Monday, 31 May 2021

ಬಂದೂಕಿನಿಂದ ಹೊಡೆದು ಕಾಡೆಮ್ಮೆ ಸಾವು : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಅರಣ್ಯ ಅಧಿಕಾರಿಗಳು


ಬಂದೂಕಿನಿಂದ ಹೊಡೆದು ಕಾಡೆಮ್ಮೆ ಸಾವು : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಅರಣ್ಯ ಅಧಿಕಾರಿಗಳು

ಶಂಕರನಾರಾಯಣ : ಬಂದೂಕಿನಿಂದ ಹೊಡೆದು ನಾಲ್ಕು ವರ್ಷದ ಕಾಡೆಮ್ಮೆಯನ್ನು ಕೊಂದಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ದೊಡ್ಡಬೆಳ್ಳಾರ್ ಎಂಬಲ್ಲಿ ರವಿವಾರ ರಾತ್ರಿ ಘಟನೆ ನಡೆದಿದ್ದು ಸೋಮವಾರ ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ, ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯತಿಗೆ ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ತಿಳಿದ ಕೂಡಲೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾಡೆಮ್ಮೆಯನ್ನು ಪೋಸ್ಟ್ ಮಾರ್ಟಂ ಮಾಡಿ ದಪ್ಪನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯ ಅರಣ್ಯಧಿಕಾರಿ ಚಿದಾನಂದಪ್ಪ, ಹೆಂಗವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಘುರಾಮ್ ಶೆಟ್ಟಿ ತೊoಬತ್ತು ಹಾಗೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.SHARE THIS

Author:

0 التعليقات: