Saturday, 22 May 2021

ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನ ಸುರಕ್ಷಿತ ತಾಣಕ್ಕೆ ಸ್ಥಳಾಂತರ


ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನ ಸುರಕ್ಷಿತ ತಾಣಕ್ಕೆ ಸ್ಥಳಾಂತರ

ಗೋಮಾ : ಕಾಂಗೋ ರಾಷ್ಟ್ರದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಜನ ಸುರಕ್ಷಿತ ತಾಣಕ್ಕೆ ತೆರಳುತ್ತಿದ್ದಾರೆ. ಕಾಂಗೋದ ಗೋಮಾ ನಗರ ಸಮೀಪವಿರುವ ಮೌಂಟ್ ನೈರಾಗೊಂಗೊದಲ್ಲಿ ಜ್ವಾಲಾಮುಖಿ ಹೊರಚಿಮ್ಮಿದೆ.

ರಾತ್ರೋರಾತ್ರಿ ಜ್ವಾಲಾಮುಖಿಯನ್ನು ಕಂಡ ಗೋಮಾ ನಗರ ಹಾಗೂ ಸುತ್ತಮುತ್ತಲಿನ ಜನರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಗೋಮಾದಲ್ಲಿ 20 ಲಕ್ಷಕ್ಕೂ ಹೆಚ್ಚು​ ಜನರಿದ್ದು, ಸದ್ಯಕ್ಕೆ ಯಾವುದೇ ಸಾವುನೋವು ಉಂಟಾಗಿಲ್ಲ.

ಉತ್ತರ ಕಿವು ಪ್ರಾಂತ್ಯದ ಬೆನಿ ನಗರದಿಂದ ಗೋಮಾವನ್ನು ಸಂಪರ್ಕಿಸುವ ಒಂದು ಹೆದ್ದಾರಿಯನ್ನು ಲಾವಾ ಈಗಾಗಲೇ ಆವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಾಲಗಾರರಿಗೆ ಜಾಮೀನು ಹಾಕಿದವರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ : ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪುSHARE THIS

Author:

0 التعليقات: