Friday, 28 May 2021

ಯಾಸ್ ಚಂಡಮಾರುತ : ಮೂರು ರಾಜ್ಯಗಳಿಗೆ ಸಾವಿರ ಕೋಟಿ ರೂ. ಕೇಂದ್ರ ನೆರವು


ಯಾಸ್ ಚಂಡಮಾರುತ : ಮೂರು ರಾಜ್ಯಗಳಿಗೆ ಸಾವಿರ ಕೋಟಿ ರೂ. ಕೇಂದ್ರ ನೆರವು

ಭುವನೇಶ್ವರ : ಯಾಸ್ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಒಂದು ಸಾವಿರ ಕೋಟಿ ರೂ. ನೆರವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ಒಡಿಶಾದ ಭದ್ರಕ್ ಮತ್ತು ಬಲಸೋರ್ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಈ ನೆರವು ಘೋಷಿಸಿದರು. ಒಡಿಶಾಗೆ ತಕ್ಷಣವೇ 500 ಕೋಟಿ ರೂಪಾಯಿ ಲಭ್ಯವಾಗಲಿದ್ದು, ಉಳಿದ 500 ಕೋಟಿಯನ್ನು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಹಂಚಿಕೊಳ್ಳಲಿವೆ. ಆಯಾ ರಾಜ್ಯಗಳಲ್ಲಿ ಆಗಿರುವ ಹಾನಿಯ ವರದಿ ಆಧರಿಸಿ ಈ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಕೋಪದಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ನೆರವನ್ನೂ ಪ್ರಧಾನಿ ಘೋಷಿಸಿದರು.

ಒಡಿಶಾ ಸರ್ಕಾರದ ಸರ್ವಸನ್ನದ್ಧತೆ ಮತ್ತು ವಿಕೋಪ ನಿರ್ವಹಣೆಯನ್ನು ಶ್ಲಾಘಿಸಿದ ಮೋದಿ, ಇದರಿಂದಾಗಿ ಕನಿಷ್ಠ ಜೀವಹಾನಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಹಣಕಾಸು ಆಯೋಗ ಸುಮಾರು 30 ಸಾವಿರ ಕೋಟಿ ರೂ. ವಿಕೋಪ ತಡೆಗಾಗಿ ನೀಡಿರುವುದನ್ನು ಮೋದಿ ಶ್ಲಾಘಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ, ಚಂಡಮಾರುತದಿಂದ ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ವಿವರ ಸಲ್ಲಿಸಿದರು. ಆದರೆ ಪ್ರಧಾನಿ ಇದ್ದ ಪರಾಮರ್ಶನಾ ಸಭೆಗೆ ಮಮತಾ ಗೈರುಹಾಜರಾಗಿದ್ದರು. ರಾಜ್ಯಪಾಲ ಜಗದೀಪ್ ಧನ್‌ಕರ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಭಾಗವಹಿಸಿದ್ದರು.SHARE THIS

Author:

0 التعليقات: