Wednesday, 19 May 2021

ರಾಜ್ಯದಲ್ಲಿ ಇಬ್ಬರು ಕೊರೋನಾ ವಾರಿಯರ್ಸ್ 'ಬ್ಲ್ಯಾಕ್ ಫಂಗಸ್'ಗೆ ಬಲಿ


ರಾಜ್ಯದಲ್ಲಿ ಇಬ್ಬರು ಕೊರೋನಾ ವಾರಿಯರ್ಸ್ 'ಬ್ಲ್ಯಾಕ್ ಫಂಗಸ್'ಗೆ ಬಲಿ

ಮೈಸೂರು : ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ನಂತ್ರ, ಸೋಂಕಿತರಾದಂತ ಕೆಲವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲುತ್ತಿದೆ. ಹೀಗೆ ಬ್ಲ್ಯಾಕ್ ಫಂಗಸ್ ತಗುಲಿದ್ದರಿಂದಾಗಿ ಈಗಾಗಲೇ 9 ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆಬ್ಬರು ಕೊರೋನಾ ವಾರಿಯರ್ಸ್ ಗಳನ್ನು ಬಲಿ ಪಡೆದಿದೆ.

ಇಂದು ಸಿಎಂ ಯಡಿಯೂರಪ್ಪ 'ವಿಶೇಷ ಆರ್ಥಿಕ ಪ್ಯಾಕೇಜ್' ಘೋಷಣೆ : ಯಾರಿಗೆಲ್ಲಾ ಆರ್ಥಿಕ ನೆರವು ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೋನಾ ಸೋಂಕಿತರಾದಂತ ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿಗಳು, ಈಗ ಬ್ಲ್ಯಾಕ್ ಫಂಗಸ್ ಸೋಂಕಿನಿಂದಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಬ್ಲ್ಯಾಕ್ ಫಂಗಸ್ ಗೆ ಸಾವನ್ನಪ್ಪಿದವರನ್ನು ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ನೌಕರರಾದಂತ ವಿನೋದ್ ಹಾಗೂ ರವಿ ಎಂದು ಗುರ್ತಿಸಲಾಗಿದೆ.

ಅಂದಹಾಗೇ, ಬ್ಲ್ಯಾಕ್ ಫಂಗಸ್ ನಿಂದ ಸಾವನ್ನಪ್ಪಿದಂತ ರವಿ ಪಾಲಿಕೆಯಲ್ಲಿ ಕೊರೋನಾ ಸೋಂಕಿತರ ಶವ ಸಾಗಿಸುವಂತ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಫಾಗಿಂಗ್ ಆಟೋ ಚಾಲಕನಾಗಿದ್ದ ವಿನೋದ್ ಮೂರು ದಿನಗಳ ಹಿಂದೆ ಸೋಂಕು ತಗುಲಿತ್ತು. ಹೀಗೆ ಕೊರೋನಾ ಸೋಂಕಿತರಾದಂತ ಇಬ್ಬರಿಗೂ ಕೊರೋನಾ ನಂತ್ರ ಬ್ಲ್ಯಾಕ್ ಫಂಗಸ್ ತಗುಲಿ, ಸಾವನ್ನಪ್ಪಿದ್ದಾರೆ.SHARE THIS

Author:

0 التعليقات: