊಡ್ಡ ಸವಾಲಾಗಿದ್ದಾರೆ ಎಂದು ಗೊತ್ತೇ ಇತ್ತು. ಈಗ ಹಾಗೆಯೇ ಆಗಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಮತ್ತಷ್ಟು ಉತ್ತಮ ಸಾಮರ್ಥ್ಯ ಪ್ರದರ್ಶಿಸಲಿದ್ದೇನೆ' ಎಂದು ದಲಿಲಾ ಹೇಳಿದರು.


 ಚಿನ್ನದ ಬೆಲೆ ಶೇಕಡಾ 6.8ರಷ್ಟು ಕುಸಿತ

ಚಿನ್ನದ ಬೆಲೆ ಶೇಕಡಾ 6.8ರಷ್ಟು ಕುಸಿತ


ಚಿನ್ನದ ಬೆಲೆ ಶೇಕಡಾ 6.8ರಷ್ಟು ಕುಸಿತ

ಅಮೂಲ್ಯವಾದ ಹಳದಿ ಲೋಹದ ಬೆಲೆಯು ಈ ತಿಂಗಳು ತೀವ್ರ ಕುಸಿತವನ್ನು ಕಂಡಿದ್ದು, ಜಾಗತಿಕವಾಗಿ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಗೊಂಡು 1,775.42 ಡಾಲರ್‌ಗೆ ತಲುಪಿದೆ. ಬ್ಲೂಮ್‌ಬರ್ಗ್ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ತಿಂಗಳಲ್ಲಿ ಚಿನ್ನದ ಬೆಲೆಯ ಅತಿ ಹೆಚ್ಚಿನ ಕುಸಿತ ಇದಾಗಿದೆ. ಈ ತಿಂಗಳು ಶೇ. 6.8ರಷ್ಟು ಇಳಿಕೆಯಾಗಿದ್‌ಉದ, ನವೆಂಬರ್ 2016ರ ಬಳಿಕ ಕಂಡಂತಹ ಅತಿ ಹೆಚ್ಚಿನ ಮಾಸಿಕ ಇಳಿಕೆಯಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ, ಎಂಸಿಎಕ್ಸ್‌ನಲ್ಲಿನ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.18ರಷ್ಟು ಇಳಿಕೆಯಾಗಿ 46,923 ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ 67,844 ರೂಪಾಯಿಗೆ ತಲುಪಿದ್ದು ಶೇಕಡಾ 0.44ರಷ್ಟು ಕಡಿಮೆಯಾಗಿದೆ.

ಭಾರತೀಯ ಮಾರುಕಟ್ಟೆಗಳಲ್ಲಿ, ಈ ತಿಂಗಳು ಇಲ್ಲಿಯವರೆಗೆ ಚಿನ್ನವು ಸುಮಾರು 2,300 ರೂಪಾಯಿನಷ್ಟು ಅಥವಾ ಸುಮಾರು ಶೇ. 5ರಷ್ಟು ಕಡಿಮೆಯಾಗಿದೆ. ಬೆಳ್ಳಿ ಕೂಡ ಈ ತಿಂಗಳು ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ತಿಂಗಳಲ್ಲಿ ಸುಮಾರು ಶೇಕಡಾ 7ರಷ್ಟು ಅಥವಾ 5,600 ರೂಪಾಯಿ ಕಡಿಮೆಯಾಗಿದೆ.

ಬ್ಲೂಮ್‌ಬರ್ಗ್ ಡಾಲರ್ ಸ್ಪಾಟ್ ಸೂಚ್ಯಂಕವು ಜೂನ್‌ನಲ್ಲಿ ಶೇಕಡಾ 1.8ರಷ್ಟು ಏರಿಕೆಯಾಗಿದೆ ಮತ್ತು ಇದು ಮಾರ್ಚ್ 2020 ರ ನಂತರದ ಅತಿದೊಡ್ಡ ಮಾಸಿಕ ಲಾಭದತ್ತ ಸಾಗುತ್ತಿದೆ. ಬಲವಾದ ದೃಢವಾದ ಡಾಲರ್ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ದುಬಾರಿಯನ್ನಾಗಿ ಮಾಡುತ್ತದೆ.


ದಾರಿ ತಪ್ಪಿದ ಸೊಸೆ;   ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ

ದಾರಿ ತಪ್ಪಿದ ಸೊಸೆ; ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ


ದಾರಿ ತಪ್ಪಿದ ಸೊಸೆ; 
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ

ತುಮಕೂರು: ಉಜ್ಜನಕುಂಟೆಯಲ್ಲಿ ಅತ್ತೆಯನ್ನು ಕೊಲೆ ಮಾಡಿದ ಸೊಸೆಯನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಜ್ಜನಕುಂಟೆ ಗ್ರಾಮದ ಸುಧಾಮಣಿ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು ಎನ್ನಲಾಗಿದೆ.

ಜೂನ್ 14 ರಂದು ಸುಧಾಮಣಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು. ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಕೊಲೆ ವಿಚಾರ ಗೊತ್ತಾಗಿದೆ. ಸುಧಾಮಣಿ ಮತ್ತು ಆಕೆಯ ಪ್ರಿಯಕರ ಶ್ರೀರಂಗಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ರಾಜ್ಯದಲ್ಲಿ ಇಂದು 2,576 ಮಂದಿಗೆ ಸೋಂಕು, 93 ಮಂದಿ ಸಾವು

ರಾಜ್ಯದಲ್ಲಿ ಇಂದು 2,576 ಮಂದಿಗೆ ಸೋಂಕು, 93 ಮಂದಿ ಸಾವು

ರಾಜ್ಯದಲ್ಲಿ ಇಂದು 2,576 ಮಂದಿಗೆ ಸೋಂಕು, 93 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 2,576 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 93 ಜನರು ಸೋಂಕಿಗೆ ಬಲಿಯಾಗಿದ್ದು, 5,933 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 28,37,206ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 34,836ಕ್ಕೆ ತಲುಪಿದೆ.ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 97,592ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

93 ಸೋಂಕಿತರು ಬಲಿ: ಬಳ್ಳಾರಿ 9, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 18, ಬೀದರ್ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 14, ದಾವಣಗೆರೆ 4, ಧಾರವಾಡ 5, ಗದಗ 2, ಹಾಸನ 5, ಹಾವೇರಿ 3, ಕೊಡಗು 1, ಕೋಲಾರ 1, ಮಂಡ್ಯ 3, ಮೈಸೂರು 8, ರಾಯಚೂರು 1, ರಾಮನಗರ 1, ಶಿವಮೊಗ್ಗ 3, ತುಮಕೂರು 2, ಉಡುಪಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 2,576 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ  ಬಾಗಲಕೋಟೆ 8, ಬಳ್ಳಾರಿ 19, ಬೆಳಗಾವಿ 68, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 563, ಬೀದರ್ 3, ಚಾಮರಾಜನಗರ 55, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 83, ಚಿತ್ರದುರ್ಗ 45, ದಕ್ಷಿಣ ಕನ್ನಡ 263, ದಾವಣಗೆರೆ 81, ಧಾರವಾಡ 28, ಗದಗ 17, ಹಾಸನ 138, ಹಾವೇರಿ 13, ಕಲಬುರಗಿ 4, ಕೊಡಗು 150, ಕೋಲಾರ 79, ಕೊಪ್ಪಳ 55, ಮಂಡ್ಯ 95, ಮೈಸೂರು 282, ರಾಯಚೂರು 9, ರಾಮನಗರ 14, ಶಿವಮೊಗ್ಗ 194, ತುಮಕೂರು 99, ಉಡುಪಿ 71, ಉತ್ತರ ಕನ್ನಡ 52, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 18 ಜನರು ಸಾವು

ರಾಜಧಾನಿಯಲ್ಲಿ ಸೋಮವಾರದಂದು 563 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 18 ಜನರು ಮೃತಪಟ್ಟಿದ್ದಾರೆ. 1,588 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,11,993 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 15,599 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 11,33,963 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


ಬೆಂಗಳೂರಿನಲ್ಲಿ ಅನುಮಾನಾಸ್ಪದ ಸೂಟ್‍ಕೇಸ್ : ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸೂಟ್‍ಕೇಸ್ : ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸೂಟ್‍ಕೇಸ್ : ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ


ಬೆಂಗಳೂರು: ಇಲ್ಲಿನ ಮಲ್ಲೇಶ್ವರದಲ್ಲಿ ಅನುಮಾನಾಸ್ಪದ ಸೂಟ್‍ಕೇಸ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ಪರಿಶೀಲನೆ ನಡೆಸಿದರು.

ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 15ನೆ ಕ್ರಾಸ್‍ನ ಪಾದಚಾರಿ ರಸ್ತೆಯಲ್ಲಿ ಸೂಟ್‍ಕೇಸ್ ಕಂಡಿತ್ತು. ಅದನ್ನು ನೋಡಿದ್ದ ಸ್ಥಳೀಯರು, ಸೂಟ್‍ಕೇಸ್‍ನಲ್ಲಿ ಬಾಂಬ್ ಇರಬಹುದು ಎಂದು ಶಂಕಿಸಿ ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು, ಸೂಟ್‍ಕೇಸ್ ಇದ್ದ ಜಾಗದಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಿದ್ದರು. ನಂತರ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಸೂಟ್‍ಕೇಸ್ ತೆರೆದಾಗ ಬಟ್ಟೆಗಳು ಮಾತ್ರ ಇದ್ದವು ಎಂದು ತಿಳಿದುಬಂದಿದೆ.

'ಸೂಟ್‍ಕೇಸ್‍ನಲ್ಲಿ ಸ್ಫೋಟಕ ವಸ್ತು ಇರುವ ಆತಂಕವಿತ್ತು. ಪರಿಶೀಲಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಇರಲಿಲ್ಲ. ಬಟ್ಟೆಗಳು ಮಾತ್ರ ಇದ್ದವು' ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.


 ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರಿನಲ್ಲಿ ಮುಳುಗಿ ಮೃತ್ಯು

ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರಿನಲ್ಲಿ ಮುಳುಗಿ ಮೃತ್ಯು


ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರಿನಲ್ಲಿ ಮುಳುಗಿ ಮೃತ್ಯು

ಬೆಳಗಾವಿ, ಜೂ.28: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೋಮವಾರ ಉತ್ತರ ಕರ್ನಾಟಕದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಸಾಲಭಾಧೆಯಿಂದ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದರೆ, ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲಾಗಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

ನಾಲ್ವರು ಸಹೋದರರು ನೀರುಪಾಲು: ಕೃಷ್ಣಾ ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲಾಗಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮೃತರನ್ನು ಗೋಪಾಲ ಬನಸುಡೆ(36), ಸದಾಶಿವ(24), ಧರೆಪ್ಪ(22) ಹಾಗೂ ಶಂಕರ ಬನಸುಡೆ ಎಂದು ಗುರುತಿಸಲಾಗಿದೆ.

ನಾಲ್ವರು ಸಹೋದರರು ಗ್ರಾಮದಲ್ಲಿ ಜಾತ್ರೆ ಇರುವ ಕಾರಣ ಕುಟುಂಬದ ಸದಸ್ಯರ ಜೊತೆಗೆ ಬಟ್ಟೆ ತೊಳೆಯಲು ಕೃಷ್ಣಾ ನದಿಗೆ ಹೋಗಿದ್ದರು. ಈ ವೇಳೆ ಸದಾಶಿವ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ ಮೂವರೂ ಸಹೋದರರು ಸದಾಶಿವ ಜೊತೆ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

 ರಾಜ್ಯದಲ್ಲಿಂದು ಕೊರೊನಾ ಭಾರಿ ಇಳಿಕೆ:

ರಾಜ್ಯದಲ್ಲಿಂದು ಕೊರೊನಾ ಭಾರಿ ಇಳಿಕೆ:


ರಾಜ್ಯದಲ್ಲಿಂದು ಕೊರೊನಾ ಭಾರಿ ಇಳಿಕೆ:

ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳ ನಂತರ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಭಾರೀ ಇಳಿಮುಖವಾಗಿದೆ.

ಮೊದಲ ಬಾರಿಗೆ ಹೊಸ ಕೇಸ್ 3 ಸಾವಿರಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 2576 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,37,206 ಕ್ಕೆ ಏರಿಕೆಯಾಗಿದೆ.

ಇವತ್ತು 5933 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 27,04,755 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು 93 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 34,836 ಸೋಂಕಿತರು ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆಯಾಗಿದ್ದು, 97,592 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.92 ಇದೆ.

ರಾಜಧಾನಿ ಬೆಂಗಳೂರಿನಲ್ಲಿ 563 ಜನರಿಗೆ ಸೋಂಕು ತಗುಲಿದೆ. 18 ಸೋಂಕಿತರು ಮೃತಪಟ್ಟಿದ್ದಾರೆ. 1588 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 62,430 ಸಕ್ರಿಯ ಪ್ರಕರಣಗಳಿವೆ.

 ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ


ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಯಾದಗಿರಿ, ಜೂ. 28: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತಪಟ್ಟವರು.

ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಈಜುಗಾರರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ.

'ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ತನಿಖೆ ನಂತರವೇ ಸಂತ್ಯಾಂಶ ಹೊರ ಬರಲಿದೆ' ಎಂದು ಶಹಾಪುರ ಕ್ರೈಂ ಪಿಎಸ್‌ಐ ಆರ್.ಶಾಮಸುಂದರ ನಾಯಕ ತಿಳಿಸಿದ್ದಾರೆ.

ಪೊಲೀಸರು, ತಹಶೀಲ್ದಾರ್ ಸ್ಥಳಕ್ಕೆ‌ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.


 

Sunday, 27 June 2021

 ಇರಾಕ್, ಸಿರಿಯಾ ಮೇಲೆ ಅಮೆರಿಕ ವಾಯುದಾಳಿ

ಇರಾಕ್, ಸಿರಿಯಾ ಮೇಲೆ ಅಮೆರಿಕ ವಾಯುದಾಳಿ


ಇರಾಕ್, ಸಿರಿಯಾ ಮೇಲೆ ಅಮೆರಿಕ ವಾಯುದಾಳಿ

ವಾಷಿಂಗ್ಟನ್: ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರರ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯ ಮೇಲೆ ಸೋಮವಾರ ನಸುಕಿನಲ್ಲಿ ಅಮೆರಿಕ ವಾಯುಪಡೆ ಮೂರು ವಾಯುದಾಳಿಗಳನ್ನು ನಡೆಸಿದೆ.

ಅಮೆರಿಕದ ಸೇನೆ ಇರುವ ಪ್ರದೇಶಗಳಲ್ಲಿ ಇತ್ತೀಚೆಗೆ ಸಶಸ್ತ್ರ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.

"ಇರಾಕ್- ಸಿರಿಯಾ ಗಡಿ ಪ್ರದೇಶದಲ್ಲಿ ಇರಾನ್ ಬೆಂಬಲಿತ ಉಗ್ರ ಗುಂಪುಗಳು ಹೊಂದಿದ್ದ ಸೌಲಭ್ಯಗಳ ಮೇಲೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ನಿರ್ದೇಶನದ ಮೇರೆಗೆ ಅಮೆರಿಕ ಮಿಲಿಟರಿ ಪಡೆಗಳು ರಕ್ಷಣಾತ್ಮಕ ನಿಖರ ವಾಯುದಾಳಿ ನಡೆಸಿವೆ" ಎಂದು ಪೆಂಟಗಾನ್ ವಕ್ತಾಋ ಜಾನ್ ಎಫ್.ಕಿರ್ಬಿ ಪ್ರಕಟನೆಯಲ್ಲಿ ಹೇಳಿದ್ದಾರೆ.

ಕತೈಬ್ ಹಿಝ್ಬುಲ್ಲಾ ಮತ್ತು ಕತೈಬ್ ಸೈಯಿದ್ ಅಲ್‌ ಶುಹದಾ ಸೇರಿದಂತೆ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಅಮೆರಿಕನ್ನರು ವಾಸವಿರುವ ಪ್ರದೇಶದ ಮೇಲೆ ಡ್ರೋನ್ ದಾಳಿ ನಡೆಸಲು ಬಳಸುತ್ತಿದ್ದ ಸೌಲಭ್ಯಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಕಿರ್ಬಿ ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ವಾಯುದಾಳಿಗೆ ಬೈಡೆನ್ ಆದೇಶಿಸಿರುವುದು ಇದು ಎರಡನೇ ಬಾರಿ. ಕಳೆದ ಫೆಬ್ರವರಿಯಲ್ಲಿ ಪೂರ್ವ ಸಿರಿಯಾದಲ್ಲಿ ಅಮೆರಿಕ ವಾಯುದಾಳಿ ನಡೆಸಿತ್ತು.

 ಅಬ್ದುಲ್ ಖಾದರ್ ಹಾಜಿ ಕೊಯಿಲ ನಿಧನ

ಅಬ್ದುಲ್ ಖಾದರ್ ಹಾಜಿ ಕೊಯಿಲ ನಿಧನ


ಅಬ್ದುಲ್ ಖಾದರ್ ಹಾಜಿ ಕೊಯಿಲ ನಿಧನ

ನಿಧನ : ಬಡಗನ್ನೂರು ,ಕೊಯಿಲ ನಿವಾಸಿ ಕೊಯಿಲದಲ್ಲಿ ಹಲವಾರು ವರ್ಷಗಳಿಂದ ದಿನಸಿ ವ್ಯಾಪಾರ ಮಾಡಿಕೊಂಡು ಜನಾನುರಾಗಿಯಾಗಿದ್ದ ಹಾಜಿ ಸಿ.ಕೆ. ಅಬ್ದುಲ್‌ ಖಾದರ್ರವರು ನಿನ್ನೆ ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮಹಮದೀಯ ಮಸೀದಿ ಪಾಲಡ್ಕ ಇದರ ನಿರ್ದೇಶಕರೂ ಪ್ರಗತಿಪರ ಕೃಷಿಕರೂ ಆಗಿದ್ದ ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

ಮಕ್ಕಳು: ಎಸ್ ವೈ ಎಸ್ ಕೊಯಿಲ ಬ್ರಾಂಚ್ ಅಧ್ಯಕ್ಷ ಮಹಮ್ಮದ್ ಖಾನ್, ಅಬ್ದುಲ್ಲಾ ಸ ಅದಿ, ಅಬ್ದುಲ್ ರಹಿಮಾನ್, ಮುಹಮ್ಮದಿಯಾ ಜುಮಾ ಮಸ್ಜಿದ್ ಕಾರ್ಯದರ್ಶಿ ಅಹಮದ್ ನಯೀಮಿ, ಸಿದ್ದಿಖ್, ಝೈನಬ, ಆಸಿಯಾ

 ಯಾಣ.!  ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ

ಯಾಣ.! ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ


ಯಾಣ.!  ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ ವಿಹರಿಸುತ್ತಾ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳು ನಾದವನ್ನು ಸವಿಯುತ್ತಾ ದಿನ ಕಳೆಯಬಹುದು.

ಇಲ್ಲಿ ಕಾಣಿಸುವ ಎರಡು ಎತ್ತರವಾದ ಬಂಡೆಗಳೇ ಇಲ್ಲಿನ ವಿಶೇಷತೆ. ಒಂದು ಬಂಡೆಯನ್ನು ಮೋಹಿನಿ ಶಿಖರ ಮತ್ತೊಂದನ್ನು ಭೈರವೇಶ್ವರ ಶಿಖರ ಎಂದು ಕರೆಯುತ್ತಾರೆ. ಭೈರವೇಶ್ವರ ಬಂಡೆಯಲ್ಲಿ ಒಂದು ಸಣ್ಣ ಗುಹೆ ಇದೆ. ಶಿವಲಿಂಗ ಹಾಗೂ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ.

ಶಿವರಾತ್ರಿ ವೇಳೆ ಅಪಾರ ಭಕ್ತಸಾಗರ ಇಲ್ಲಿಗೆ ಹರಿದು ಬರುತ್ತದೆ. ಸ್ವಲ್ಪ ಕೆಳಗೆ ಗಣಪತಿ ದೇವಸ್ಥಾನವಿದೆ. ಇನ್ನೂ ಸ್ವಲ್ಪ ದೂರದಲ್ಲಿ ಹರಿಯುವ ನದಿಯಿದೆ. ದೊಡ್ಡ ಶಿಖರಗಳು ಟ್ರೆಕ್ಕಿಂಗ್ ಮಾಡುವವರಿಗೆ ನೆಚ್ಚಿನ ತಾಣವಾಗಿದೆ.

ದಟ್ಟ ಅರಣ್ಯದಲ್ಲಿ ನಡೆಯುವಾಗ ತುಸು ಜಾಗೃತೆ ಇರಬೇಕು. ಮಣ್ಣು ನುಣುಪಾಗಿದ್ದು ಅಲ್ಲಲ್ಲಿ ಜಾರುತ್ತದೆ. ಮರಗಳು ಹೆಚ್ಚಿರುವುದರಿಂದ ಉಂಬಳಗಳ ಕಾಟವೂ ಹೆಚ್ಚು. ಇಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಇಲ್ಲಿಗೆ ಹೋಗುವುದು ಸೂಕ್ತ. ಹತ್ತಿರದ ಪೇಟೆಯೆಂದರೆ ಶಿರಸಿ. ಅಲ್ಲಿ ಉತ್ತಮ ವ್ಯವಸ್ಥೆಯಿರುವ ಹೋಟೆಲ್ ಗಳಿವೆ. ಬೆಂಗಳೂರಿನಿಂದ 460 ಕಿ.ಮೀ. ದೂರದಲ್ಲಿ ಹಾಗೂ ಶಿರಸಿಯಿಂದ 40 ಕಿ.ಮೀ. ದೂರದಲ್ಲಿದೆ.

 ದೆಹಲಿಯ ಏಮ್ಸ್ ನ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ!

ದೆಹಲಿಯ ಏಮ್ಸ್ ನ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ!

ದೆಹಲಿಯ ಏಮ್ಸ್ ನ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ!

ನವದೆಹಲಿ : ಸೋಮವಾರ ಬೆಳಿಗ್ಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸ್ಟೋರ್ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ೫ ಗಂಟೆ ಸುಮಾರಿಗೆ ಘಟನೆ ನಡೆದಿದೆ ಮತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಸಾಗಿಸಲಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಇಲ್ಲಿಯವರೆಗೆ ಯಾವುದೇ ಗಾಯ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

 ಲಡಾಖ್ ನ ಲೇಹ್ ನಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಲಡಾಖ್ ನ ಲೇಹ್ ನಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು


ಲಡಾಖ್ ನ ಲೇಹ್ ನಲ್ಲಿ ಭೂಕಂಪನ : ರಿಕ್ಟರ್  4.6 ತೀವ್ರತೆ ದಾಖಲು

ನವದೆಹಲಿ : ಲಡಾಖ್ ನ ಲೇಹ್ ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು,ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಮಾಹಿತಿ ನೀಡಿದೆ.

ಕೊರೋನಾ 3ನೇ ಅಲೆ ಯಾವಾಗ ಬರುತ್ತೆ? ಮಕ್ಕಳಿಗೆ ಲಸಿಕೆ ಯಾವಾಗ ಸಿಗುತ್ತೆ : ನೀವು ತಿಳಿದುಕೊಳ್ಳಲೇಬೇಕಾಗದದಿಷ್ಟು…

ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಪ್ರಕಾರ, ಬೆಳಿಗ್ಗೆ 6:10 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಲಡಾಖ್ ನ ಲೇಹ್ ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಯಾವುದೇ ಜೀವ ಹಾನಿ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಗಳಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 ಮಗುವನ್ನು ಕೊಂದು ಕಾಫಿ ತೋಟದಲ್ಲಿ ಹೂತು ಹಾಕಿದ ಪೋಷಕರು

ಮಗುವನ್ನು ಕೊಂದು ಕಾಫಿ ತೋಟದಲ್ಲಿ ಹೂತು ಹಾಕಿದ ಪೋಷಕರು


ಮಗುವನ್ನು ಕೊಂದು ಕಾಫಿ ತೋಟದಲ್ಲಿ ಹೂತು ಹಾಕಿದ ಪೋಷಕರು

ಆಲೂರು, ಜೂ.26: ತಂದೆ-ತಾಯಿ ಇಬ್ಬರು ಸೇರಿ ಮಗುವೊಂದನ್ನು ಕೊಂದು‌ ಶವವನ್ನು ಕಾಫಿ ತೋಟದಲ್ಲಿ ಹೂತಿದ್ದಾರೆನ್ನಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕೆ ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಕೂಲಿ ಕೆಲಸಕ್ಕೆಂದು ಬಾಂಗ್ಲಾದೇಶದಿಂದ ತಾಲೂಕಿನ ಕೆ ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿ ಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.

ಕೆಲ ದಿನಗಳ ಹಿಂದೆ ಪತಿ ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಈ ಸಂದರ್ಭ ಮಗುವನ್ನು ಹೊಡೆದು ಸಾಯಿಸಿ ಶವವನ್ನು ಹೂತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಉಪವಿಭಾಗಾಧಿಕಾರಿ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಹೂತಿರುವ ಶವವನ್ನು ಹೊರ ತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.


 


 ಕೇರಳ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ

ಕೇರಳ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ


ಕೇರಳ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ

ಬೆಂಗಳೂರು, ಜೂ.27- ಗ್ರಾಮದ ಹೆಸರಿನ ಅರ್ಥವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರುವ ಕೇರಳ ಸರ್ಕಾರ ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೇಯೇ ಕಾಪಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ.

ಹೆಸರು ಬದಲಾಯಿಸುವ ಈ ಪ್ರಕ್ರಿಯೆ ಆರಂಭಿಸುವುದಕ್ಕೂ ಮೊದಲು ಕೇರಳ ಸರ್ಕಾರಕ್ಕೆ ಕೆಲ ಅಂಶಗಳನ್ನು ಗಮನಕ್ಕೆ ತರಲು ನಾನು ಬಯಸುತ್ತೇನೆ.ಕಾಸರಗೋಡು ಕರ್ನಾಟಕದೊಂದಿಗೂ ಬೆಸೆದುಕೊಂಡ ಪ್ರದೇಶ. ಅಲ್ಲಿನ ಜನರೊಂದಿಗೆ ಕರ್ನಾಟಕ ಮತ್ತು ಕನ್ನಡಿಗರು ಸಾಂಸ್ಕೃತಿಕ ಒಡನಾಟ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಸರಗೋಡು ಭಾಷಾ ಸಾಮರಸ್ಯದ, ಸೌಹಾರ್ದತೆಯ ಪ್ರತೀಕವಾಗಿ ಉಳಿದುಕೊಂಡಿದೆ. ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಿ ಭಾಷಿಕರು ಸಮಾನ ಸಂಖ್ಯೆಯಲ್ಲಿದ್ದರೂ, ಪರಸ್ಪರರೂ ಪೂರಕವಾಗಿ, ಪ್ರೇರಕವಾಗಿ ಬದುಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಲ್ಲಿನವರಿಗೆ ಭಾಷೆಯ ವಿಚಾರದಲ್ಲಿ ಎಂದಿಗೂ ಕಲಹ ಬಂದಿಲ್ಲ. ಇದನ್ನು ನಾವು ಭವಿಷ್ಯದಲ್ಲೂ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ. ಭಾವನೆಗಳೊಂದಿಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆಯನ್ನೂ ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

ಹೀಗಾಗಿ, ಅಲ್ಲಿನ ಕನ್ನಡಿಗರ ಪರಂಪರಾಗತ ಭಾವನೆಗಳನ್ನು ಕಾಪಾಡುವುದು ಎರಡೂ ರಾಜ್ಯಗಳ ಕರ್ತವ್ಯ ಎಂಬುದು ನನ್ನ ಭಾವನೆ. ಗ್ರಾಮಗಳ ಈಗಿನ ಕನ್ನಡ ಹೆಸರನ್ನು, ಮಲಯಾಳಿಗೆ ರೂಪಾಂತರ ಮಾಡಲಾಗುತ್ತಿದೆ. ಆದರೆ ಅರ್ಥವನ್ನು ಹಾಗೆಯೇ ಉಳಿಸಿಕೊಂಡಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.


 ಏಕದಿನ ಪಂದ್ಯ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಸೋಲು

ಏಕದಿನ ಪಂದ್ಯ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಸೋಲು

ಏಕದಿನ ಪಂದ್ಯ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಸೋಲು

ಬ್ರಿಸ್ಟಲ್‌ : ನಿಧಾನ ಗತಿಯ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗಿಗೆ ಬೆಲೆ ತೆತ್ತ ಭಾರತದ ವನಿತಾ ತಂಡ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ.

ನಾಯಕಿ ಮಿಥಾಲಿ ರಾಜ್‌ ಅವರ ಬ್ಯಾಟಿಂಗ್‌ ಹೋರಾಟದ ಫ‌ಲವಾಗಿ ಭಾರತ 8 ವಿಕೆಟಿಗೆ 201 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಇಂಗ್ಲೆಂಡ್‌ 34.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 202 ರನ್‌ ಬಾರಿಸಿತು. ಓಪನರ್‌ ಟಾಮಿ ಬ್ಯೂಮಂಟ್‌ (ಅಜೇಯ 87) ಮತ್ತು ನಥಾಲಿ ಶಿವರ್‌ (ಅಜೇಯ 74) ಮುರಿಯದ 3ನೇ ವಿಕೆಟಿಗೆ 119 ರನ್‌ ಪೇರಿಸಿ ಗೆಲುವು ಸಾರಿದರು. ಬ್ಯಾಟಿಂಗಿನಂತೆ ಭಾರತದ ಬೌಲಿಂಗ್‌ ಕೂಡ ವಿಫಲಗೊಂಡಿತು.

ಈ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದ ಶಫಾಲಿ ವರ್ಮ (15) ಮತ್ತು ಅನುಭವಿ ಸ್ಮತಿ ಮಂಧನಾ (10) 27 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡ ಪರಿಣಾಮ ಭಾರತದ ಮೇಲೆ ಒತ್ತಡ ಬಿತ್ತು. ನಾಯಕಿಯ ಆಟವಾಡಿದ ಮಿಥಾಲಿ ಎರಡು ಉಪಯುಕ್ತ ಜತೆಯಾಟಗಳಲ್ಲಿ ಪಾಲ್ಗೊಂಡರು.

ಪೂನಂ ರಾವುತ್‌ (32) ಜತೆ 3ನೇ ವಿಕೆಟಿಗೆ 56 ರನ್‌, ದೀಪ್ತಿ ಶರ್ಮ (30) ಜತೆ 4ನೇ ವಿಕೆಟಿಗೆ 65 ರನ್‌ ಪೇರಿಸಿದರು. 46ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತ ಮಿಥಾಲಿ ಗಳಿಕೆ 108 ಎಸೆತಗಳಿಂದ 72 ರನ್‌. ಇದು ಅವರ 56ನೇ ಅರ್ಧ ಶತಕ. ಅಂತಿಮವಾಗಿ ಸ್ಪಿನ್ನರ್‌ ಎಕ್‌ ಸ್ಟೋನ್‌ ಎಸೆತದಲ್ಲಿ ಬೌಲ್ಡ್‌ ಆಗಿ ವಾಪಸಾದರು. 40ಕ್ಕೆ 3 ವಿಕೆಟ್‌ ಕಿತ್ತ ಎಕ್‌ಸ್ಟೋನ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌.


 ಯುಎಇ: ಜುಲೈ 21ರವರೆಗೆ ಭಾರತಕ್ಕೆ ವಿಮಾನ ಹಾರಾಟ ನಿಷೇಧ ಮುಂದುವರಿಕೆ

ಯುಎಇ: ಜುಲೈ 21ರವರೆಗೆ ಭಾರತಕ್ಕೆ ವಿಮಾನ ಹಾರಾಟ ನಿಷೇಧ ಮುಂದುವರಿಕೆ


ಯುಎಇ: ಜುಲೈ 21ರವರೆಗೆ ಭಾರತಕ್ಕೆ ವಿಮಾನ ಹಾರಾಟ ನಿಷೇಧ ಮುಂದುವರಿಕೆ

ಅಬುದಾಭಿ,ಜೂ.27: ಕೋವಿಡ್19 ಹಾವಳಿ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ 14 ದೇಶಗಳಿಗೆ ವಿಮಾನ ಹಾರಾಟಕ್ಕೆ ವಿಧಿಸಲಾಗಿರುವ ನಿಷೇಧವು ಈ ವರ್ಷದ ಜುಲೈ 21ರವರೆಗೆ ಮುಂದುವರಿಯಲಿದೆ ಎಂದು ಯುಎಇನ ಸಾಮಾನ್ಯ ನಾಗರಿಕ ವಿಮಾನ ಪ್ರಾಧಿಕಾರವು ಶನಿವಾರ ತಿಳಿಸಿದೆ

ಭಾರತ, ಲೈಬೀರಿಯ, ನಮೀಬಿಯ, ಸಿಯೆರಾ ಲಿಯೋನ್, ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಉಗಾಂಡ, ಜಾಂಬಿಯಾ, ವಿಯೆಟ್ನಾಂ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ನೈಜೀರಿಯ ಹಾಗೂ ದಕ್ಷಿಣ ಆಫ್ರಿಕ ದೇಶಗಳಿಗೆ ವಿಮಾನ ಹಾರಾಟವನ್ನು ಜುಲೈ 31ರವರೆಗೆ ರದ್ದುಪಡಿಸಲಾಗಿದೆಯೆಂದು ಅದು ಜಾರಿಗೊಳಿಸಿರುವ ನೋಟಿಸ್ನಲ್ಲಿ ತಿಳಿಸಿದೆ.

ಆದರೆ ಸರಕು ಸಾಗಣೆ ವಿಮಾನಗಳು, ಔದ್ಯಮಿಕ ಹಾಗೂ ವಿಶೇಷ ವಿಮಾನಗಳ ಹಾರಾಟಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. 

ಯುಎಇ ಅನುಮೋದಿತ ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರುವ ಹಾಗೂ ಅಧಿಕೃತ ರೆಸಿಡೆನ್ಸ್ ವೀಸಾವನ್ನು ಹೊಂದಿರುವ ಭಾರತೀಯ ಪ್ರಯಾಣಿಕರಿಯುಎಇಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದೆಂದು ದುಬೈನ ಬಿಕ್ಕಟ್ಟು ಹಾಗೂ ವಿಕೋಪ ನಿರ್ವಹಣೆಗಾಗಿನ ಉನ್ನತ ಸಮಿತಿಯು ಘೋಷಿಸಿದ ಬಳಿಕ ಜೂನ್ 23ರಿಂದ ಭಾರತಕ್ಕೆ ವಿಮಾನಯಾನ ಪುನರಾರಂಭಗೊಳ್ಳುವುದೆಂದು ನಿರೀಕ್ಷಿಸಲಾಗಿತ್ತು. ಮತ್ತು ಏರ್ಲೈನ್ ಸಂಸ್ಥೆಗಳು ಜುಲೈ 6ರಿಂದ ಬುಕಿಂಗ್ಗಳನ್ನು ಕೂಡಾ ತೆರೆದಿದ್ದವು.

ಯುಎಇನ ವಿಮಾನಯಾನ ಪ್ರಾಧಿಕಾರ ಹಾಗೂ ಎನ್ಸಿಇಎಂಎ ಸಂಸ್ಥೆಗಳು ಭಾರತದಿಂದ ಆಗಮಿಸುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಎಪ್ರಿಲ್ 24ರಿಂದ ನಿಷೇಧ ವಿಧಿಸಿತ್ತು.

ಭಾರತದಿಂದ ಯುಎಇಗೆ ಆಗಮಿಸುವ ಪ್ರಯಾಣಿಕರು ತಮ್ಮ ನಿರ್ಗಮನಕ್ಕೆ ನಾಲ್ಕು ತಾಸುಗಳ ಮೊದಲು ವಿಮಾನನಿಲ್ದಾಣಗಳಲ್ಲಿ ರ್ಯಾಪಿಡ್ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕೆಂದು ನೂತನ ಮಾರ್ಗದರ್ಶಿ ಸೂತ್ರಗಳಲ್ಲಿ ಯುಎಇ ತಿಳಿಸಿತ್ತು. ಆದರೆ ಭಾರತದ ಬಹುತೇಕ ವಿಮಾನನಿಲ್ದಾಣಗಳಲ್ಲಿ ರ್ಯಾಪಿಡ್ ಪಿಸಿಆರ್ ಪರೀಕ್ಷಾ ಸೌಕರ್ಯಗಳ ಕೊರತೆಯಿರುವುದು ಕೂಡಾ ಯುಎಇ ವಿಮಾನ ಹಾರಾಟದ ರದ್ದತಿಯನ್ನು ಜುಲೈ 21ರವರೆಗೆ ಮುಂದೂಡಲು ಕಾರಣವೆನ್ನಲಾಗಿದೆ.


 


ಆರ್ಚರಿ ವಿಶ್ವಕಪ್ : ದೀಪಿಕಾ ಕುಮಾರಿಗೆ ಹ್ಯಾಟ್ರಿಕ್ ಚಿನ್ನ

ಆರ್ಚರಿ ವಿಶ್ವಕಪ್ : ದೀಪಿಕಾ ಕುಮಾರಿಗೆ ಹ್ಯಾಟ್ರಿಕ್ ಚಿನ್ನ


ಆರ್ಚರಿ ವಿಶ್ವಕಪ್ : ದೀಪಿಕಾ ಕುಮಾರಿಗೆ ಹ್ಯಾಟ್ರಿಕ್ ಚಿನ್ನ

ಹೊಸದಿಲ್ಲಿ: ಪ್ಯಾರಿಸ್‌ನಲ್ಲಿ ರವಿವಾರ ನಡೆದ ಬಿಲ್ಲುಗಾರಿಕೆ ವಿಶ್ವಕಪ್ ಹಂತ 3 ರಲ್ಲಿ ವೈಯಕ್ತಿಕ ರಿಕರ್ವ್  ಸ್ಪರ್ಧೆಯ ಫೈನಲ್ ನಲ್ಲಿ ಜಯ ಗಳಿಸಿದ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ವಿಶ್ವಕಪ್ ನಲ್ಲಿ  ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಜಯಿಸಿ ಮಿಂಚಿದರು.

ರವಿವಾರ ನಡೆದ ಮಹಿಳೆಯರ ಟೀಮ್ ವಿಭಾಗ  ಹಾಗೂ ಮಿಶ್ರ ಟೀಮ್ ವಿಭಾಗದ ಸ್ಪರ್ಧೆಗಳಲ್ಲಿ ದೀಪಿಕಾ ಚಿನ್ನ ಜಯಿಸಿದ್ದರು.

ದೀಪಿಕಾ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯದಲ್ಲಿ ರಶ್ಯದ ರಶ್ಯದ ಎಲೆನಾ ಒಸಿಪೊವಾ ಅವರನ್ನು  6-0 ಅಂತರದಿಂದ ಮಣಿಸಿದರು. ಇದರೊಂದಿಗೆ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರ್ಣಗೊಳಿಸಿದ್ದಾರೆ. 

 ಜೂನ್ ನಲ್ಲಿ 10 ಕೋಟಿ ಲಸಿಕೆ ಉತ್ಪಾದಿಸಿದ ಸೀರಂ ಇನ್ಸ್ಟಿಟ್ಯೂಟ್

ಜೂನ್ ನಲ್ಲಿ 10 ಕೋಟಿ ಲಸಿಕೆ ಉತ್ಪಾದಿಸಿದ ಸೀರಂ ಇನ್ಸ್ಟಿಟ್ಯೂಟ್


ಜೂನ್ ನಲ್ಲಿ 10 ಕೋಟಿ ಲಸಿಕೆ ಉತ್ಪಾದಿಸಿದ ಸೀರಂ ಇನ್ಸ್ಟಿಟ್ಯೂಟ್

ನವದೆಹಲಿ:ತನ್ನ ಬದ್ಧತೆಯನ್ನು ಈಡೇರಿಸಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಡ್ -19 ಲಸಿಕೆ ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ಜೂನ್‌ನಲ್ಲಿ ಉತ್ಪಾದಿಸಿದೆ.ಇದು ವೈರಸ್ ಸೋಂಕಿನ ಮೂರನೇ ತರಂಗದ ಹಿನ್ನೆಲೆಯಲ್ಲಿ ಭಾರತ ತನ್ನ ವ್ಯಾಕ್ಸಿನೇಷನ್ ಚಾಲನೆಯ ವೇಗವನ್ನು ಹೆಚ್ಚಿಸುತ್ತದೆ.

ಭಾರತದ ಕೋವಿಡ್-19 ಇನಾಕ್ಯುಲೇಷನ್ ಡ್ರೈವ್ ಜೂನ್ 21 ರಂದು ಪ್ರಾರಂಭವಾದ ಕೋವಿಡ್-19 ವ್ಯಾಕ್ಸಿನೇಷನ್‌ನ ಸಾರ್ವತ್ರಿಕೀಕರಣದ ಅಡಿಯಲ್ಲಿ ವೇಗವನ್ನು ಪಡೆದುಕೊಂಡಿದೆ. ಕಳೆದ ಆರು ದಿನಗಳಲ್ಲಿ ಸರಾಸರಿ 69 ಲಕ್ಷ ಲಸಿಕೆ ಪ್ರಮಾಣವನ್ನು ಪ್ರತಿದಿನ ನೀಡಲಾಗುತ್ತದೆ.ಭಾನುವಾರ ಬೆಳಿಗ್ಗೆ 7 ಗಂಟೆಗೆ ಪ್ರಕಟವಾದ ರೋಗನಿರೋಧಕ ದತ್ತಾಂಶವು ಭಾರತವು ಒಂದು ದಿನದಲ್ಲಿ 64.25 ಲಕ್ಷ ಲಸಿಕೆ ಪ್ರಮಾಣವನ್ನು ನೀಡಿದೆ ಎಂದು ತೋರಿಸಿದೆ, ಇದು ದೇಶಾದ್ಯಂತ ಇನಾಕ್ಯುಲೇಷನ್ ಡ್ರೈವ್ ಅಡಿಯಲ್ಲಿ ಇಲ್ಲಿಯವರೆಗೆ ನೀಡಲಾದ ಒಟ್ಟು ಜಬ್‌ಗಳನ್ನು 32.17 ಕೋಟಿಗೆ ತೆಗೆದುಕೊಂಡಿದೆ.ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ನೀಡಿದ ಮಾಹಿತಿಯ ಪ್ರಕಾರ, ಇದು 45 ಬ್ಯಾಚ್‌ಗಳ ಕೋವಿಶೀಲ್ಡ್ ಅನ್ನು 10.80 ಕೋಟಿ ಡೋಸ್‌ಗಳನ್ನು ಕಸೌಲಿಯ ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಕಳುಹಿಸಿದೆ.

ಕೋವಿಶೀಲ್ಡ್ ಉತ್ಪಾದನೆಯನ್ನು ಜೂನ್‌ನಲ್ಲಿ 10 ಕೋಟಿ ಡೋಸ್‌ಗಳಷ್ಟು ಹೆಚ್ಚಿಸಲಾಗುವುದು ಎಂದು ಸಂಸ್ಥೆಯ ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಮೇ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ತಿಳಿಸಿದ್ದರು. 'ನಮ್ಮ ಕೋವಿಶೀಲ್ಡ್ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಾವು ಎದುರಿಸುತ್ತಿರುವ ವಿವಿಧ ಸವಾಲುಗಳ ನಡುವೆಯೂ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ.ಮೇ ತಿಂಗಳಲ್ಲಿ ನಮ್ಮ ಪ್ರಸ್ತುತ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಡೋಸೇಜ್‌ಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ನಮ್ಮ ಕೋವಿಶೀಲ್ಡ್ ಲಸಿಕೆಯ ಒಂಬತ್ತು ರಿಂದ 10 ಕೋಟಿ ಡೋಸ್‌ಗಳನ್ನು ನಮ್ಮ ದೇಶಕ್ಕೆ ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ತಿಳಿಸಲು ನಾವು ಸಂತೋಷಪಟ್ಟಿದ್ದೇವೆ 'ಎಂದು ಸಿಂಗ್ ಹೇಳಿದ್ದಾರೆ .


 ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಚಾಮರಾಜನಗರ: ಚಾಮರಾಜನಗರ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣ. ರಾಜ್ಯ ಬಿಜೆಪಿ ಸರ್ಕಾರ 36 ಜನರನ್ನು ಕೊಲೆ ಮಾಡಿದೆ. ಆಕ್ಸಿಜನ್ ಇಲ್ಲದೇ ಸಾವನ್ನಪ್ಪುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚಾಮರಾಜನಗರಕ್ಕೆ ಸಿಎಂ ಬರುವ ಧೈರ್ಯ ಮಾಡುತ್ತಿಲ್ಲ. ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯ. ಆಕ್ಸಿಜನ್ ದುರಂತದಿಂದ 36 ಜನರು ಸಾಯಲು ರಾಜ್ಯ ಸರ್ಕಾರ ಕಾರಣವಾಗಿದೆ. ಹಾಗಾಗಿ ಚಾಮರಾಜನಗರಕ್ಕೆ ಬಂದರೆ ಜನ ಹೊಡೆಯುತ್ತಾರೆ ಎಂಬ ಭಯ ಅವರಿಗಿದೆ. ಹಾಗಾಗಿ ಇಲ್ಲಿಗೆ ಅವರು ಬರುತ್ತಿಲ್ಲ ಎಂದರು.

ಗುಪ್ತಚರ ಇಲಾಖೆ ಕೂಡ ಅವರಿಗೆ ಮಾಹಿತಿಯನ್ನು ನೀಡಿದೆ. ಸಿಎಂ ಬಿ ಎಸ್ ವೈಗೆ ಜನ ಹೊಡೆಯುತ್ತಾರೆ ಎಂದು. ಅದಕ್ಕೆ ಭಯದಿಂದ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಜನ ಬೈಯುತ್ತಾರೆ. ತಪ್ಪು ಮಾಡಿದ ಮೇಲೆ ಬೈಸಿಕೊಳ್ಳಲೇಬೇಕು ಎಂದು ಟಾಂಗ್ ನೀಡಿದರು.

 ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಪಟ್ಟು; ಸಿಎಂ BSY ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧಾರ

ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಪಟ್ಟು; ಸಿಎಂ BSY ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧಾರ


ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಪಟ್ಟು; ಸಿಎಂ BSY ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧಾರ


ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಮರಳಿ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದೀಗ ಸಿಎಂ ಬಿ ಎಸ್ ವೈ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಲು ಮುಂದಾಗಿದ್ದಾರೆ.

ಈಗಾಗಲೇ ಸ್ವಾಮೀಜಿಗಳ ಮೂಲಕ ಹಾಗೂ ಆರ್.ಎಸ್.ಎಸ್.ನಾಯಕರನ್ನು ಭೇಟಿಯಾಗುವ ಮೂಲಕ ಮಂತ್ರಿ ಸ್ಥಾನಕ್ಕಾಗಿ ಒತ್ತಡದ ತಂತ್ರ ಹೆಣೆದಿರುವ ರಮೇಶ್ ಜಾರಕಿಹೊಳಿ, ಇದೀಗ ಆಪ್ತರ ಹಾಗೂ ಸಹೋದರರ ಸಲಹೆ ಮೇರೆಗೆ ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಎರಡು ಮೂರು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಲಿದ್ದು ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಜಾರಕಿಹೊಳಿ ನಡೆ ಕುತೂಹಲಕ್ಕೆ ಕಾರಣವಾಗಿದೆ.

Saturday, 26 June 2021

 ಯೂರೋ-2020: ಕ್ವಾರ್ಟರ್ ಫೈನಲ್‌ಗೆ ಇಟಲಿ

ಯೂರೋ-2020: ಕ್ವಾರ್ಟರ್ ಫೈನಲ್‌ಗೆ ಇಟಲಿ


ಯೂರೋ-2020: ಕ್ವಾರ್ಟರ್ ಫೈನಲ್‌ಗೆ ಇಟಲಿ

ಲಂಡನ್ : ಹಲವು ರೋಚಕ ಕ್ಷಣಗಳಿಗೆ ಕಾರಣವಾದ ಯೂರೋ-2020 ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ನ ಹೆಚ್ಚುವರಿ ಅವಧಿಯಲ್ಲಿ ಆಸ್ಟ್ರಿಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಇಟಲಿ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ಬದಲಿ ಆಟಗಾರರಾಗಿದ್ದ ಫೆಡೆರಿಕೊ ಚಿಸಾ ಮತ್ತು ಮಟಿವೊ ಪೆಸ್ಸಿನಾ ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲುಗಳನ್ನು ಹೊಡೆಯುವ ಮೂಲಕ ತಂಡದ ವಿಜಯದ ರೂವಾರಿಗಳಾದರು.

ಇದೇ ಮೊದಲ ಬಾರಿಗೆ ಯೂರೋಪಿಯನ್ ಚಾಂಪಿಯನ್‌ಶಿಪ್‌ನ ನಾಕೌಟ್ ಹಂತ ತಲುಪಿದ್ದ ಆಸ್ಟ್ರಿಯಾದ ಮಾರ್ಕೊ ಅರ್ನ್‌ಟೊವಿಕ್ ಹೆಚ್ಚುವರಿ ಅವಧಿಯಲ್ಲಿ ಮೊದಲ ಗೋಲ್ ಹೊಡೆದು ತಂಡಕ್ಕೆ ಮುನ್ನಡೆ ಒದಗಿಸಿ, ಬಲಿಷ್ಠ ಇಟಲಿ ಪಾಳಯದಲ್ಲಿ ಆತಂಕ ಮೂಡಿಸಿದರು.

ಇಟಲಿ ಪರವಾಗಿ ನಾಲ್ವರು ಆಕ್ರಮಣಕಾರಿ ಬದಲಿ ಆಟಗಾರರನ್ನು ಮೈದಾನಕ್ಕೆ ಇಳಿಸಿದ್ದು ಕೊನೆಗೂ ಫಲ ನೀಡಿತು. ಈ ಹಂತದಲ್ಲಿ ಚೀಸಾ ಗೋಲು ಹೊಡೆದು ಸಮಬಲ ಸಾಧಿಸಲು ನೆರವಾದರು. ಆ ಹಂತದಲ್ಲಿ ಅಟ್ಲಾಂಟಾ ಮಿಡ್‌ಫೀಲ್ಡರ್ ಪೆಸ್ಸಿನಾ ಹೊಡೆದ ಗೋಲು ಆಸ್ಟ್ರಿಯಾದ ಆಸೆಯನ್ನು ನುಚ್ಚುನೂರುಗೊಳಿಸಿತು. 95ನೇ ನಿಮಿಷದಲ್ಲಿ ಚೀಸಾ ಗೋಲು ಹೊಡೆದರೆ ಮತ್ತೆ ಹತ್ತೇ ನಿಮಿಷಗಳ ಅಂತರದಲ್ಲಿ ಮತ್ತೊಂದು ಭರ್ಜರಿ ಗೋಲು ಗಳಿಸುವ ಮೂಲಕ ಇಟಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

 ಕರ್ನಾಟಕ ಕರಾವಳಿಯಲ್ಲಿ ಜೂನ್ 28ರಿಂದ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ ಕರಾವಳಿಯಲ್ಲಿ ಜೂನ್ 28ರಿಂದ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ ಕರಾವಳಿಯಲ್ಲಿ ಜೂನ್ 28ರಿಂದ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಜೂನ್ 27; ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮಳೆ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 28ರಿಂದ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಲ್ಲಿ ಜೂನ್ 28 ರಿಂದ ಜುಲೈ 1ರ ತನಕ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಿದೆ.

ಜೂನ್ 29ರಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಶನಿವಾರದಿಂದಲೇ ಮಳೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಶನಿವಾರ ಮೋಡ ಕವಿದ ವಾತಾವರಣವಿತ್ತು, ಸಂಜೆಯ ವೇಳೆಗೆ ಕೆಲವು ಬಡಾವಣೆಗಳಲ್ಲಿ ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಪ್ಪ, ಎನ್. ಆರ್. ಪುರ, ಕೊಡಗು, ಮಡಿಕೇರಿ, ನಾಪೊಕ್ಲು, ತಲಕಾವೇರಿ, ಮೈಸೂರು ನಗರದಲ್ಲಿ ಮಳೆಯಾಗಿದೆ.

ಹಾಸನ ಜಿಲ್ಲೆಯ ದ್ಯಾವೇನಹಳ್ಳಿ ಬಳಿ ಹೇಮಾವತಿ ನಾಲೆಯ ಪಂಪ್ ಹೌಸ್ ಸಮೀಪ 80 ಅಡಿ ಎತ್ತರದಿಂದ ನಾಲೆಗೆ ಮಣ್ಣು ಕುಸಿದು ಬಿದ್ದಿದೆ. ಕಾಪು ತಾಲೂಕು ಮೂಳೂರಿನಲ್ಲಿ ಮನೆ ಚಾವಣಿ ಕುಸಿದು ಮಹಿಳೆ ಗಾಯಗೊಂಡಿದ್ದಾರೆ.

ಸೇಡಂ, ಚಿತ್ತಾಪುರ, ಕಾಳಗಿ, ಯಡ್ರಾಮಿ, ಸುರಪುರ, ಕುಷ್ಟಗಿ ಮತ್ತು ಬೀದರ್‌ನಲ್ಲಿಯೂ ಮಳೆಯಾಗಿದೆ. ಗೋಕರ್ಣದಲ್ಲಿ 5, ಕಾರವಾರದಲ್ಲಿ 4, ಶಿರಸಿಯಲ್ಲಿ 3, ಕುಂದಾಪುರ ಮತ್ತು ಪುತ್ತೂರಿನಲ್ಲಿ 2 ಸೆಂ. ಮೀ. ಮಳೆಯಾಗಿದೆ.

ಆರ್ಚರಿ ವಿಶ್ವಕಪ್ʼನಲ್ಲಿ ಚಿನ್ನ ಗೆದ್ದ ಭಾರತೀಯ ಬಿಲ್ಲುಗಾರ ಅಭಿಷೇಕ್ ವರ್ಮಾ

ಆರ್ಚರಿ ವಿಶ್ವಕಪ್ʼನಲ್ಲಿ ಚಿನ್ನ ಗೆದ್ದ ಭಾರತೀಯ ಬಿಲ್ಲುಗಾರ ಅಭಿಷೇಕ್ ವರ್ಮಾ


ಆರ್ಚರಿ ವಿಶ್ವಕಪ್ʼನಲ್ಲಿ ಚಿನ್ನ ಗೆದ್ದ ಭಾರತೀಯ ಬಿಲ್ಲುಗಾರ ಅಭಿಷೇಕ್ ವರ್ಮಾ

ಪ್ಯಾರಿಸ್ : ಪ್ಯಾರಿಸ್ʼನಲ್ಲಿ ಶನಿವಾರ ನಡೆದ ಆರ್ಚರಿ ವಿಶ್ವಕಪ್ ಹಂತ ಮೂರರಲ್ಲಿ ಭಾರತೀಯ ಬಿಲ್ಲುಗಾರ ಅಭಿಷೇಕ್ ವರ್ಮಾ ತಮ್ಮ ಮೊದಲ ವೈಯಕ್ತಿಕ ವಿಶ್ವಕಪ್ ಚಿನ್ನವನ್ನ ಗೆದ್ದಿದ್ದಾರೆ.

ಯುಎಸ್‌ಎಯ ಕ್ರಿಸ್ ಶಾಫ್ ಅವರನ್ನ ಶೂಟ್-ಆಫ್ʼನಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದ ನಂತ್ರ ಅಭಿಷೇಕ್ ವಿಜಯಶಾಲಿಯಾದರು.

ಪ್ಯಾರಿಸ್ ನಲ್ಲಿ ನಡೆದ ಆರ್ಚರಿ ವಿಶ್ವಕಪ್ ಹಂತ 3ರಲ್ಲಿ ಯುಎಸ್‌ಎಯ ಕ್ರಿಸ್ ಶಾಫ್ ಅವರನ್ನ ಶೂಟ್-ಆಫ್ʼನಲ್ಲಿ ಸೋಲಿಸಿದ ನಂತರ ಅಭಿಷೇಕ್ ವರ್ಮಾ ತಮ್ಮ ಮೊದಲ ವೈಯಕ್ತಿಕ ವಿಶ್ವಕಪ್ ಗೆದ್ದರು. ಅಭಿನಂದನೆಗಳು' ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ) ಟ್ವೀಟ್ ಮಾಡಿದೆ.

ಕಳೆದ ವಾರ, ಪ್ಯಾರಿಸ್ʼನಲ್ಲಿ ನಡೆದ ಅಂತಿಮ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಆರಂಭಿಕ ನಿರ್ಗಮನದ ನಂತರ ಭಾರತೀಯ ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವು ಟೋಕಿಯೊ 2020 ಕೋಟಾ ಗಳಿಸಲು ವಿಫಲವಾಯಿತು.

 ಮಾದಕವಸ್ತು ವಿರೋಧಿ ದಿನದಲ್ಲಿ ಕ್ಯಾಂಪೈನ್ ಆಚರಿಸಿದ ಇಶಾಅತುಸ್ಸುನ್ನ

ಮಾದಕವಸ್ತು ವಿರೋಧಿ ದಿನದಲ್ಲಿ ಕ್ಯಾಂಪೈನ್ ಆಚರಿಸಿದ ಇಶಾಅತುಸ್ಸುನ್ನ


ಮಾದಕವಸ್ತು ವಿರೋಧಿ ದಿನದಲ್ಲಿ ಕ್ಯಾಂಪೈನ್ ಆಚರಿಸಿದ ಇಶಾಅತುಸ್ಸುನ್ನ 

ಕಾಸರಗೋಡು:- ಪುತ್ತಿಗೆ ಮುಹಿಮ್ಮಾತ್ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸ್ಸುನ್ನ ಮಾದಕವಸ್ತು ವಿರೋಧಿ ದಿನ ಕ್ಯಾಂಪೈನ್ ಆಚರಿಸಿತು. ಸಂಘಟನೆಯ ಕ್ಯಾಬಿನೆಟ್ ಸದಸ್ಯರಾದ 10 ಕಾರ್ಯದರ್ಶಿಗಳು ಪಾಲ್ಗೊಂಡ ಪ್ರಸ್ತುತ ಕಾರ್ಯಕ್ರಮದಲ್ಲಿ ಯೂನಿಯನ್ ಅಧ್ಯಕ್ಷರಾದ ಹಾಫಿಳ್ ಯಹ್ಯಾ ಮಾದಕವಸ್ತು ಮುಕ್ತ ರಾಷ್ಟ್ರ ನಿರ್ಮಾಣ ಸಾಧ್ಯವಾಗಬೇಕೆಂದು ತಿಳಿಸಿದರು

ಕ್ಯಾಂಪಿನಲ್ಲಿ ಸಯ್ಯಿದ್ ಮಶೂದ್ ಅಲಿ ಎಮ್ಮೆಮಾಡು, ಸಯ್ಯಿದ್ ಜಾಫರ್ ಸ್ವಾದಿಕ್ ಆದೂರ್,ರಂಶಾದ್ ಈಶ್ವರಮಂಗಳ,ಅಶ್ರಫ್ ಬಾಯಾರ್, ಫಯಾಝ್ ದೇಲಂಪಾಡಿ, ಅಫ್ಫಾನ್ ಸೀತಾಂಗೋಳಿ, ಮುಫೀದ್ ಕುಂಬ್ರ, ಯೂಸುಫ್ ಬಾಪಾಲಿಪ್ಪನಂ ಭಾಗವಹಿಸಿದ್ದರು

 ರಾಷ್ಟ್ರಪತಿ ಕೋವಿಂದ್‌ ಭೇಟಿ ಕಾರಣದಿಂದ ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿ ಮಹಿಳೆ ಮೃತ್ಯು: ಕ್ಷಮೆ ಯಾಚಿಸಿದ ಪೊಲೀಸರು

ರಾಷ್ಟ್ರಪತಿ ಕೋವಿಂದ್‌ ಭೇಟಿ ಕಾರಣದಿಂದ ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿ ಮಹಿಳೆ ಮೃತ್ಯು: ಕ್ಷಮೆ ಯಾಚಿಸಿದ ಪೊಲೀಸರು

ರಾಷ್ಟ್ರಪತಿ ಕೋವಿಂದ್‌ ಭೇಟಿ ಕಾರಣದಿಂದ ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿ ಮಹಿಳೆ ಮೃತ್ಯು: ಕ್ಷಮೆ ಯಾಚಿಸಿದ ಪೊಲೀಸರು

ಲಕ್ನೋ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ರವರ ಉತ್ತರಪ್ರದೇಶ ಭೇಟಿಯ ಕಾರಣದಿಂದಾಗಿ ಟ್ರಾಫಿಕ್‌ ಜಾಮ್‌ ನಲ್ಲಿ ಸಿಲುಕಿದ್ದ ಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದೇ ಮಹಿಳೆಯೋರ್ವರು ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಕುಟುಂಬಸ್ಥರ ಕ್ಷಮೆ ಯಾಚಿಸಿದ್ದಾರೆಂದು ವರದಿಗಳು ತಿಳಿಸಿವೆ.

ರಾಷ್ಟ್ರಪತಿ ಕೋವಿಂದ್‌ ಮೂರು ದಿನಗಳ ಉತ್ತರಪ್ರದೇಶ ಭೇಟಿಯಲ್ಲಿದ್ದು, ತಮ್ಮ ಮೂಲ ಗ್ರಾಮಕ್ಕೆ ಅವರು ತೆರಳಲು ಮಧ್ಯರಾತ್ರಿ ರೈಲಿನಲ್ಲಿ ಆಗಮಿಸಿದ್ದರು. ಮೃತಪಟ್ಟ 50ರ ಹರೆಯದ ಮಹಿಳೆ ವಂದನಾ ಮಿಶ್ರಾ ಎಂಬವರು ಕಾನ್ಪುರದ ಇಂಡಿಯನ್‌ ಅಸೋಸೊಯೇಶನ್‌ ಆಫ್‌ ಇಂಡಸ್ಟ್ರೀಸ್‌ ನ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು ಎಂದು ತಿಳಿದು ಬಂದಿದೆ.

ಅವರು ರೋಗಪೀಡಿತರಾದ ಕಾರಣದಿಂದ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಕೋವಿಂದ್‌ ರ ಆಗಮನ ಕಾರಣದಿಂದ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು ಎನ್ನಲಾಗಿದೆ. ಮಿಶ್ರಾ ಅವರು ಈಗಷ್ಟೇ ಕೋವಿಡ್‌ ನಿಂದ ಚೇತರಿಸಿಕೊಂಡಿದ್ದರು ಎನ್ನಲಾಗಿದೆ. 

"ಕಾನ್ಪುರ ಪೊಲೀಸರ ಮತ್ತು ನಮ್ಮ ಪರವಾಗಿ ವಂದನಾ ಮಿಶ್ರಾರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಇದು ನಮಗೆ ಭವಿಷ್ಯಕ್ಕೆ ದೊಡ್ಡದೊಂದು ಪಾಠವಾಗಲಿದೆ. ಇಂತಹಾ ಪ್ರಕರಣಗಳು ಇನ್ನು ಮುಂದೆ ಮರುಕಳಿಸದಂತೆ ನೋಡಿಕೊಳ್ಳಲು ನಾವು ಪ್ರತಿಜ್ಞೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾಗಿ ವರದಿ ತಿಳಿಸಿದೆ.

 200 ಕೆ.ಜಿ. ಗಾಂಜಾ ನಾಶ

200 ಕೆ.ಜಿ. ಗಾಂಜಾ ನಾಶ


200 ಕೆ.ಜಿ. ಗಾಂಜಾ ನಾಶ

ಹಾವೇರಿ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 2011ರಿಂದ ಜಪ್ತಿ ಮಾಡಿದ್ದ 200 ಕೆ.ಜಿ ಮಾದಕ ವಸ್ತುಗಳನ್ನು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಕೇಂದ್ರದಲ್ಲಿ ಶನಿವಾರ ನಾಶಪಡಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸಮ್ಮುಖದಲ್ಲಿ 20 ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದ 200 ಕೆ.ಜಿ. ಗಾಂಜಾವನ್ನು ನಾಶಪಡಿಸಲಾಯಿತು.

'ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕ ವಸ್ತುಗಳ ಆಮಿಷಕ್ಕೆ ಯಾರೂ ಬಲಿಯಾಗಬಾರದು. ಮಾದಕ ವಸ್ತುಗಳ ಮಾರಾಟದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಗೃಹ ಸಚಿವರ ಸೂಚನೆಯಂತೆ ಈ ಕೃತ್ಯಗಳನ್ನು ಮೂಲೋತ್ಪಾಟನೆ ಮಾಡಲು ಹಾಗೂ ಈ ಪಿಡುಗಿಗೆ ಒಳಗಾಗುವ ಯುವಜನರನ್ನು ರಕ್ಷಿಸಲು ನಾವು ಸದಾ ಸಿದ್ಧವಿದ್ದೇವೆ' ಎಂದು ಎಸ್ಪಿ ಹನುಮಂತರಾಯ 'ಪ್ರಜಾವಾಣಿ'ಗೆ ತಿಳಿಸಿದರು.

ಡಿವೈಎಸ್ಪಿಗಳಾದ ಶಂಕರ ಮಾರಿಹಾಳ, ಟಿ.ವಿ.ಸುರೇಶ, ಡಿಸಿಆರ್‌ಬಿ ಡಿವೈಎಸ್ಪಿ ಎಂ.ಎಸ್‌.ಪಾಟೀಲ ಹಾಗೂ ಸಿಬ್ಬಂದಿ ವರ್ಗ ಇದ್ದರು.

ರಾಜ್ಯದಲ್ಲಿ ಇಳಿಕೆಯತ್ತ ಸಾಗಿದ ಕೊರೋನಾ : ಇಂದು 4272 ಜನರಿಗೆ ಕೋವಿಡ್ ದೃಢ, 115 ಜನರು ಸಾವು

ರಾಜ್ಯದಲ್ಲಿ ಇಳಿಕೆಯತ್ತ ಸಾಗಿದ ಕೊರೋನಾ : ಇಂದು 4272 ಜನರಿಗೆ ಕೋವಿಡ್ ದೃಢ, 115 ಜನರು ಸಾವು


ರಾಜ್ಯದಲ್ಲಿ ಇಳಿಕೆಯತ್ತ ಸಾಗಿದ ಕೊರೋನಾ : 
ಇಂದು 4272 ಜನರಿಗೆ ಕೋವಿಡ್ ದೃಢ, 
115 ಜನರು ಸಾವು

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 4272 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸೋಂಕಿತರಾದಂತ 115 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 4272 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 2831026ಗೆ ಏರಿಕೆಯಾಗಿದೆ. ಇವರಲ್ಲಿ ಇಂದು 6126 ಜನರು ಸೇರಿದಂತೆ ಇದುವರೆಗೆ 2691123 ಜನರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 105226 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಎಸ್ ಬಿಐ ನಿಂದ ಗ್ರಾಹಕರಿಗೆ ಮಹತ್ವದ ಮಾಹಿತಿ: ಹಣವನ್ನು ಸುರಕ್ಷಿತವಾಗಿಡಲು ನೀಡಿದೆ ಈ ಟಿಪ್ಸ್, ಇಲ್ಲಿದೆ ಮಾಹಿತಿ

ಇಂದು ಕೂಡ ಕೊರೋನಾ ಸಾವಿನ ಪ್ರಕರಣ ಮುಂದುವರೆದಿದೆ. ಸೋಂಕಿತರಾದಂತ 115 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 34654ಕ್ಕೆ ಏರಿಕೆಯಾಗಿದೆ.

Friday, 25 June 2021

 ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್ : ರಾಜ್ಯದಲ್ಲಿ ಅಪರೂಪದ `ಎನೆಕ್' ಕಾಯಿಲೆ ಪತ್ತೆ!

ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್ : ರಾಜ್ಯದಲ್ಲಿ ಅಪರೂಪದ `ಎನೆಕ್' ಕಾಯಿಲೆ ಪತ್ತೆ!

ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್ : ರಾಜ್ಯದಲ್ಲಿ ಅಪರೂಪದ `ಎನೆಕ್' ಕಾಯಿಲೆ ಪತ್ತೆ!

ದಾವಣಗೆರೆ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಎದುರಾಗಿದ್ದು, ದಾವಣಗೆರೆಯಲ್ಲಿ ಅಪರೂಪದ ಎನೆಕ್ ಎಂಬ ಕಾಯಿಲೆ ಪತ್ತೆಯಾಗಿದೆ.

ಅಕ್ಯುಟ್ ನೆಕ್ರೋಜೈಜಿಂಗ್ ಎನ್ಸೆಪಲೋಪತಿ ಎಂಬ ಕಾಯಿಲೆಯು ದಾವಣಗೆರೆಯ ಎಸ್‌ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ 13 ವರ್ಷದ ಮಗುವಿಗೆ ಇರುವುದು ಪತ್ತೆಯಾಗಿದೆ. ಈ ಮಗು ಕೋವಿಡ್ ನಿಂದ ಗುಣಮುಖವಾಗಿದ್ದು, ಮತ್ತೆ ಎನೆಕ್ ಎಂಬ ಕಾಯಿಲೆಗೆ ತುತ್ತಾಗಿದೆ. ದಾವಣಗೆರೆಯ ಎಸ್‌ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನವರ ನೇತೃತ್ವದ ವೈದ್ಯರ ತಂಡ ಎನೆಕ್ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದೆ ಎನ್ನಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ :  ಅನಿಲ್ ದೇಶ್ ಮುಖ್ ಆಪ್ತ ಕಾರ್ಯದರ್ಶಿ,  ಸಹಾಯಕನನ್ನು ಬಂಧಿಸಿದ ಇ.ಡಿ

ಅಕ್ರಮ ಹಣ ವರ್ಗಾವಣೆ ಪ್ರಕರಣ : ಅನಿಲ್ ದೇಶ್ ಮುಖ್ ಆಪ್ತ ಕಾರ್ಯದರ್ಶಿ, ಸಹಾಯಕನನ್ನು ಬಂಧಿಸಿದ ಇ.ಡಿ


ಅಕ್ರಮ ಹಣ ವರ್ಗಾವಣೆ ಪ್ರಕರಣ : 
ಅನಿಲ್ ದೇಶ್ ಮುಖ್ ಆಪ್ತ ಕಾರ್ಯದರ್ಶಿ, 
ಸಹಾಯಕನನ್ನು ಬಂಧಿಸಿದ ಇ.ಡಿ

ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್​ ದೇಶ್​ಮುಖ್​ ವಿರುದ್ಧ ಮನಿ ಲಾಂಡಂರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ), ಇಂದು 11 ಗಂಟೆಗೆ ದೇಶ್ಮುಖ್​ ಅವರನ್ನು ವಿಚಾರಣೆಗೆ ಕರೆಸಿದೆ. ನಿನ್ನೆಯ ದಿನ ದೇಶ್​ಮುಖ್​ರ ವಿವಿಧ ನಿವಾಸಗಳಿಗೆ ತೆರಳಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳಿಗೆ 12 ಬಾರ್​ ಮಾಲೀಕರಿಂದ 4 ಕೋಟಿ ರೂ.ಗಳನ್ನು ಪಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ನಿನ್ನೆ ದೇಶ್​ಮುಖ್​ ಅವರ ಪಿಎ ಕುಂದನ್​ ಶಿಂದೆ ಮತ್ತು ಪಿಎಸ್​ ಸಂಜೀವ್​ ಪಾಲಂಡೆ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಬಂಧನಕ್ಕೊಳಪಡಿಸಿದ್ದಾರೆ. ಪ್ರಿವೆಂಷನ್ ಆಫ್​ ಮನಿ ಲಾಂಡಂರಿಂಗ್​ ಆಯಕ್ಟ್​(ಪಿಎಂಎಲ್​​ಎ)ನ ಅಡಿಯಲ್ಲಿ ಬಂಧಿಸಲಾಗಿರುವ ಇವರನ್ನು ಇಂದು ವಿಶೇಷ ಪಿಎಂಎಲ್​ಎ ಕೋರ್ಟ್​ನ ಮುಂದೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.

ದೇಶ್​ಮುಖ್​ ಅವರ ನಾಗ್ಪುರ ಮನೆ ಮತ್ತು ಮುಂಬೈನ ವೊರ್ಲಿ ಮತ್ತು ಮಲಾಬಾರ್​ ಹಿಲ್​ಗಳಲ್ಲಿರುವ ಎರಡು ಮನೆಗಳಿಗೆ ಇಡಿ ಅಧಿಕಾರಿಗಳು ಹೋಗಿ ತನಿಖೆ ನಡೆಸಿದ್ದಾರೆ. ಶಿಂದೆ ಮತ್ತು ಪಾಲಂಡೆ ಅವರ ಮನೆಗಳಿಗೂ ತೆರಳಿ ರೇಡ್​ ನಡೆಸಿದ ನಂತರ ಇಬ್ಬರನ್ನೂ ದಕ್ಷಿಣ ಮುಂಬೈನಲ್ಲಿರುವ ಇಡಿ ಕಛೇರಿಗೆ ವಿಚಾರಣೆಗೆ ಕರೆತಂದು, ಆನಂತರ ಅವರನ್ನು ಬಂಧನಕ್ಕೊಳಪಡಿಸಲಾಯಿತು ಎನ್ನಲಾಗಿದೆ.

ಮಾಜಿ ಸಹಾಯಕ ಇನ್ಸ್​ಪೆಕ್ಟರ್​ ಸಚಿನ್ ವಾಜ್​​ 12 ಬಾರ್​ಗಳ ಮಾಲೀಕರಿಂದ ಸುಮಾರು 4 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರು. ಈ ಹಣವನ್ನು ದೇಶ್​ಮುಖ್​ರ ಹತ್ತಿರದ ಸಂಬಂಧಿಗೆ ಸೇರಿದ ಮಹಾರಾಷ್ಟ್ರದ ಹೊರಗಿನ ಶೆಲ್ ಕಂಪನಿಗಳ ಮೂಲಕ ದೇಶ್​ಮುಖ್​ ಅವರಿಗೆ ವರ್ಗಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ. ದೇಶ್​ಮುಖ್​ ಅವರನ್ನು ಬಂಧನಕ್ಕೊಳಪಡಿಸಲು ಸಾಕಷ್ಟು ಸಾಕ್ಷ್ಯಗಳು ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ. ಸುರಂಗದಲ್ಲಿ ಹಳಿ ತಪ್ಪಿದ   ದಿಲ್ಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ , ಪ್ರಯಾಣಿಕರು ಸುರಕ್ಷಿತ

ಸುರಂಗದಲ್ಲಿ ಹಳಿ ತಪ್ಪಿದ ದಿಲ್ಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ , ಪ್ರಯಾಣಿಕರು ಸುರಕ್ಷಿತ


ಸುರಂಗದಲ್ಲಿ ಹಳಿ ತಪ್ಪಿದ 
ದಿಲ್ಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ , ಪ್ರಯಾಣಿಕರು ಸುರಕ್ಷಿತ

ಮುಂಬೈ: ದಿಲ್ಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್  ರೈಲು ಇಂದು ಬೆಳಿಗ್ಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗವೊಂದರಲ್ಲಿ ಹಳಿ ತಪ್ಪಿದೆ ಎಂದು ವರದಿಯಾಗಿದೆ.

"ದಿಲ್ಲಿಯ ಹಝರತ್ ನಿಝಾಮುದ್ದೀನ್ ನಿಲ್ದಾಣದಿಂದ ಗೋವಾದ   ಮಡ್ಗಾಂವ್ ನಿಲ್ದಾಣಕ್ಕೆ ಹೊರಟಿದ್ದ ರಾಜಧಾನಿ ಎಕ್ಸ್ ಪ್ರೆಸ್ ಇಂದು ರತ್ನಗಿರಿ ಬಳಿಯ ಕಾರ್ಬುಡೆ ಸುರಂಗದಲ್ಲಿ ಹಳಿ ತಪ್ಪಿದೆ" ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಮುಂಬೈನಿಂದ 325 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಹಳಿಗಳ ಮೇಲೆ ಬಂಡೆಯೊಂದು ಬಿದ್ದಿರುವುದು ಹಳಿ ರೈಲು ತಪ್ಪಲು ಕಾರಣವಾಗಿದೆ ಎಂದು ಕೊಂಕಣ್ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

 ಜಮ್ಮು-ಕಾಶ್ಮೀರ: ಓರ್ವ ಉಗ್ರ ಭದ್ರತಾಪಡೆಗಳ ಗುಂಡಿಗೆ ಬಲಿ

ಜಮ್ಮು-ಕಾಶ್ಮೀರ: ಓರ್ವ ಉಗ್ರ ಭದ್ರತಾಪಡೆಗಳ ಗುಂಡಿಗೆ ಬಲಿ

ಜಮ್ಮು-ಕಾಶ್ಮೀರ: ಓರ್ವ ಉಗ್ರ ಭದ್ರತಾಪಡೆಗಳ ಗುಂಡಿಗೆ ಬಲಿ

ಶ್ರೀನಗರ,ಜೂ.25: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳೊದಿಗೆ ಗುಂಡಿನ ಕಾಳಗದಲ್ಲಿ ಓರ್ವ ಉಗ್ರಗಾಮಿ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂಜಿಪೋರಾ ಎಂಬಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಪ್ರದೇಶದಲ್ಲಿ ಪ್ರವೇಶವನ್ನು ನಿರ್ಬಂಧಿಸಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಓರ್ವ ಉಗ್ರ ಹತನಾಗಿದ್ದಾನೆ. ಮೃತ ಉಗ್ರನ ಗುರುತು ಮತ್ತು ಆತ ಯಾವ ಗುಂಪಿಗೆ ಸೇರಿದ್ದಾನೆ ಎನ್ನುವುದು ಗೊತ್ತಾಗಿಲ್ಲ. ಇನ್ನಷ್ಟು ಉಗ್ರರು ಅಡಗಿಕೊಂಡಿರುವ ಸಾಧ್ಯತೆಯಿದ್ದು ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

 ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡ್ಬೋದು : ಕೇಂದ್ರ ಸರ್ಕಾರ ಅನುಮೋದನೆ

ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡ್ಬೋದು : ಕೇಂದ್ರ ಸರ್ಕಾರ ಅನುಮೋದನೆ


ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡ್ಬೋದು : ಕೇಂದ್ರ ಸರ್ಕಾರ ಅನುಮೋದನೆ

ಡಿಜಿಟಲ್‌ ಡೆಸ್ಕ್:‌ 'ಕೋವಿಡ್-19 ಲಸಿಕೆಯನ್ನ ಗರ್ಭಿಣಿಯರಿಗೆ ನೀಡಬಹುದು ಎಂದು ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಲಸಿಕೆಯು ಗರ್ಭಿಣಿ ಮಹಿಳೆಯರಿಗೆ ಉಪಯುಕ್ತವಾಗಿದೆ ಮತ್ತು ಅದನ್ನ ನೀಡಬೇಕು' ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಗರ್ಭಿಣಿ ಮಹಿಳೆಯರಿಗೆ ಲಸಿಕೆಯನ್ನ ಶಿಫಾರಸು ಮಾಡಿದ ಕೆಲವು ವಾರಗಳ ನಂತ್ರ ಈ ಕ್ರಮ ಕೈಗೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲಿ ಹೊರಡಿಸಲಾದ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಕೋವಿಡ್-19 ಲಸಿಕೆ ನೀಡುವ ಮಧ್ಯಂತರ ಮಾರ್ಗದರ್ಶನದಲ್ಲಿ, ಕೋವಿಡ್-19 ಲಸಿಕೆಗಳನ್ನ ಗರ್ಭಿಣಿ ಮಹಿಳೆಯರಿಗೆ ನೀಡಬಹುದು. ಅವ್ರು ಕೋವಿಡ್-19 ಗೆ ಒಡ್ಡಿಕೊಳ್ಳುವ ಹೆಚ್ಚಿನ ಅಪಾಯದಲ್ಲಿದ್ದರೆ ಮತ್ತು ಅವ್ರು ತೀವ್ರ ಕೋವಿಡ್-19 ರೋಗದ ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಹ-ರೋಗಗ್ರಸ್ತ ಪರಿಸ್ಥಿತಿಗಳನ್ನ ಹೊಂದಿದ್ರೆ, ಅವರಿಗೆ ಕೋವಿಡ್-19 ಲಸಿಕೆಗಳನ್ನ ನೀಡಬಹುದು ಎಂದು ಉನ್ನತ ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆ ಹೇಳಿತ್ತು.

ಆದ್ರೆ, ಕೇಂದ್ರ ಸರ್ಕಾರ ಮಾತ್ರ ದೇಶದ ಎಲ್ಲಾ ಹಾಲುಣಿಸುವ ಮಹಿಳೆಯರಿಗೆ ಕೋವಿಡ್-19 ಲಸಿಕೆಯನ್ನ ಶಿಫಾರಸು ಮಾಡಿತ್ತು. ಆದ್ರೆ, ಇಲ್ಲಿಯವರೆಗೆ ಗರ್ಭಿಣಿ ಮಹಿಳೆಯರಿಗೆ ಇದಕ್ಕೆ ಅನುಮತಿ ಇರಲಿಲ್ಲ. ಕೋವಿಡ್-19 ವಿರುದ್ಧ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವೈದ್ಯಕೀಯ ಪ್ರಯೋಗ ದತ್ತಾಂಶದ ಕೊರತೆಯನ್ನು ಸರ್ಕಾರ ಉಲ್ಲೇಖಿಸಿತ್ತು. ಈ ಕಲ್ಪನೆಗೆ ಹಸಿರು ಸಂಕೇತ ನೀಡಲು ವೈಜ್ಞಾನಿಕ ಪುರಾವೆಗಳನ್ನು ಮೌಲ್ಯಮಾಪನ ಮಾಡುವ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ ಟಿಎಜಿಐ) ಎಂದು ಹೇಳಿದೆ.

 ಸಯ್ಯಿದ್ ಹಾರೂನ್ ತಂಙಳ್ ಅನುಸ್ಮರಣಾ ಸಂಗಮ ನಾಳೆ: ಎಸ್ಸೆಸ್ಸೆಫ್ ಕರ್ನಾಟಕ

ಸಯ್ಯಿದ್ ಹಾರೂನ್ ತಂಙಳ್ ಅನುಸ್ಮರಣಾ ಸಂಗಮ ನಾಳೆ: ಎಸ್ಸೆಸ್ಸೆಫ್ ಕರ್ನಾಟಕ


ಸಯ್ಯಿದ್ ಹಾರೂನ್ ತಂಙಳ್ ಅನುಸ್ಮರಣಾ ಸಂಗಮ ನಾಳೆ: ಎಸ್ಸೆಸ್ಸೆಫ್ ಕರ್ನಾಟಕ

ಬೆಂಗಳೂರು ಜೂ 25: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಇತ್ತೀಚೆಗೆ ನಮ್ಮಿಂದ ಅಗಲಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಉಪಾಧ್ಯಕ್ಷರಾಗಿದ್ದ ಸಯ್ಯಿದ್ ಹಾರೂನ್ ಅಲ್ ಬುಖಾರಿ, ಭದ್ರಾವತಿ ಅವರ ಅನುಸ್ಮರಣಾ ಸಂಗಮ ನಾಳೆ ಜೂನ್ 26, ಶನಿವಾರ ಸಂಜೆ 08:30ಕ್ಕೆ ಝೂಮ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲಾ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಎ.ಪಿ.ಎಸ್ ಹುಸೈನ್ ಅಲ್ ಅಹ್ದಲ್ ದುಆಃ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸ‌ಅದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ನೌಫಲ್ ಸಖಾಫಿ ಕಳಸ ಅನುಸ್ಮರಣಾ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸ‌ಅದಿ ಶಿವಮೊಗ್ಗ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬಶ್ಶಿರ್ ಅಹ್ಸನಿ ವಂದಿಸಲಿದ್ದಾರೆ. ಸಂಘಟನೆಯ ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಧ್ಯಮ ಕಾರ್ಯದರ್ಶಿ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ:  ತೇಲಿದ ಮೃತದೇಹಗಳು

ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ತೇಲಿದ ಮೃತದೇಹಗಳು


ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ:  ತೇಲಿದ ಮೃತದೇಹಗಳು

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪಟ್ಟಣದಲ್ಲಿ ಮುಂಗಾರು ಮಳೆ ಹಾಗೂ ಗಂಗಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವು ಅಧಿಕಾರಿಗಳಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಮರಳು ದಂಡೆಯಲ್ಲಿರುವ ಕೋವಿಡ್ ರೋಗಿಗಳ ಶವಗಳ ಸಾಮೂಹಿಕ ಸಮಾಧಿಗಳನ್ನು ನಿಭಾಯಿಸುವುದು ಅಧಿಕಾರಿಗಳಿಗೆ ತಲೆನೋವಾಗಿ ಕಾಡುತ್ತಿದೆ.

ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಹಾಗೂ  ಮರಳು ದಂಡೆಗಳು ಕುಸಿಯುತ್ತಿದ್ದಂತೆ ಮೃತ ದೇಹಗಳು ತೇಲಲಾರಂಭಿಸಿವೆ. ಕಳೆದ ಎರಡು ದಿನಗಳಿಂದ ಪ್ರಯಾಗ್ ರಾಜ್‌ನ ವಿವಿಧ ಘಾಟ್‌ಗಳಲ್ಲಿ ಸ್ಥಳೀಯ ಪತ್ರಕರ್ತರು ಚಿತ್ರೀಕರಿಸಿದ ಸೆಲ್‌ಫೋನ್ ವೀಡಿಯೊಗಳು ಹಾಗೂ  ಚಿತ್ರಗಳಲ್ಲಿ ಅಧಿಕಾರಿಗಳು ತೇಲಿಬರುತ್ತಿರುವ ಶವಗಳನ್ನು ಹಿಡಿಯುತ್ತಿರುವುದನ್ನು ತೋರಿಸುತ್ತಿದೆ.

 ಚಿತ್ರವೊಂದರಲ್ಲಿ ನದಿಯ ದಂಡೆಯಲ್ಲಿ ಮೃತದೇಹ ಸಿಲುಕಿರುವುದು ಕಂಡುಬಂದಿದೆ. ಪ್ರಯಾಗ್ ರಾಜ್‌ ಮಹಾನಗರ ಪಾಲಿಕೆಯ ತಂಡವೊಂದು ಶವವನ್ನು ಹೊರತೆಗೆಯುತ್ತಿದೆ.

ಕಳೆದ 24 ಗಂಟೆಗಳಲ್ಲಿ 40 ಶವಗಳನ್ನು ಅಂತ್ಯಸಂಸ್ಕಾರ ಮಾಡಿರುವುದಾಗಿ ಪ್ರಯಾಗ್ ರಾಜ್‌ ಮಹಾನಗರ ಪಾಲಿಕೆಯ ವಲಯ ಅಧಿಕಾರಿ ನೀರಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ನಾವು ಎಲ್ಲಾ ದೇಹಗಳನ್ನು ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಹಾಗೂ  ಎಲ್ಲಾ ಆಚರಣೆಗಳನ್ನು ಅನುಸರಿಸುತ್ತಿದ್ದೇವೆ" ಎಂದು ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದರು.

ಈಗ ಪತ್ತೆಯಾಗಿರುವ ಶವಗಳಿಗೂ ಕೋವಿಡ್ ಗೂ ಸಂಬಂಧವಿಲ್ಲ. ನದಿ ದಂಡೆಯಲ್ಲಿ ಹೆಣವನ್ನು ಸಮಾಧಿ ಮಾಡುವುದು ದೀರ್ಘ ಸಮಯದಿಂದ ಪಾಲಿಸಿಕೊಂಡುಬಂದಿರುವ ಸಂಪ್ರದಾಯ ಎಂದು ಉತ್ತರಪ್ರದೇಶ ಸರಕಾರ ತಿಳಿಸಿದೆ.


 ರಾಜ್ಯದಲ್ಲಿ ಇಂದಿನಿಂದ 'ವೀಕೆಂಡ್ ಕರ್ಪ್ಯೂ' ಜಾರಿ :

ರಾಜ್ಯದಲ್ಲಿ ಇಂದಿನಿಂದ 'ವೀಕೆಂಡ್ ಕರ್ಪ್ಯೂ' ಜಾರಿ :


ರಾಜ್ಯದಲ್ಲಿ ಇಂದಿನಿಂದ 'ವೀಕೆಂಡ್ ಕರ್ಪ್ಯೂ' ಜಾರಿ :

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಈ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಲಾಗಿದೆ.

ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಕೋವಿಡ್ ನಿಯಂತ್ರಣ ಕುರಿತ ಸಭೆಯ ಮುಖ್ಯಾಂಶಗಳು

ಜೂನ್ 21 ರ ಬಳಿಕ ಸರ್ಕಾರ ಲಾಕ್ ಡೌನ್ ನಿಯಮಾವಳಿಗಳಲ್ಲಿ ಹಲವು ಸಡಿಲಿಕೆ ಮಾಡಿದರೂ ಕೂಡ ವಾರಾಂತ್ಯ ಕರ್ಪ್ಯೂ ಹಾಗೂ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಕೊರೊನಾ ವೈರಸ್ ಹರಡುವಿಕೆ ತಟೆಗಟ್ಟುವಿಕೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 ಏನಿರುತ್ತೆ..ಏನಿರಲ್ಲ..?

1) ಆಹಾರ ಸಾಮಾಗ್ರಿಗಳ ಅಂಗಡಿ, ದಿನಸಿ ಅಂಗಡಿ, ಹಣ್ಣು ತರಕಾರಿ ಅಂಗಡಿಗಳು, ಮಾಂಸ , ಮೀನು ಹಾಲು ಹಾಗೂಇನ್ನಿತರ ಡೈರಿ ಉತ್ಪನ್ನಗಳ ಮಾರುಕಟ್ಟೆ ತೆರೆದಿರುತ್ತದೆ.

2) ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅವಕಾಶ

3) ಮದ್ಯದ ಅಂಗಡಿಗೆ ಪಾರ್ಸೆಲ್ ನೀಡುವ ಅವಕಾಶ, ಅದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ,ಮಾತ್ರ ಅವಕಾಶ

4) ಎಲ್ಲಾ ರೀತಿಯ ಹೋಮ್ ಡೆಲಿವರಿಗೆ ದಿನದ 24 ಗಂಟೆಗಳಲ್ಲೂ ಅವಕಾಶ

5) ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಕೂಡ ವಾರಾಂತ್ಯದ ಕರ್ಪ್ಯೂ ವೇಳೆ ತೆರೆಯಲು ಅವಕಾಶ

ಆದರೆ ಪಾರ್ಸೆಲ್ ಹಾಗೂ ಹೋಮ್ ಡೆಲಿವರಿಗೆ ಮಾತ್ರ ಅವಕಾಶ.

6) ಖಾಸಗಿ ಬಸ್ , ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ, ಪ್ರಯಾಣಿಕರು ಟಿಕೆಟ್ ಹಾಗೂ ಇನ್ನಿತರ ಸೂಕ್ತ ದಾಖಲೆ ತೋರಿಸಿ ಪ್ರಯಾಣಿಸಬೇಕು.


7) ವೀಕೆಂಡ್ ಕರ್ಪ್ಯೂ ವೇಳೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಅವಕಾಶ, ಆದರೆ ಮೆಟ್ರೋ ಸಂಚಾರ ಇರುವುದಿಲ್ಲ

Thursday, 24 June 2021

 ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್‌

ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್‌

ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್‌

ದೇಶದ್ರೋಹ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಶುಕ್ರವಾರ ಆಯಿಷಾ ಸುಲ್ತಾನಾಗೆ ನಿರೀಕ್ಷಿತ ಜಾಮೀನು ನೀಡಿದೆ. ಐಪಿಸಿಯ ಸೆಕ್ಷನ್ 124 ಎ ಮತ್ತು 153 ಬಿ ಅಡಿಯಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಾದ ನಂತರ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಜಾಮೀನು ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ನ್ಯಾಯಮೂರ್ತಿ ಅಶೋಕ್ ಮೆನನ್ ಆದೇಶ ಹೊರಡಿಸಿದ್ದಾರೆ.

ಲಕ್ಷದ್ವೀಪದ ಜನರ ವಿರುದ್ಧ ಕೇಂದ್ರವು ಕೋವಿಡ್ 19 ಹರಡಲು ಪ್ರಫುಲ್‌ ಪಟೇರ್‌ ರನ್ನು 'ಜೈವಿಕ ಆಯುಧ'ವಾಗಿ ನಿಯೋಜಿಸಿದೆ ಎಂದು ಮಾಧ್ಯಮವೊಂದರಲ್ಲಿ ಅವರು ನೀಡಿದ ಹೇಳಿಕೆಗೆ ಪ್ರಕರಣ ದಾಖಲಾಗಿತ್ತು. ಅದರಂತೆ, 2021 ರ ಜೂನ್ 20 ರಂದು ಕವರಟ್ಟಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಈ ಮಧ್ಯಂತರ ಜಾಮೀನಿನ ಮೂಲಕ ನೋಟಿಸ್ ಅನ್ನು ಅನುಸರಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆಯಿಶಾಗೆ ನಿರ್ದೇಶಿಸಲಾಗಿತ್ತು.  ಅವರು ಹೇಳಿದ ದಿನಾಂಕದಂದು ಕವರಟ್ಟಿ ಪೊಲೀಸ್ ಠಾಣೆಗೆ ಆಯಿಶಾ ಹಾಜರಾದರು ಎಂದು ವರದಿಯಾಗಿದೆ. 

ಬಳಿಕ, ಕೇಂದ್ರಾಡಳಿತ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸುವ ಮೂಲಕ ನ್ಯಾಯಾಲಯ ನೀಡಿದ ಮಧ್ಯಂತರ ರಕ್ಷಣೆಯನ್ನು ಆಯಿಶಾ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಲಕ್ಷದ್ವೀಪ ಆಡಳಿತವು ಗುರುವಾರ ಅರ್ಜಿ ಸಲ್ಲಿಸಿತ್ತು ಎನ್ನಲಾಗಿದೆ. 

 ಕೋವಿಡ್ ಕಾಲ: ಮುಹಿಮ್ಮಾತ್ ಅನುದಾನರಹಿತ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ಉಚಿತ

ಕೋವಿಡ್ ಕಾಲ: ಮುಹಿಮ್ಮಾತ್ ಅನುದಾನರಹಿತ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ಉಚಿತ


ಕೋವಿಡ್ ಕಾಲ: ಮುಹಿಮ್ಮಾತ್ ಅನುದಾನರಹಿತ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ಉಚಿತ

ಪುತ್ತಿಗೆ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಪೋಷಕರಿಗೆ ಪುತ್ತಿಗೆ ಮುಹಿಮ್ಮಾತ್ ಸಂಸ್ಥೆ ಕ್ರಾಂತಿಕಾರಿ ಸಹಾಯ ಹಸ್ತವನ್ನು ಚಾಚಿದೆ. 

ಮುಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಉಚಿತವಾಗಿಸುವ ಮೂಲಕ ಮುಹಿಮ್ಮಾತ್ ಮಾದರಿಯನ್ನು ತಂದಿದೆ. 2021-22 ನೇ ಸಾಲಿನಲ್ಲಿ ಶಿಕ್ಷಣ ಪಡೆಯುವ ಮಳಲಯಾಳಂ ಮತ್ತು ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಹೊಸ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಉಚಿತ ಗೊಳಿಸಿದೆ.

ಈ ಮೊದಲು ಈ ಸಂಸ್ಥೆ ಅನಾಥರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿತ್ತು.  ಈಗ ಸಾವಿರಾರು ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಚಾರಿಟಿ ಫಂಡಿಂಗ್ ಮೂಲಕ ಇದರ ದೊಡ್ಡ ವೆಚ್ಚವನ್ನು ಕಂಡುಹಿಡಿಯಲು ತೀರ್ಮಾನಿಸಲಾಯಿತು.

ಕೋವಿಡ್ ಉಳಿವಿನಲ್ಲಿ ಸರ್ಕಾರವನ್ನು ಬೆಂಬಲಿಸಲು ಈಗಾಗಲೇ ಹಲವಾರು ಚಟುವಟಿಕೆಗಳನ್ನು ಸ್ಥಾಪಿಸಲಾಗಿದೆ.ಮುಹಿಮ್ಮತ್‌ನಲ್ಲಿ ಕೋವಿಡ್ ರೋಗಿಗಳಿಗೆ ಆರೈಕೆ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ, ವಿವಿಧ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಪೀಠೋಪಕರಣಗಳು, ಆಂಬ್ಯುಲೆನ್ಸ್ ಸೇವೆ ಮತ್ತು ಅಂತ್ಯಕ್ರಿಯೆಯ ಆರೈಕೆ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. 

ಪ್ರತಿವರ್ಷ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ.  ಶಾಲೆಯು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಸಾವಯವ ತರಕಾರಿ ಕೃಷಿಗಾಗಿ 2019-20 ನೇ ಸಾಲಿನಲ್ಲಿ ರಾಜ್ಯ ಶಾಲಾ ಉತ್ಸವದಲ್ಲಿ ಮೂರು ಪ್ರಥಮ ಸ್ಥಾನಗಳನ್ನು ಗಳಿಸಿದೆ. ಹಾಗೂ ಪರಿಸರ ಅಧ್ಯಯನ ಸಾಕ್ಷ್ಯಚಿತ್ರಕ್ಕೆ ಜಿಲ್ಲಾ ಮಟ್ಟದಲ್ಲಿ ಮಾನ್ಯತೆ ಲಭಿಸಿದೆ. ಮನೋರಮ ಪ್ರಥಮಸ್ಥಾನ, ಮನೋರಮ ಅತ್ಯುತ್ತಮ, ಮಾತೃಭೂಮಿ ಅತ್ಯುತ್ತಮ, ಹೀಗೆ ಹಲವಾರು ಮಾನ್ಯತೆಗಳನ್ನು ಪಡೆದಿದೆ. ಶಾಲೆಯು ಸುಸಜ್ಜಿತ ಜೂನಿಯರ್ ಉಪಶಾಮಕ ಆರೈಕೆ ತಂಡವನ್ನು ಸಹ ಹೊಂದಿದೆ.

ಶೈಕ್ಷಣಿಕವಾಗಿ ಹಿಂದುಳಿದ ಪುತ್ತಿಗೆಯ ವಿದ್ಯಾಭ್ಯಾಸ ಕ್ರಾಂತಿಯಲ್ಲಿ ಮುಹಿಮ್ಮತ್ ಹೈಯರ್ ಸೆಕೆಂಡರಿ ಸ್ಕೂಲ್ ಪ್ರಮುಖ ಪಾತ್ರ ವಹಿಸಿದೆ. ಅನುದಾನರಹಿತವಾದುದರಿಂದ ಶಿಕ್ಷಕರ ವೇತನ ಇತ್ಯಾದಿಗಳಿಗೆ ವಿದ್ಯಾರ್ಥಿಗಳಿಂದ ಶುಲ್ಕ ವಿಧಿಸಲಾಗುತ್ತಿತ್ತು.

ಕಳೆದ ವರ್ಷ ಕೋವಿಡ್ ಅವಧಿಯ ಕಾರಣದಿಂದಾಗಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಪೋಷಕರಿಗೆ ಸರ್ಕಾರವು ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಿತ್ತು. ಈಗ ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪೋಷಕರು ನಿರಾಳರಾಗಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅನುದಾನರಹಿತ ಶಾಲೆ ಎರಡು ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. 

ಬಿ.ಎಸ್.ಅಬ್ದುಲ್ಲಾಕುಂಞಿ ಫೈಝಿ (ಪ್ರಧಾನ ಕಾರ್ಯದರ್ಶಿ), ಸಯ್ಯಿದ್ ಹಬೀಬುಲ್ ಅಹ್ದಲ್ (ಉಪಾಧ್ಯಕ್ಷ), ಸಯ್ಯಿದ್ ಮುನೀರುಲ್ ಅಹ್ದಲ್ (ಶೈಕ್ಷಣಿಕ ಕಾರ್ಯದರ್ಶಿ), ಹಾಜಿ ಅಮೀರಲೀ ಚೂರಿ (ಖಜಾಂಚಿ), ಸುಲೈಮಾನ್ ಕರಿವೆಲ್ಲೂರ್ (ಶಾಲಾ ವ್ಯವಸ್ಥಾಪಕ), ಸಿ.ಎಚ್.  ಮುಹಮ್ಮದ್ ಪಾಟ್ಲಾ, ಅಬ್ದುಲ್ ಖಾದಿರ್ ಸಕಾಫಿ ಮೊಗ್ರಾಲ್ (ಪಿಆರ್‌ಡಿ ಕಾರ್ಯದರ್ಶಿ), ಎಂ.ಟಿ. ರೂಪೇಶ್(ಪ್ರಾಂಶುಪಾಲರು) ಮತ್ತು ಅಬ್ದುಲ್ ಖಾದಿರ್ ಮಾಸ್ಟರ್ (ಮುಖ್ಯ ಶಿಕ್ಷಕ),ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


 ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ ದುರಂತ: 18 ವಿದ್ಯಾರ್ಥಿಗಳು ಸಾವು

ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ ದುರಂತ: 18 ವಿದ್ಯಾರ್ಥಿಗಳು ಸಾವು


ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ ದುರಂತ: 18 ವಿದ್ಯಾರ್ಥಿಗಳು ಸಾವು

ಬೀಜಿಂಗ್: ಮಧ್ಯ ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 18 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಹೆಚ್ಚಿನವರು 7 ರಿಂದ 16 ವರ್ಷದೊಳಗಿನವರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಂಕಿ ಕಾಣಿಸಿಕೊಂಡಾಗ ಶಾಲಾ ಆವರಣದಲ್ಲಿ 34 ವಿದ್ಯಾರ್ಥಿಗಳಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 ಬಿಜೆಪಿ ಎಂದರೆ 'ಭ್ರಷ್ಟರ ಜನತಾ ಪಕ್ಷ' : ರಾಮಲಿಂಗಾರೆಡ್ಡಿ ಆಕ್ರೋಶ

ಬಿಜೆಪಿ ಎಂದರೆ 'ಭ್ರಷ್ಟರ ಜನತಾ ಪಕ್ಷ' : ರಾಮಲಿಂಗಾರೆಡ್ಡಿ ಆಕ್ರೋಶ


ಬಿಜೆಪಿ ಎಂದರೆ 'ಭ್ರಷ್ಟರ ಜನತಾ ಪಕ್ಷ' : ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು, ಜೂ.24- ಮಹಾಮಾರಿ ಕೋವಿಡ್-19 ಸಂಕಷ್ಟದ ಸಮಯ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಿ ಬಿಜೆಪಿ ಸರ್ಕಾರ ಸುಳ್ಳು ಘೋಷಣೆಗಳನ್ನು ಮಾಡುವ ಮೂಲಕ ಜಾಹೀರಾತು ನೀಡಿ ಅಸಂಘಟಿತ ವಲಯ, ಕೂಲಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು, ಬಡವರು, ಚಿಂದಿ ಆಯುವವರಿಗೆ ಪ್ಯಾಕೆಜ್ ನೀಡುತ್ತೇವೆ ಎಂದು ಘೋಷಣೆ ಮಾಡಿ ತಿಂಗಳು ಕಳೆದರೂ ಯಾವುದೇ ಹಣವನ್ನು ಜನತೆಗೆ ತಲುಪಿಸದೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಮೂಲಕ ಚೆಲ್ಲೇಟವಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲಚೇನಹಳ್ಳಿ , ಕೋಣನಕುಂಟೆ, ಅಂಜನಾಪುರ, ಗಣಪತಿಪುರ, ಉತ್ತರಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಅವರು 30 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಬೆಲೆಗಳನ್ನು ಏರಿಸುವುದರ ಮೂಲಕ ಜನರ ಜೀವದ ಜತೆ ಜೀವನವನ್ನೂ ಹಾಳುಮಾಡುವ ಕೆಲಸಕ್ಕೆ ಕೈಹಾಕಿದೆ. ಸುಳ್ಳು ಹೇಳುವುದೇ ಬಿಜೆಪಿಗರ ಅಜಂಡವಾಗಿದ್ದು, ಬಿಜೆಪಿ ಎಂದರೆ ಭ್ರಷ್ಟರ ಜನತಾ ಪಕ್ಷವಾಗಿದೆ ಎಂದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಯುಪಿಎ ಸರ್ಕಾರ ಇದ್ದಾಗ ಒಂದು ರೂ. ಪೆಟ್ರೋಲï, ಡಿಸೇಲ್ ಬೆಲೆ ಏರಿಕೆ ಮಾಡಿದರೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು, ಕರ್ನಾಟಕದಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ,ಆರ್.ಅಶೋಕ್,ನಳಿನ್ ಕುಮಾರ್ ಕಟೀಲï, ಸಿ.ಟಿ.ರವಿ, ಅಶ್ವತ್ ನಾರಾಯಣ್ ಬೀದಿಗಿಳಿದು ಬೊಬ್ಬೆ ಹಾಕುವ ಮೂಲಕ ಹೋರಾಟ ಮಾಡುತ್ತಿದ್ದರು. ಕೊರೊನಾ ಸಂಕಷ್ಟದ ಕಾಲದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ನಿತ್ಯ ಏರಿಕೆಯಾಗುತ್ತಿದ್ದು ,ಪ್ರತಿ ದಿನ ಲಕ್ಷಾಂತರ ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಪಾವತಿಯಾಗುತ್ತಿದ್ದರೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರಿ ಸುಳ್ಳು ಭರವಸೆ, ಪ್ರಚಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂ. ಲೂಟಿ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ನೊಂದವರ ಧ್ವನಿಯಾಗಿ ಸಂಸದರು ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತನಾಗಿ ನಿರಂತರವಾಗಿ ಬಡವರು, ನೊಂದವರು, ತುಳಿತಕ್ಕೆ ಒಳಗಾದ ಹಿಂದುಳಿದವರು, ಮಧ್ಯಮ ವರ್ಗದವರು, ರೈತರು, ಕಾರ್ಮಿಕರಿಗೆ ದಿನಸಿ ಕಿಟ, ತರಕಾರಿ, ಔಷಧಿ ಕಿಟ್ ವಿತರಣೆ, ಧನಸಹಾಯ ಮಾಡುವ ಮೂಲಕ ಕ್ಷೇತ್ರದ ಮನೆ ಮಗನಾಗಿ ಸೇವೆ ಮಾಡುತ್ತಿದ್ದೇನೆ ಅಷ್ಟೆ ಎಂದರು.

ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್, ಎಸ್.ಗಂಗಾಧರ್, ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಎಂ.ಸದಾನಂದ್, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್, ವಸಂತರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ, ಸಾಹಿತಿ ಮಧು ಬಿಲ್ಲನಾಕೋಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.

 ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಗೈಡ್-2021 ಎರಡನೇ ಹಂತದ ಆನ್ಲೈನ್  ಲೀಡರ್ಸ್ ಟ್ರೈನಿಂಗ್

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಗೈಡ್-2021 ಎರಡನೇ ಹಂತದ ಆನ್ಲೈನ್ ಲೀಡರ್ಸ್ ಟ್ರೈನಿಂಗ್


ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಗೈಡ್-2021 ಎರಡನೇ ಹಂತದ ಆನ್ಲೈನ್  ಲೀಡರ್ಸ್ ಟ್ರೈನಿಂಗ್

ಜೂನ್ 24 ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ವತಿಯಿಂದ ಜೂನ್ 26 ರಿಂದ ಜೂನ್ 30 ರ ತನಕ ಸತತ ಐದು ದಿನಗಳ " ಗೈಡ್ - 2021" ಎರಡನೇ ಹಂತದ ಆನ್ಲೈನ್ ತರಗತಿಯು ಗೂಗಲ್ ಮೀಟ್ ಮೂಲಕ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ  ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ S.P ಹಂಝ ಸಖಾಫಿ ಬಂಟ್ವಾಳ, ಜಾಮಿಯಾ ಮರ್ಕಝ್ ಮುದರ್ರಿಸ್ ಸಯ್ಯಿದ್ ಜಝೀಲ್ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಮಲಪ್ಪುರಂ, ಎಸ್.ವೈ.ಎಸ್ ಮಲಪ್ಪುರಂ ವೆಸ್ಟ್ ಜಿಲ್ಲೆ ಕಾರ್ಯದರ್ಶಿ ಹಾಫಿಲ್ ಅಬ್ದುಲ್ ಮಜೀದ್ ಅಹ್ಸನಿ, ಎಸ್.ವೈ.ಎಸ್ ಕರ್ನಾಟಕ ರಾಜ್ಯ ಇಸ್ವಾಬಾ ಕಾರ್ಯದರ್ಶಿ ಉಮರ್ ಸಖಾಫಿ ಎಡಪ್ಪಾಲ,  ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಟಿ.ಎಮ್ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ  ವಿವಿಧ ವಿಷಯಗಳಲ್ಲಿ ತರಗತಿ ಮಂಡಿಸಲಿದ್ದಾರೆಂದು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ರಾಜ್ಯದಲ್ಲಿ ಗುರುವಾರ 3,979 ಮಂದಿಗೆ ಕೊರೋನ ದೃಢ, ಸೋಂಕಿನಿಂದ 138 ಮಂದಿ ಸಾವು

ರಾಜ್ಯದಲ್ಲಿ ಗುರುವಾರ 3,979 ಮಂದಿಗೆ ಕೊರೋನ ದೃಢ, ಸೋಂಕಿನಿಂದ 138 ಮಂದಿ ಸಾವು

ರಾಜ್ಯದಲ್ಲಿ ಗುರುವಾರ 3,979 ಮಂದಿಗೆ ಕೊರೋನ ದೃಢ, ಸೋಂಕಿನಿಂದ 138 ಮಂದಿ ಸಾವು

ಬೆಂಗಳೂರು, ಜೂ.24: ರಾಜ್ಯದಲ್ಲಿ ಗುರುವಾರ 3,979 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 138 ಜನರು ಸೋಂಕಿಗೆ ಬಲಿಯಾಗಿದ್ದು, 6,768 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 28,23,444ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 34,425ಕ್ಕೆ ತಲುಪಿದೆ. 

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,10,523ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

138 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 10, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 14, ಬೀದರ್ 1, ಚಾಮರಾಜನಗರ 1, ಚಿಕ್ಕಮಗಳೂರು 6, ಚಿತ್ರದುರ್ಗ 2, ದಕ್ಷಿಣ ಕನ್ನಡ 15, ದಾವಣಗೆರೆ 3, ಧಾರವಾಡ 10, ಹಾಸನ 9, ಹಾವೇರಿ 6, ಕಲಬುರಗಿ 1, ಕೊಡಗು 2, ಕೋಲಾರ 7, ಕೊಪ್ಪಳ 2, ಮಂಡ್ಯ 1, ಮೈಸೂರು 22, ಶಿವಮೊಗ್ಗ 5, ತುಮಕೂರು 2, ಉಡುಪಿ 7, ಉತ್ತರ ಕನ್ನಡ 2, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 3,979 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 7, ಬಳ್ಳಾರಿ 67, ಬೆಳಗಾವಿ 98, ಬೆಂಗಳೂರು ಗ್ರಾಮಾಂತರ 81, ಬೆಂಗಳೂರು ನಗರ 969, ಬೀದರ್ 18, ಚಾಮರಾಜನಗರ 64, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 110, ಚಿತ್ರದುರ್ಗ 33, ದಕ್ಷಿಣ ಕನ್ನಡ 498, ದಾವಣಗೆರೆ 118, ಧಾರವಾಡ 62, ಗದಗ 18, ಹಾಸನ 336, ಹಾವೇರಿ 28, ಕಲಬುರಗಿ 31, ಕೊಡಗು 115, ಕೋಲಾರ 103, ಕೊಪ್ಪಳ 18, ಮಂಡ್ಯ 137, ಮೈಸೂರು 404, ರಾಯಚೂರು 16, ರಾಮನಗರ 32, ಶಿವಮೊಗ್ಗ 206, ತುಮಕೂರು 128, ಉಡುಪಿ 123, ಉತ್ತರ ಕನ್ನಡ 104, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ.

Wednesday, 23 June 2021

 ಒಡಿಶಾದ ಲಸಿಕೆ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಫೋಟೊ ಹಾಕದ್ದಕ್ಕೆ ಬಿಜೆಪಿ ಪ್ರತಿಭಟನೆ

ಒಡಿಶಾದ ಲಸಿಕೆ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಫೋಟೊ ಹಾಕದ್ದಕ್ಕೆ ಬಿಜೆಪಿ ಪ್ರತಿಭಟನೆ

ಒಡಿಶಾದ ಲಸಿಕೆ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಫೋಟೊ ಹಾಕದ್ದಕ್ಕೆ ಬಿಜೆಪಿ ಪ್ರತಿಭಟನೆ

ಭುವನೇಶ್ವರ: ಒಡಿಶಾದ ವ್ಯಾಕ್ಸಿನೇಶನ್ ಕೇಂದ್ರಗಳಲ್ಲಿ ಹಾಕಲಾಗಿರುವ ಹೋರ್ಡಿಂಗ್ಸ್ ಹಾಗೂ ಪೋಸ್ಟರ್  ಗಳಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಚಿತ್ರ ಮಾತ್ರ ಇದ್ದು, ಪೋಸ್ಟರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಇಲ್ಲದಿರುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಬುಧವಾರ ಪ್ರತಿಭಟನೆ ನಡೆಸಿದೆ.

ಲಸಿಕೆ ಕೇಂದ್ರಗಳಲ್ಲಿ ಹಾಕಿರುವ ಎಲ್ಲಾ ರೀತಿಯ ಜಾಹೀರಾತುಗಳಲ್ಲಿ ಮೋದಿಯವರ ಚಿತ್ರವನ್ನು ಸೇರಿಸಬೇಕೆಂದು ಬಿಜೆಪಿ ಪಕ್ಷ  ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಚುಚ್ಚುಮದ್ದಿನ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಬಾಲಸೋರ್‌ನ ಗಾಂಧಿ ಸ್ಮೃತಿ ಭವನದಲ್ಲಿರುವ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರತಾಪ್ ಸಾರಂಗಿ, "ಇಂತಹ ಬೃಹತ್ ಲಸಿಕಾ ಅಭಿಯಾನವನ್ನುರೂಪಿಸಿರುವುದಕ್ಕೆ ಮೋದಿ ಸಾರ್ವತ್ರಿಕ ಪ್ರಶಂಸೆಗೆ ಅರ್ಹರು" ಎಂದು ಒತ್ತಿ ಹೇಳಿದರು.

ಸಾರಂಗಿ ಬಾಲಸೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕೊರೋನ ವೈರಸ್ ಲಸಿಕೆಗಳನ್ನು ಸಂಗ್ರಹಿಸುವಲ್ಲಿ ವಿಫಲವಾದ ನಂತರ ಒಡಿಶಾ ಸರಕಾರವು ಕೇಂದ್ರ ಸರಕಾರದ ಬೆಂಬಲವನ್ನು ಕೋರಿತ್ತು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದ  ರಕ್ಷಣೆಗೆ ಬಂದಿದ್ದಾರೆ ಎಂದು ಎಂದು ಬಿಜೆಪಿ ಸಂಸದ ಅಪರಾಜಿತಾ ಸಾರಂಗಿ ಬುಧವಾರ  ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ಚಿತ್ರವನ್ನು ಹಾಕದಿರುವುದು ರಾಜ್ಯ ಸರಕಾರದ "ಅಭದ್ರತೆ ಹಾಗೂ ಸಂಕುಚಿತ ಮನೋಭಾವ"ವನ್ನು ಎತ್ತಿ ತೋರಿಸುತ್ತದೆ  ಎಂದು ಭುವನೇಶ್ವರ ಸಂಸದ ಹೇಳಿದರು.


 


 ಭಾರತ 170 ರನ್ ಗೆ ಆಲೌಟ್: ನ್ಯೂಝಿಲ್ಯಾಂಡ್ ಗೆಲುವಿಗೆ 139 ರನ್ ಗುರಿ

ಭಾರತ 170 ರನ್ ಗೆ ಆಲೌಟ್: ನ್ಯೂಝಿಲ್ಯಾಂಡ್ ಗೆಲುವಿಗೆ 139 ರನ್ ಗುರಿ


ಭಾರತ 170 ರನ್ ಗೆ ಆಲೌಟ್: ನ್ಯೂಝಿಲ್ಯಾಂಡ್ ಗೆಲುವಿಗೆ 139 ರನ್ ಗುರಿ

ಸೌತಾಂಪ್ಟನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಗೆಲುವಿಗೆ ಭಾರತವು ನ್ಯೂಝಿಲ್ಯಾಂಡ್ ತಂಡಕ್ಕೆ 139 ರನ್ ಗುರಿ ನೀಡಿದೆ.

ಆರನೇ ದಿನವಾದ ಬುಧವಾರ 2 ವಿಕೆಟ್ ನಷ್ಟಕ್ಕೆ 64 ರನ್  ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ  ಭಾರತ ತಂಡ 73 ಓವರ್ ಗಳಲ್ಲಿ ಕೇವಲ 170 ರನ್ ಗೆ ಗಂಟುಮೂಟೆ ಕಟ್ಟಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (41)ಸರ್ವಾಧಿಕ ಸ್ಕೋರ್ ಗಳಿಸಿದರು. ರೋಹಿತ್ ಶರ್ಮಾ 30 ರನ್ ಗಳಿಸಿದರು. ನಾಯಕ ಕೊಹ್ಲಿ ಸಹಿತ ಉಳಿದೆಲ್ಲಾ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಟಿಮ್ ಸೌಥಿ(4-48),  ಟ್ವೆಂಟ್ ಬೌಲ್ಟ್ (3-39) ಹಾಗೂ ಜಮೀಸನ್ (2-30) ಅವರ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 170 ರನ್ ಗೆ ಆಲೌಟಾಯಿತು.

ಇಂದು ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ  ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ 13 ರನ್ ಗಳಿಸಿ ಔಟಾದರೆ, ಪೂಜಾರ 15 ರನ್ ಗೆ ವಿಕೆಟ್ ಒಪ್ಪಿಸಿದರು.


 

Tuesday, 22 June 2021

ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!


ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

ಕೊಲ್ಲಂ: ಪತ್ನಿ ಸಾವಿನ ಪ್ರಕರಣದಲ್ಲಿ ಕೇರಳದ ಸಹಾಯಕ ಮೋಟಾರು ವಾಹನ ನಿರೀಕ್ಷಕರನ್ನು ಬಂಧಿಸಲಾಗಿದ್ದು, ಇನ್ಸ್​ಪೆಕ್ಟರ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಪತ್ನಿ ವಿಸ್ಮಯ ಮನೆಯಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ಬಳಿಕ ಆರೋಪಿ ಇನ್ಸ್​ಪೆಕ್ಟರ್​ ಕಿರಣ್​ಕುಮಾರ್​ರನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಂಗಳವಾರ ಕಿರಣ್​ರನ್ನು ಬಂಧಿಸುವ ಮುನ್ನ ಅವರನ್ನು ಅನೇಕ ಸಮಯದವರೆಗೆ ವಿಚಾರಣೆ ನಡೆಸಲಾಗಿದೆ. ಈ ವೇಳೆ ತಪ್ಪೊಪ್ಪಿಕೊಂಡಿರುವ ಕಿರಣ್​ಕುಮಾರ್​ ಆಗಾಗ ವಿಸ್ಮಯಳಿಗೆ ಥಳಿಸುತ್ತಿದ್ದೆ ಎಂದು ಹೇಳಿದ್ದಾರೆ. ವಿಸ್ಮಯ ತವರು ಮನೆಗೆ ಕಳುಹಿಸಿರುವ ಫೋಟೋಗಳಲ್ಲಿರುವ ಗಾಯಗಳು ಸಹ ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾರೆ.

ಸೋಮವಾರ ಮುಂಜಾನೆ ನಾನು ಮತ್ತು ವಿಸ್ಮಯ ಜಗಳ ಆಡಿದೆವು. ಇದಾದ ಬಳಿಕ ತವರು ಮನೆಗೆ ಹೋಗುವುದಾಗಿ ಹೇಳಿದಳು. ತದನಂತರದಲ್ಲಿ ಇಬ್ಬರ ನಡುವಿನ ವೈಮನಸ್ಸು ಹಿರಿಯರ ಸಮ್ಮುಖದಲ್ಲಿ ಬಗೆಹರಿಯಿತು. ಆದರೆ, ತುಂಬಾ ನೊಂದಿದ್ದ ವಿಸ್ಮಯ ತನ್ನ ಜೀವನಕ್ಕೆ ತಾನೇ ಅಂತ್ಯವಾಡಿದಳು.

ಶೌಚಗೃಹಕ್ಕೆ ತೆರಳಿದ ವಿಸ್ಮಯ ಅನೇಕ ಸಮಯದವರೆಗೂ ಮರಳಿ ಬರಲಿಲ್ಲ. ಸುಮಾರು 20 ನಿಮಿಷವಾದರು ಬರಲಿಲ್ಲ. ಅನುಮಾನದಿಂದ ಬಾಗಿಲು ಮುರಿದು ನೋಡಿದಾಗ ಆಕೆ ಸತ್ತು ಬಿದ್ದಿದ್ದಳು ಎಂದು ಕಿರಣ್​ ಹೇಳಿಕೆ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಣ್​ ಮತ್ತು ವಿಸ್ಮಯ ಪಾಲಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಕಿರಣ್​ ತಾಯಿಯು ಕೂಡ ವಿಸ್ಮಯ ಮೇಲೆ ಹಲ್ಲೆ ಮಾಡಿದ್ದರು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ. (ಏಜೆನ್ಸೀಸ್​) 

  ಜೂನ್ 23ರಂದು ಕೇಂದ್ರ ಸಚಿವ ಸಂಪುಟ ಸಭೆ

ಜೂನ್ 23ರಂದು ಕೇಂದ್ರ ಸಚಿವ ಸಂಪುಟ ಸಭೆ


ಜೂನ್ 23ರಂದು ಕೇಂದ್ರ ಸಚಿವ ಸಂಪುಟ ಸಭೆ

ನವದೆಹಲಿ: ಬುಧವಾರ (ಜೂನ್ 23) ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಂದ್ಹಾಗೆ, ಪ್ರಧಾನಿ ನರೇಂದ್ರ ಮೋದಿಯವ್ರು ಭಾನುವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರೊಂದಿಗೆ ನವದೆಹಲಿಯ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದ್ದರು. ಈ ಸಭೆ ನಡೆದು ಕೆಲವು ದಿನಗಳ ನಂತ್ರ ನಾಳೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

 ಇಂಧನ ದರ ಮತ್ತೆ ಪರಿಷ್ಕೃರಣೆ: ಮುಂಬೈನಲ್ಲಿ ಪೆಟ್ರೋಲ್ ದರ 103.63 ರೂ.

ಇಂಧನ ದರ ಮತ್ತೆ ಪರಿಷ್ಕೃರಣೆ: ಮುಂಬೈನಲ್ಲಿ ಪೆಟ್ರೋಲ್ ದರ 103.63 ರೂ.


ಇಂಧನ ದರ ಮತ್ತೆ ಪರಿಷ್ಕೃರಣೆ: ಮುಂಬೈನಲ್ಲಿ ಪೆಟ್ರೋಲ್ ದರ 103.63 ರೂ.

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಒಂದು ದಿನದ ವಿರಾಮದ ನಂತರ ಪ್ರತಿ ಲೀಟರ್‌ಗೆ 25 ರಿಂದ 28 ಪೈಸೆ ಹೆಚ್ಚಿಸಿವೆ.

ಮೇ 4 ರ ಬಳಿಕ ಇಂಧನ ಬೆಲೆ 28 ಬಾರಿ ಏರಿಕೆಯಾಗಿದೆ. ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್ ಹಾಗೂ  ಕರ್ನಾಟಕಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ದಾಟಿದೆ.

ಇತ್ತೀಚಿನ ಬೆಲೆ ಪರಿಷ್ಕರಣೆ ನಂತರ  ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 103.63 ರೂ.ಗೆ ಏರಿಕೆಯಾಗಿದೆ. ನಗರದಲ್ಲಿ ಡೀಸೆಲ್ ಬೆಲೆ 95.72 ರೂ.ಗೆ ಏರಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 97.5 ರೂ.ಗೆ ಏರಿದೆ. ಡೀಸೆಲ್ ದರ 88.23 ರೂ.ಗೆ ಏರಿಕೆ ಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 98.65 ಮತ್ತು 92.83 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ 97.38 ರೂ.ಗೆ ಏರಿದೆ. ನಗರದಲ್ಲಿ ಡೀಸೆಲ್ ಬೆಲೆ 91.08 ರೂ.ತಲುಪಿದೆ.

ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚಿರುವ ಮತ್ತೊಂದು ಪ್ರಮುಖ ನಗರ ಬೆಂಗಳೂರು. ಮಂಗಳವಾರ ನಗರದಲ್ಲಿ ಪೆಟ್ರೋಲ್ ಬೆಲೆ 100.76 ರೂ.ಗೆ ತಲುಪಿದ್ದರೆ, ಒಂದು ಲೀಟರ್ ಡೀಸೆಲ್ ಬೆಲೆ 93.54 ರೂ.ಏರಿಕೆಯಾಗಿದೆ.


 

 ಮಗನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ; ಆರೋಪಿ ಸೆರೆ

ಮಗನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ; ಆರೋಪಿ ಸೆರೆ


ಮಗನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ; ಆರೋಪಿ ಸೆರೆ

ಮಂಗಳೂರು : ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾದ ಘಟನೆ ಮಂಗಳೂರಿನ ಜಪ್ಪಿನಮೊಗರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೊಪ್ಪರಿಗೆಗುತ್ತು ನಿವಾಸಿ ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಸ್ವಾಮೀತ್ ಶೆಟ್ಟಿ (25) ಸುಟ್ಟ ಗಾಯಗೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ ಸ್ವಾಮೀತ್ ಶೆಟ್ಟಿಯ ತಂದೆ ವಿಶ್ವನಾಥ ಶೆಟ್ಟಿ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದು ಬಳಿಕ  ಪೆಟ್ರೊಲ್ ನ್ನು ಮಗನ ಮೈ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ತಹ್ಸೀನ್ ಮುತಅಲ್ಲಿಂ ಸಂಗಮ

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ತಹ್ಸೀನ್ ಮುತಅಲ್ಲಿಂ ಸಂಗಮ


ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ತಹ್ಸೀನ್ ಮುತಅಲ್ಲಿಂ ಸಂಗಮ

ಸುರತ್ಕಲ್ ಜೂ 20 : ಎಸ್ಸೆಸ್ಸೆಫ್  ಸುರತ್ಕಲ್ ಡಿವಿಷನ್ ಸಮಿತಿಯು ಜೂನ್ 19 ಹಾಗೂ 20 ಹಮ್ಮಿಕೊಂಡ ಎರಡು ದಿನಗಳ ಆನ್ ಲೈನ್ "ತಹ್ಸೀನ್" ಎಂಬ ಮುತಅಲ್ಲಿಮರಿಗಾಗಿ ಆಯೋಜಿಸಲಾದ ಕಾರ್ಯಕ್ರಮವು ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮರ್ಕಝ್ ಮುದರ್ರಿಸ್ ಮುಹಮ್ಮದ್ ಸಖಾಫಿ ಪರವೂರ್ ಮಲಪ್ಪುರಂ, ಹಾಗೂ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು.

ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ದಅವಾ ಕನ್ವೀನರ್ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ,  ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ 4ನೇ ಬ್ಲಾಕ್ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಸದಸ್ಯ ರಫೀಕ್ 3ನೇ ಬ್ಲಾಕ್, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಫೈನಾನ್ಸ್ ಸೆಕ್ರೆಟರಿ ತೌಸೀಫ್ ಬದ್ರಿಯ ನಗರ ಹಾಗೂ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಕಾರ್ಯಕಾರಿಣಿ ಸಮಿತಿ ಸದಸ್ಯರೂ ಉಪಸ್ಥಿತರಿದ್ದರು.

  ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್  ದಅವಾ ಕಾರ್ಯದರ್ಶಿ ಮುಹಮ್ಮದ್ ಸಿನಾನ್ ಸಖಾಫಿ 3ನೇ ಬ್ಲಾಕ್ ಸ್ವಾಗತಿಸಿ,  ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ದಅವಾ ಕನ್ವೀನರ್ ರವೂಫ್ ಹಿಮಮಿ ಹಳೆಯಂಗಡಿ ವಂದಿಸಿದರು.

Monday, 21 June 2021

 ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ.


ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ.

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಹಾವು ಕಾಣಿಸಿಕೊಂಡಿದ್ದು, ಚಾಲಕರು ಡಿಪೋದಿಂದ ಬಸ್​ ತೆಗೆಯಲು ಭಯ ಪಡುವಂತಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ದಿನಗಟ್ಟಲೆ ಡಿಪೋಗಳಲ್ಲೇ ನಿಲ್ಲಿಸಿರುವ ಬಸ್​ಗಳಲ್ಲಿ ಹಾವು, ಹುಳ, ಹೆಗ್ಗಣಗಳು ಸೇರಿಕೊಂಡಿದ್ದು, ತುಂಬಾ ದಿನಗಳ ಮೇಲೆ ಮೊದಲ ಸಲ ಬಸ್​ ತೆಗೆಯಲು ಮುಂದಾಗುವ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ವಿಧಿಸಿದ್ದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್​ ಸಂಚಾರವೂ ಸ್ಥಗಿತೊಂಡಿತ್ತು. ಹೀಗಾಗಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ಹೆಚ್ಚೂಕಡಿಮೆ ಎರಡು ತಿಂಗಳಿನಿಂದ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಹಾವು-ಹೆಗ್ಗಣಗಳು ಬಸ್​ನೊಳಗೆ ಆಶ್ರಯ ಪಡೆದ ಪ್ರಕರಣಗಳು ಬೆಳಕಿಗೆ ಬಂದಿವೆ.

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

ಇಂದು ತುಮಕೂರು ಡಿಪೋದಲ್ಲಿ ಚಾಲಕರೊಬ್ಬರು ಬಸ್​ ತೆಗೆಯಲು ಮುಂದಾದಾಗ ಹಾವೊಂದು ಚಾಲಕರ ಆಸನದ ಬಳಿಯೇ ಇರುವುದು ಕಂಡುಬಂದಿದೆ. ಕೂಡಲೇ ಪರಿಣತರೊಬ್ಬರನ್ನು ಕರೆಸಿ ಆ ಹಾವನ್ನು ಹಿಡಿದು, ಅಲ್ಲಿಂದ ತೆರವುಗೊಳಿಸಲಾಗಿದೆ.


ದಾವಣಗೆರೆ ಜಿಲ್ಲೆಯಲ್ಲಿ 150 ಮಂದಿ ಗುಣಮುಖ : 176 ಹೊಸ ಪ್ರಕರಣ ಪತ್ತೆ

ದಾವಣಗೆರೆ ಜಿಲ್ಲೆಯಲ್ಲಿ 150 ಮಂದಿ ಗುಣಮುಖ : 176 ಹೊಸ ಪ್ರಕರಣ ಪತ್ತೆ


ದಾವಣಗೆರೆ ಜಿಲ್ಲೆಯಲ್ಲಿ 150 ಮಂದಿ ಗುಣಮುಖ : 176 ಹೊಸ ಪ್ರಕರಣ ಪತ್ತೆ

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ಕೊರೊನಾದಿಂದ 150 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 77 , ಹರಿಹರದಲ್ಲಿ 8, ಜಗಳೂರಿನಲ್ಲಿ 2, ಚನ್ನಗಿರಿಯಲ್ಲಿ 37, ಹೊನ್ನಾಳಿಯಲ್ಲಿ 33 ಹಾಗೂ ಹೊರ ಜಿಲ್ಲೆಯ 9 ಜನರು ಒಳಗೊಂಡಂತೆ 150 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ 176 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 77 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 15, ಜಗಳೂರಿನಲ್ಲಿ 9 , ಚನ್ನಗಿರಿಯಲ್ಲಿ 46, ಹೊನ್ನಾಳಿಯಲ್ಲಿ 16 ಹಾಗೂ ಹೊರ ಜಿಲ್ಲೆಯ 13 ಜನರು ಒಳಗೊಂಡಂತೆ 176 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 25728, ಹರಿಹರದಲ್ಲಿ 6699 , ಜಗಳೂರಿನಲ್ಲಿ 2637, ಚನ್ನಗಿರಿಯಲ್ಲಿ 6059, ಹೊನ್ನಾಳಿಯಲ್ಲಿ 6138, ಹೊರ ಜಿಲ್ಲೆಯ 1447 ಜನರು ಸೇರಿದಂತೆ ಈವರೆಗೆ ಒಟ್ಟು 48,708 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 24521, ಹರಿಹರದಲ್ಲಿ 6191, ಜಗಳೂರಿನಲ್ಲಿ 2655, ಚನ್ನಗಿರಿಯಲ್ಲಿ 5853, ಹೊನ್ನಾಳಿಯಲ್ಲಿ 5646, ಹೊರ ಜಿಲ್ಲೆಯ 1339 ಜನರು ಸೇರಿದಂತೆ 46,505 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1702 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಸೋಮವಾರ ಕೊರೊನಾದಿಂದ ಏಳು ಜನರು ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ 59 ವರ್ಷದ ವ್ಯಕ್ತಿ, ಹೊನ್ನಾಳಿ ತಾಲೂಕಿನ ಶಿಂಗಟಗೆರಿ ಗ್ರಾಮದ 84 ವರ್ಷದ ವಯೋವೃದ್ಧ, ಸಾಸ್ವೇಹಳ್ಳಿ ಗ್ರಾಮದ 70 ವರ್ಷದ ವೃದ್ಧ, ದಾವಣಗೆರೆಯ ಶಾಂತಿನಗರದ 58 ವರ್ಷದ ವ್ಯಕ್ತಿ, ಬಾಷಾ ನಗರದ 54 ವರ್ಷದ ಮಹಿಳೆ, ದಾವಣಗೆರೆ ತಾಲೂಕಿನ ಮತ್ತಿ ಗ್ರಾಮದ 45 ವರ್ಷದ ವ್ಯಕ್ತಿ, ಆಲೂರು ಗ್ರಾಮದ 65 ವರ್ಷದ ವೃದ್ಧ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 501 ಜನರು ಸಾವನ್ನಪ್ಪಿದ್ದಂತಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 107 ಸೋಂಕಿತರು ಸಾಮಾನ್ಯ, 403 ಸೋಂಕಿತರು ಆಕ್ಸಿಜನ್, 16 ಸೋಂಕಿತರು ಎನ್‌ಐವಿ, 49 ಸೋಂಕಿತರು ವೆಂಟಿಲೇಟರ್ 23 ಸೋಂಕಿತರು ವೆಂಟಿಲೇಟರ್ ರಹಿತ, 356ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 412 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

ಮೂವರಲ್ಲಿ ಬ್ಯ್ಲಾಕ್ ಫಂಗಸ್

ಜಿಲ್ಲೆಯಲ್ಲಿ ನಿನ್ನೆ ಮೂವರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ. ಈವರೆಗೆ ಜಿಲ್ಲೆಯಲ್ಲಿ 94 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 29, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 17, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 47 ಜನರು ಗುಣಮುಖರಾಗಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ28, ಎಸ್.ಎಸ್. ಹೈಟೆಕ್‌ನಲ್ಲಿ 17, ಬಾಪೂಜಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ತಲಾ ಒಬ್ಬರು ಒಳಗೊಂಡಂತೆ 47 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

 2 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಿದ ಮಂಡ್ಯ ಜಿಲ್ಲೆ

2 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಿದ ಮಂಡ್ಯ ಜಿಲ್ಲೆ


2 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಿದ ಮಂಡ್ಯ ಜಿಲ್ಲೆ

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ವ್ಯಾಪಾರ ವಹಿವಾಟು, ಜನಜೀವನ ಸಹಜ ಸ್ಥಿತಿಗೆ ಮರಳಿತು. ಕಳೆದೆರಡು ತಿಂಗಳುಗಳಿಂದ ಮುಚ್ಚಿದ್ದ ಅಂಗಡಿಗಳು ತೆರೆದು ವಹಿವಾಟು ನಡೆಸಿದವು, ಸಾರಿಗೆ ಸಂಸ್ಥೆ ಬಸ್‌ಗಳು ಓಡಾಡಿದವು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌, ಸಂಪೂರ್ಣ ಲಾಕ್‌ಡೌನ್‌ ತೆರವುಗೊಂಡಿದ್ದು ಸೋಮವಾರ ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ನಗರದಲ್ಲಿ ಉತ್ಸಾಹದ ವಾತಾವರಣವಿತ್ತು. ಅಂಗಡಿ ಮಾಲೀಕರು, ಸಿಬ್ಬಂದಿ ಬಾಗಿಲು ತೆರೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಜನರು ರಸ್ತೆಗೆ ಇಳಿದಿದ್ದರು. ಸಂಪೂರ್ಣ ಲಾಕ್‌ಡೌನ್‌ ಇದ್ದಾಗ ದಿನದ ನಡುವೆ ನೀಡುತ್ತಿದ್ದ ಬಿಡುವಿನ ದಿನದಲ್ಲಿ ಇರುತ್ತಿದ್ದ ಧಾವಂತ ಇರಲಿಲ್ಲ. ಹೋಟೆಲ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಜನರು ಹೋಟೆಲ್‌ ಒಳಗೆ ತೆರಳಿ ತಿಂಡಿ, ಊಟ ಮಾಡಿದರು. ನಗರದ ಪೇಟೆಬೀದಿ, ವಿವಿ ರಸ್ತೆ, ಆರ್ ಪಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ಗುತ್ತಲು ಸೇರಿದಂತೆ ಎಲ್ಲೆಡೆ ಅಂಗಡಿಗಳು ತೆರೆದಿದ್ದವು.

ಉದ್ಯಾನದಲ್ಲಿ ಜನಸಂದಣಿ: ಮುಂಜಾನೆ ವಿಹಾರಕ್ಕೆ ಅವಕಾಶ ಇರುವ ಕಾರಣ ನಗರದ ಹಲವು ಉದ್ಯಾನಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬಂತು. ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನ, ಜಿಲ್ಲಾ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯ ಜನರು ವಿಹಾರ ನಡೆಸುತ್ತಿದ್ದರು. ಬೆಳಿಗ್ಗೆಯೇ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿತ್ತು. ವಿವಿಧೆಡೆ ವ್ಯಕ್ತಿಗತ ಅಂತರ, ಸರಿಯಾಗಿ ಮಾಸ್ಕ್ ಧರಿಸದಿರುವುದು ಅಲ್ಲಲ್ಲಿ ಕಂಡು ಬಂದಿತು. ವಿವಿಧ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿತ್ತು. ಪೊಲೀಸದ್‌ ಭದ್ರತೆ ಕಡಿಮೆ ಇತ್ತು.

ಸಂಜೆ 5 ಗಂಟೆಗೆ ಬಂದ್‌: ಸಂಜೆ 5 ಗಂಟೆಯಾಗುತ್ತಲೇ ಪೊಲೀಸರು ರಸ್ತೆಗಿಳಿದಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿದರು. ಬಾಗಿಲು ಮುಚ್ಚಿ ಒಳಗೆ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ದಂಡ ವಿಧಿಸಿದರು. ಜಿಲ್ಲೆಯಲ್ಲಿ ನಿತ್ಯ 200 ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಕೊರೊನಾ ನಿಯಮ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ ಎಂದು ಪೊಲೀಸರು ಜಾಗೃತಿ ಮೂಡಿಸಿದರು.

ಮುಗಿಯದ ಭಯ: ಕೆಲವು ಜಿಲ್ಲೆಗಳಲ್ಲಿ ಕಳೆದ ವಾರವೇ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಮಂಡ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿದ್ದ ಕಾರಣ ಮತ್ತೆ ಒಂದು ವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಈಗಲೂ ಕೋವಿಡ್‌ ಪ್ರಕರಣ ಹೆಚ್ಚಿದ್ದು ಸಾರ್ವಜನಿಕರು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದರು.

Sunday, 20 June 2021

 ಲಷ್ಕರ್ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರರನ್ನು ಹೊಡೆದುರುಳಿಸಿದ ಸೇನೆ

ಲಷ್ಕರ್ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರರನ್ನು ಹೊಡೆದುರುಳಿಸಿದ ಸೇನೆ


ಲಷ್ಕರ್ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ್,ಜೂ.21-ಕಣಿವೆ ಪ್ರದೇಶದಲ್ಲಿ ಭದ್ರತಾ ಪಡೆಗಳು ಲಷ್ಕರ್ ಇ ತೋಯ್ಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮುದಾಸಿರ್ ಪಂಡಿತ್ ಸೇರಿದಂತೆ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರೆ ಪ್ರದೇಶದ ಗುಂಡ್‍ಬ್ರಾತ್‍ನಲ್ಲಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಮೂವರು ಕಟ್ಟಾ ಭಯೋತ್ಪಾದಕರನ್ನು ಹೊಡೆದುರುಳಿಸಿವೆ ಎಂದು ಐಜಿಪಿ ವಿಜಯ್‍ಕುಮಾರ್ ತಿಳಿಸಿದ್ದಾರೆ.

ಕಟ್ಟಾ ಭಯೋತ್ಪಾದಕ ಮುದಾಸೀರ್ ಸೇರಿದಂತೆ ಮೂವರು ಉಗ್ರರು ಆಡಗಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಮೂವರನ್ನು ಹತ್ಯೆ ಮಾಡಿವೆ.

ಸೇನೆ ಗುಂಡಿಗೆ ಬಲಿಯಾಗಿರುವ ಮುದಾಸಿರ್ ಇತ್ತಿಚೆಗೆ ಮೂವರು ಪೊಲೀಸರು, ಇಬ್ಬರು ಬಿಜೆಪಿ ಕೌನ್ಸಿಲರ್ಸ್‍ಗಳು ಹಾಗೂ ಇಬ್ಬರು ನಾಗರೀಕರನ್ನು ಹತ್ಯೆ ಮಾಡಿದ್ದ ಮಾತ್ರವಲ್ಲ ಕಣಿವೆಯಲ್ಲಿ ಹಲವಾರು ದುಷ್ಕøತ್ಯಗಳನ್ನು ನಡೆಸಿದ್ದ ಎಂದು ಐಜಿಪಿ ಟ್ವಿಟ್ ಮಾಡಿದ್ದಾರೆ.


  

 ಕೇರಳದಲ್ಲಿ ಭೀಕರ ಅಪಘಾತ; ಕಾರು-ಲಾರಿ ಮುಖಾಮುಖಿ ಢಿಕ್ಕಿ, 5 ಸಾವು

ಕೇರಳದಲ್ಲಿ ಭೀಕರ ಅಪಘಾತ; ಕಾರು-ಲಾರಿ ಮುಖಾಮುಖಿ ಢಿಕ್ಕಿ, 5 ಸಾವು


ಕೇರಳದಲ್ಲಿ ಭೀಕರ ಅಪಘಾತ; ಕಾರು-ಲಾರಿ ಮುಖಾಮುಖಿ ಢಿಕ್ಕಿ, 5 ಸಾವು

ಕೊಚ್ಚಿನ್: ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ ಕಲ್ಲಿಕೋಟೆಯ ರಾಮನಟ್ಟುಕಾರ ಸಮೀಪ ವೈದ್ಯಾರಂಗಡಿ ಬಳಿ ಪುಲಿನ್ಜೋಡ್ ರಸ್ತೆಯಲ್ಲಿ ಇಂದು ಮುಂಜಾನೆ 4.40ರ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರು-ಲಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಪಾಲಕ್ಕಾಡ್ ನ ಚೆರ್ಪುಲ್ಲಸಿರಿ ನಿವಾಸಿಗಳಾದ ನಾಸರ್, ಜುಬೈರ್, ಮುಹಮ್ಮದ್ ಸಾಹೀರ್, ಹಸನಾರ್, ಮತ್ತು ತಾಹಿರ್ ಎಂದು ಗುರುತಿಸಲಾಗಿದೆ. ಐದೂ ಮಂದಿ ಮಹಿಂದ್ರಾ ಬೊಲೆರೋ ವಾಹನದಲ್ಲಿ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯನ್ವಯ ಭಾರಿ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಕಾರು ನೇರವಾಗಿ ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐದೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫೆರೋಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರ ಪ್ರದೇಶದಲ್ಲಿ ಒಂದೇ ದಿನ 13 ಲಕ್ಷ ಮಂದಿಗೆ ಕೊರೋನಾ ಲಸಿಕೆ

ಆಂಧ್ರ ಪ್ರದೇಶದಲ್ಲಿ ಒಂದೇ ದಿನ 13 ಲಕ್ಷ ಮಂದಿಗೆ ಕೊರೋನಾ ಲಸಿಕೆ


ಆಂಧ್ರ ಪ್ರದೇಶದಲ್ಲಿ ಒಂದೇ ದಿನ 13 ಲಕ್ಷ ಮಂದಿಗೆ ಕೊರೋನಾ ಲಸಿಕೆ

ಅಮರಾವತಿ: ಕೋವಿಡ್ ಲಸಿಕೆ ವಿತರಣೆಯಲ್ಲಿ ಆಂಧ್ರ ಪ್ರದೇಶದ ದಾಖಲೆ ಬರೆದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 13 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.

ಈ ಬಗ್ಗೆ ಆಂಧ್ರ ಪ್ರದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಆಂಧ್ರ ಪ್ರದೇಶದ ಎಲ್ಲಾ 13 ಜಿಲ್ಲೆಗಳಲ್ಲಿ 2,200 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ ಸಂಜೆ 8 ರವರೆಗೆ ಸುಮಾರು 13.26 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿನ ಸರ್ಕಾರವು ಲಸಿಕೆ ಪೂರೈಕೆಯನ್ನು ನಿರ್ವಹಿಸಿದರೆ ನಮ್ಮ ವೈದ್ಯಕೀಯ ತಂಡ ಮತ್ತು ಇತರ ಸಿಬ್ಬಂದಿ ಒಂದು ದಿನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಇದು ತೋರಿಸಿದೆ. ಜನವರಿ 16 ರಿಂದ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ 1.10 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 27.29 ಲಕ್ಷ ಎರಡನೇ ಡೋಸ್ ದೊರೆತಿದೆ. ಇಲ್ಲಿವರೆಗೆ 1.37 ಕೋಟಿ ಡೋಸ್ ಗೆ ಏರಿಕೆಯಾಗಿದೆ.


 

 ಜೂ.21ರಿಂದ 3 ಸಾವಿರ ಕೆಎಸ್ಸಾರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಆರಂಭ

ಜೂ.21ರಿಂದ 3 ಸಾವಿರ ಕೆಎಸ್ಸಾರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಆರಂಭ


ಜೂ.21ರಿಂದ 3 ಸಾವಿರ ಕೆಎಸ್ಸಾರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಆರಂಭ

ಬೆಂಗಳೂರು, ಜೂ. 20: ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರಕಾರವು ರಾಜ್ಯದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಮೈಸೂರು ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಸಡಿಲಿಸಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಅನುಮತಿಸಲಾಗಿದೆ ಎಂದು ಕೆಎಸ್ಸಾರ್ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಅದರಂತೆ, ರಾಜ್ಯ ರಸ್ತೆ ಸಾರಿಗೆ ನಿಗಮವು ಜೂ.21ರಿಂದ ಜಾರಿಗೆ ಬರುವಂತೆ ಮೈಸೂರು ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಪ್ರಾರಂಭಿಕವಾಗಿ ಸುಮಾರು 3 ಸಾವಿರ ಬಸ್ಸುಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂತರ್ ರಾಜ್ಯ ಮಾರ್ಗಗಳ ಕಾರ್ಯಾಚರಣೆಯ ಬಗ್ಗೆ ಆಯಾ ರಾಜ್ಯಗಳ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

 ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ ಬ್ಯಾಟಿಂಗ್‌ ಕುಸಿತ ; ಸಂಕಟದಲ್ಲಿ ವೆಸ್ಟ್‌ ಇಂಡೀಸ್‌

ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ ಬ್ಯಾಟಿಂಗ್‌ ಕುಸಿತ ; ಸಂಕಟದಲ್ಲಿ ವೆಸ್ಟ್‌ ಇಂಡೀಸ್‌


ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ ಬ್ಯಾಟಿಂಗ್‌ ಕುಸಿತ ; ಸಂಕಟದಲ್ಲಿ ವೆಸ್ಟ್‌ ಇಂಡೀಸ್‌

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ) : ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿರುವ ವೆಸ್ಟ್‌ ಇಂಡೀಸ್‌ ತೀವ್ರ ಸಂಕಟಕ್ಕೆ ಸಿಲುಕಿದೆ.

ಮೊದಲ ಟೆಸ್ಟ್‌ ಪಂದ್ಯವನ್ನು ಬ್ಯಾಟಿಂಗ್‌ ವೈಫ‌ಲ್ಯದಿಂದಲೇ ಕಳೆದುಕೊಂಡ ವಿಂಡೀಸ್‌, ದ್ವಿತೀಯ ಪಂದ್ಯದಲ್ಲೂ ಇದೇ ತಪ್ಪನ್ನು ಪುನರಾವರ್ತಿಸಿ ಕೇವಲ 149ಕ್ಕೆ ಕುಸಿಯಿತು. ಜವಾಬಿತ್ತ ಹರಿಣಗಳ ಪಡೆ ದ್ವಿತೀಯ ದಿನದಾಟದ ಅಂತ್ಯಕ್ಕೆ ವಿಂಡೀಸ್‌ ಸ್ಕೋರ್‌ನ ಎರಡರಷ್ಟು ಮೊತ್ತವನ್ನು ಗಳಿಸಿ ಆಲೌಟ್‌ ಆಗಿದೆ (298). 149 ರನ್‌ ಮುನ್ನಡೆಯೊಂದಿಗೆ ಕೆರಿಬಿಯನ್ನರ ಮೇಲೆ ಸವಾರಿ ಮಾಡುವ ಯೋಜನೆ ಪ್ರವಾಸಿಗರದು. ಆರಂಭಿಕ ಆಘಾತಕ್ಕೆ ಒಳಗಾದ ದಕ್ಷಿಣ ಆಫ್ರಿಕಾಕ್ಕೆ ನಾಯಕ ಡೀನ್‌ ಎಲ್ಗರ್‌ (77) ಮತ್ತು ಕೀಪರ್‌ ಕ್ವಿಂಟನ್‌ ಡಿ ಕಾಕ್‌ (96) ಆಸರೆಯಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-149 (ಬ್ಲ್ಯಾಕ್‌ವುಡ್‌ 49, ಹೋಪ್‌ 43, ಮುಲ್ಡರ್‌ 1ಕ್ಕೆ 3, ಎನ್‌ಗಿಡಿ 27ಕ್ಕೆ 2, ರಬಾಡ 24ಕ್ಕೆ 2, ಮಹಾರಾಜ್‌ 47ಕ್ಕೆ 2). ದಕ್ಷಿಣ ಆಫ್ರಿಕಾ-298 (ಡಿ ಕಾಕ್‌ 96, ಎಲ್ಗರ್‌ 77, ವೆರೈನ್‌ 27, ಮೇಯರ್ 28ಕ್ಕೆ 3, ರೋಚ್‌ 45ಕ್ಕೆ 2, ಗ್ಯಾಬ್ರಿಯಲ್‌ 65ಕ್ಕೆ 2 ವಿಕೆಟ್‌).