Monday, 17 May 2021

ಚಲಿಸುತ್ತಿದ್ದ ಬೈಕ್ ಗಳ ಮೇಲೆ ಉರುಳಿದ ಮರ: ಮೂವರಿಗೆ ಗಂಭೀರ ಗಾಯ


ಚಲಿಸುತ್ತಿದ್ದ ಬೈಕ್ ಗಳ ಮೇಲೆ ಉರುಳಿದ ಮರ: ಮೂವರಿಗೆ ಗಂಭೀರ ಗಾಯ

ಶಿವಮೊಗ್ಗ: ಚಲಿಸುತ್ತಿದ್ದ ಬೈಕ್ ಗಳ‌ ಮೇಲೆ ಮರ ಉರುಳಿ ಬಿದ್ದಿದ್ದು ಮೂವರಿಗೆ ಗಾಯವಾದ ಘಟನೆ ಹೊಸನಗರದ ಕೊಡಚಾದ್ರಿ ಕಾಲೇಜು ಬಳಿ ಸಂಭವಿಸಿದೆ.

ಬಾರಿ ಗಾಳಿ ಮಳೆಗೆ ಮರ ಉರುಳಿ ಬಿದ್ದಿದ್ದು, ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ಗಳ‌ ಮೇಲೆ ಮರ ಬಿದ್ದಿದೆ. ಬೈಕ್ ಸವಾರ ಮಾವಿನಕೊಪ್ಪ ಬಡಾವಣೆಯ ಸಾದಿಕ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೋರ್ವ ಬೈಕ್ ಸವಾರ ಪ್ರತೀಕ್ ಹಾಗೂ ನಡೆದುಕೊಂಡು ಹೋಗುತ್ತಿದ್ದ ಋತ್ವಿಕ್ ಎಂಬುವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ‌ ಮರ ಬಿದ್ದಿದ್ದರಿಂದ ಹೊಸನಗರ ಹಾಗೂ ಶಿವಮೊಗ್ಗ ನಡುವೆ  ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.SHARE THIS

Author:

0 التعليقات: