Saturday, 8 May 2021

ಲಕ್ಷಾಂತರ ಜನರು ಭಾಗವಹಿಸುವ ಮದನೀಯಂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಇಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ


 ಲಕ್ಷಾಂತರ ಜನರು ಭಾಗವಹಿಸುವ ಮದನೀಯಂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ 
ಇಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಇಂದು ನಡೆಯಲಿರುವ ಮದನೀಯಂ ಆಧ್ಯಾತ್ಮಿಕ ಆನ್ಲೈನ್ ಕಾರ್ಯಕ್ರಮದಲ್ಲಿ ಸುನ್ನೀ ಮುಸ್ಲಿಂಗಳ ಆವೇಶ ಶಬ್ದ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. 

ಪ್ರಸಿದ್ಧ ಆನ್ಲೈನ್ ಭಾಷಣಗಾರ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ರವರ ನೇತೃತ್ವದಲ್ಲಿ  ಪ್ರತಿ ದಿನವೂ ಆನ್ಲೈನ್ ಮೂಲಕ ನಡೆಯುವ ಮದನೀಯಂ ಆಧ್ಯಾತ್ಮಿಕ ಕಾರ್ಯಕ್ರಮ ಲಕ್ಷಾಂತರ ಜನರ ಸಮಾಧಾನದ ಕೇಂದ್ರವಾಗಿದೆ.

ಪವಿತ್ರ ರಂಝಾನಿನ ವಿಶೇಷ ರಾತ್ರಿಯೂ ಆಗಿರುವ ರಂಝಾನ್ 27 (ಇಂದು ರಾತ್ರಿ) ಮದನೀಯಂ ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: