Saturday, 29 May 2021

ನೆತನ್ಯಾಹು ಆಡಳಿತಕ್ಕೆ ಕುತ್ತು ? ಲ್ಯಾಪಿಡ್ ಜೊತೆಗೂಡಿ ಇಸ್ರೇಲ್ ನಲ್ಲಿ ನೂತನ ಸರಕಾರ ರಚಿಸಲು ಒಪ್ಪಿದ ಬೆನ್ನೆಟ್


ನೆತನ್ಯಾಹು ಆಡಳಿತಕ್ಕೆ ಕುತ್ತು ?   ಲ್ಯಾಪಿಡ್ ಜೊತೆಗೂಡಿ ಇಸ್ರೇಲ್ ನಲ್ಲಿ ನೂತನ ಸರಕಾರ ರಚಿಸಲು ಒಪ್ಪಿದ ಬೆನ್ನೆಟ್ 

ಜೆರುಸಲೆಂ: ಯಮಿನ ನಾಯಕ ನಫ್ತಾಲಿ ಬೆನ್ನೆಟ್ಟ್ ಅವರು ಯೆಶ್ ಅತಿದ್ ಮುಖ್ಯಸ್ಥ ಯಾಯಿರ್ ಲ್ಯಾಪಿಡ್ ಅವರ ಜತೆಗೂಡಿ ಇಸ್ರೇಲ್‍ನಲ್ಲಿ ಮೈತ್ರಿ ಸರಕಾರ ರಚಿಸಲು ಒಪ್ಪಿದ್ದಾರೆ ಎಂದು The Jerusalem Post ವರದಿ ಮಾಡಿದೆ.

ಒಪ್ಪಂದದಂತೆ ಬೆನ್ನೆಟ್ಟ್ ಅವರು ಮೊದಲು ಪ್ರಧಾನಿಯಾಗಿ ಸೆಪ್ಟೆಂಬರ್ 2023ರ ತನಕ ಸೇವೆ ಸಲ್ಲಿಸಲಿದ್ದು, ನಂತರ ಲ್ಯಾಪಿಡ್ ಅವರು ನವೆಂಬರ್ 2025ರ ತನಕ ಪ್ರಧಾನಿಯಾಗಲಿದ್ದಾರೆ.

ಪ್ರತಿಜ್ಞಾವಿಧಿ ಸಮಾರಂಭ ಜೂನ್ 7ರಂದು ನಡೆಯುವ ನಿರೀಕ್ಷೆಯಿದ್ದು ಶನಿವಾರ ರಾತ್ರಿ ಅಥವಾ ರವಿವಾರ ಹೊಸ ಸರಕಾರ ರಚನೆ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಬೆನ್ನೆಟ್ಟ್ ಅವರು ಬಲಪಂಥೀಯ ಸರಕಾರವನ್ನು ತಿರಸ್ಕರಿಸಿ ಎಡರಂಗದ ಸರಕಾರದ ಪ್ರಧಾನಿಯಾಗಲು ಬಯಸುತ್ತಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆರೋಪದ ಬೆನ್ನಲ್ಲೇ ಮೇಲಿನ ಬೆಳವಣಿಗೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ನೆತನ್ಯಾಹು ಅವರು ಮೂರು ನಿಮಿಷ ಅವಧಿಯ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಅವರು ಲಿಕುಡ್ ಹಾಗೂ ಯಮೀನಾ ಸಂಧಾನಕಾರರು ಮಹತ್ವದ ಒಪ್ಪಂದಕ್ಕೆ ಮುಂದಾಗಿದ್ದಾರೆ ಆದರೆ ಬೆನ್ನೆಟ್ಟ್ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದಿದ್ದರು.

ಈ ಒಪ್ಪಂದದಂತೆ  ಬಹುಮತಕ್ಕೆ ಅಗತ್ಯವಿರುವ ಎರಡು ಸದಸ್ಯರ ಕೊರತೆಯೊಂದಿಗೆ ಮೈತ್ರಿ ಸರಕಾರ 59 ಸದಸ್ಯರ ಬೆಂಬಲ ಹೊಂದಲಿದೆ. ಬೆನ್ನೆಟ್ಟ್ ಅವರು ಅಲ್ಪಮತದ ಸರಕಾರ ರಚಿಸಲು ನಿರಾಕರಿಸಿದ್ದರಲ್ಲದೆ ಇಬ್ಬರು ಪಕ್ಷಾಂತರಿಗಳನ್ನು ಹುಡುಕುವಂತೆ ನೆತನ್ಯಾಹು ಅವರನ್ನು ಆಗ್ರಹಿಸಿದ್ದರು.SHARE THIS

Author:

0 التعليقات: