Wednesday, 19 May 2021

ಇಂದು ಪಿಣರಾಯಿ ಪ್ರಮಾಣ : ಸಿಪಿಎಂ ನಾಯಕಿ ವೀಣಾ ಜಾರ್ಜ್‌ ಆರೋಗ್ಯ ಸಚಿವೆ


ಇಂದು ಪಿಣರಾಯಿ ಪ್ರಮಾಣ : ಸಿಪಿಎಂ ನಾಯಕಿ ವೀಣಾ ಜಾರ್ಜ್‌ ಆರೋಗ್ಯ ಸಚಿವೆ

ತಿರುವನಂತಪುರ: ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ 2.0 ಸರಕಾರ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದೆ. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ನೂತನ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಕೆ.ಕೆ.ಶೈಲಜಾ ಅವರ ಸ್ಥಾನಕ್ಕೆ ಸಿಪಿಎಂ ಶಾಸಕಿ ವೀಣಾ ಜಾರ್ಜ್‌ ಅವರನ್ನು ಆರೋಗ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಸಿಎಂ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಅಲ್ಪಸಂಖ್ಯಾಕರ ಅಭಿವೃದ್ಧಿ ಖಾತೆಯನ್ನು ಇರಿಸಿಕೊಂಡಿದ್ದಾರೆ.

ಕೆ.ಎನ್‌.ಬಾಲಗೋಪಾಲ್‌ (ವಿತ್ತ), ಪಿ.ರಾಜೀವ್‌ (ಕೈಗಾರಿಕೆ ಮತ್ತು ಕಾನೂನು), ಎಂ.ವಿ.ಗೋವಿಂದನ್‌ (ಸ್ಥಳೀಯಾಡಳಿತ ಮತ್ತು ಅಬಕಾರಿ), ವಿ.ಶಿವನ್‌ ಕುಟ್ಟಿ (ಶಿಕ್ಷಣ ಮತ್ತು ಕಾರ್ಮಿಕ), ಆರ್‌.ಬಿಂದು (ಉನ್ನತ ಶಿಕ್ಷಣ), ಸಜಿ ಚೆರಿಯನ್‌ (ಮೀನುಗಾರಿಕೆ ಮತ್ತು ಸಂಸ್ಕೃತಿ), ಪಿ.ಎ.ಮೊಹಮ್ಮದ್‌ ರಿಯಾಜ್‌ (ಲೋಕೋಪ ಯೋಗಿ ಮತ್ತು ಪ್ರವಾಸೋದ್ಯಮ), ಕೆ.ರಾಧಾ ಕೃಷ್ಣನ್‌ (ಮುಜರಾಯಿ ಮತ್ತು ಸಂಸದೀಯ ವ್ಯವಹಾರಗಳು, ಎಸ್‌ಸಿ-ಎಸ್‌ಟಿ ಮತ್ತು ಹಿಂದು ಳಿದ ವರ್ಗಗಳ ಕಲ್ಯಾಣ), ವಿ.ಎನ್‌.ವಾಸವನ್‌ (ಸಹಕಾರ ಮತ್ತು ನೋಂದಣಿ), ವಿ.ಅಬ್ದುರ್‌ರೆಹಮಾನ್‌ (ಕ್ರೀಡೆ, ವಕ್ಫ್ ಮತ್ತು ಹಜ್‌), ರೋಶಿ ಅಗಸ್ಟಿನ್‌ (ಜಲಸಂಪನ್ಮೂಲ), ಕೆ.ಕೃಷ್ಣನ್‌ ಕುಟ್ಟಿ (ವಿದ್ಯುತ್‌), ಅಹ್ಮದ್‌ ದೇವರಕೋವಿಲ್‌ (ಬಂದರು, ವಸ್ತುಸಂಗ್ರಹಾಲಯ ಮತ್ತು ಪ್ರಾಚ್ಯ ವಸ್ತು ಇಲಾಖೆ), ಕೆ.ರಾಜನ್‌ (ಕಂದಾಯ), ಜಿ.ಆರ್‌.ಅನಿಲ್‌ (ಆಹಾರ ಮತ್ತು ನಾಗರಿಕ ಪೂರೈಕೆ), ಚಿಂಚು ರಾಣಿ (ಪಶು ಸಂಗೋಪನೆ ಮತ್ತು ಹೈನುಗಾರಿಕೆ), ಕೆ. ಪ್ರಸಾದ್‌ (ಕೃಷಿ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿ ದ್ದಾರೆ. ಸಾರಿಗೆ ಖಾತೆಗೆ ಇನ್ನೂ ನೇಮಕವಾಗಿಲ್ಲ.

ಸಂಪುಟದಲ್ಲಿ ಎಲ್ಲರೂ ಹೊಸಬರೇ ಆಗಿದ್ದಾರೆ. ಜೆಡಿಎಸ್‌, ಎನ್‌ಸಿಪಿ 1 ಸ್ಥಾನ ಪಡೆದಿವೆ. ಕಾರ್ಯ ಕ್ರಮಕ್ಕೆ ಯುಡಿಎಫ್ ಮತ್ತು ಬಿಜೆಪಿ ನಾಯಕರು ಗೈರುಹಾಜರಾಗಲಿದ್ದಾರೆ.SHARE THIS

Author:

0 التعليقات: