Saturday, 1 May 2021

ಕೋವಿಡ್ ಪರಿಸ್ಥಿತಿ ಹಿನ್ನೆಲೆ:ಫಲಿತಾಂಶ ದಿನದ ಟಿವಿ ಚರ್ಚೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧಾರ


 ಕೋವಿಡ್ ಪರಿಸ್ಥಿತಿ ಹಿನ್ನೆಲೆ:ಫಲಿತಾಂಶ ದಿನದ ಟಿವಿ ಚರ್ಚೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧಾರ

ಹೊಸದಿಲ್ಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿರುವ ರವಿವಾರದಂದು  ದೂರದರ್ಶನದಲ್ಲಿ ಚುನಾವಣಾ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಶನಿವಾರ ನಿರ್ಧರಿಸಿದೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಮಾತನಾಡಿ, “ದೇಶದ ಗಂಭೀರ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ವಕ್ತಾರರು ಮತದಾನ ಫಲಿತಾಂಶಗಳು ಹೊರಬಂದ ನಂತರ ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದರು.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 2 ರಂದು ಪ್ರಕಟವಾಗುತ್ತಿದೆ.

“ದೇಶವು ಹಿಂದೆಂದೂ ಕಾಣದ  ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದ ಸರಕಾರವು ಕುಸಿದಿರುವಾಗ, ಅವರನ್ನು ಹೊಣೆಗಾರರನ್ನಾಗಿ ಮಾಡದಿರುವುದು ಸ್ವೀಕಾರಾರ್ಹವಲ್ಲ ನಮ್ಮ ವಕ್ತಾರರನ್ನು ಚುನಾವಣಾ ಚರ್ಚೆಗಳಿಂದ ಹಿಂತೆಗೆದುಕೊಳ್ಳಲು ನಾವು  ನಿರ್ಧರಿಸಿದ್ದೇವೆ"ಎಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್‌ಗೆ ನಾವು ಲಭ್ಯವಿರುತ್ತೇವೆ. ನಾವು ಗೆಲ್ಲಬಹುದು, ನಾವು ಸೋಲಬಹುದು, ಆದರೆ ಜನರು ಆಮ್ಲಜನಕ, ಹಾಸಿಗೆಗಳು, ಔಷಧಿಗಳು, ವೆಂಟಿಲೇಟರ್‌ಗಳನ್ನು ಹುಡುಕುತ್ತಿರುವ ಸಮಯದಲ್ಲಿ; ಅವರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಅವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.


SHARE THIS

Author:

0 التعليقات: